spot_img
spot_img

ಉಮಾಭಾಯಿ ಸ್ವಾಮಿ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

Must Read

spot_img
- Advertisement -

ಮೂಡಲಗಿ: ಪಟ್ಟಣದ ಶ್ರೀ ಕಲ್ಮೇಶ್ವರಬೋಧ ಶಿಕ್ಷಣ ಸಂಸ್ಥೆಯ ಉಮಾಭಾಯಿ ಸ್ವಾಮಿ ಪ್ರೌಢಶಾಲೆಯಲ್ಲಿ  ಶುಕ್ರವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರದ್ಧಾ ಮಂಜುನಾಥ್ ಕಮ್ಮಾರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಿಮಿತ್ತ ಮಕ್ಕಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು   ಮತ್ತು ವಿದ್ಯಾರ್ಥಿ ಪಾಲಕರನ್ನು ತಂಬಾಕು ಸೇವನೆಯಿಂದ ದೂರವಿರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

- Advertisement -

ಪೂಜ್ಯ ಡಾ.ವಿರೇಂದ್ರ ಹೆಗಡೆ ಅವರು ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಶಿಕ್ಷಕರ ನೇಮಕದ ಜೊತೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತಾಲೂಕಿನ ಎರಡು ಕೇಂದ್ರಗಳಲ್ಲಿ ಮೂರು ತಿಂಗಳ ಕಾಲ ತರಬೇತಿಯನ್ನು ನೀಡುತ್ತಿರುವುದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣದ ಸಮುದಾಯ ಆರೋಗ್ಯಕೇಂದ್ರ ಯಲ್ಲೇಶಕುಮಾರ್ ಹುಕ್ಕೇರಿ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗವು ಬರುತ್ತಿದ್ದು, ಮಾದಕ ವಸ್ತುಗಳನ್ನು ನಾವು ಯಾವ ರೀತಿ ನಿಷೇಧ ಮಾಡಬೇಕು ಹಾಗೂ ಅದರ ಸೇವನೆಯಿಂದ ಯಾವ ಯಾವ ಪರಿಣಾಮಗಳು ಬೀರುತ್ತವೆ ಅವುಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಮತಿ ಕೆ.ಆರ್. ಫಿರೋಜಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಯಾರಾದರು ತಂಬಾಕು ಸೇವನೆ ಮಾಡುತ್ತಿರುವರು ಇದ್ದರೆ ತಂಬಾಕು ಸೇವನೆ ನಿಲ್ಲಿಸಲು ಪ್ರಯತ್ನ ಪಟ್ಟರೆ ಖಂಡಿತ ತಮ್ಮ ಮಾತನ್ನು ಮೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಡಿಸಿದರು. 

- Advertisement -

ತಂಬಾಕು ಸೇವನೆಯಿಂದಾಗಿ ನಮ್ಮ ಶರೀರ ಹಾಗೂ ಜೀವನವೇ ನಾಶವಾಗುವ ಸಂದರ್ಭ ಬರುತ್ತದೆ, ಆ ದುಶ್ಚಟಗಳಿಂದ ದೂರವಿದ್ದು ನಾವು ಉತ್ತಮ ಪರಿಸರದಲ್ಲಿ ಬೆಳೆಯಬೇಕೆಂದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಎಂ.ಕೆಂಚನ್ನವರ, ಯೋಜನೆಯ ಮೂಡಲಗಿ ವಲಯದ ಸೇವಾ ಪ್ರತಿನಿಧಿ ಮಂಜುಳಾ ಢವಳೇಶ್ವರ, ಶಿಕ್ಷಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಶ್ವರ್ಯ ಕಡಕೋಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಬಿ.ಎನ್.ಧರ್ಮಟ್ಟಿ ನಿರೂಪಿಸಿ ವಂದಿಸಿದರು

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group