ಸಿಂದಗಿ: ವೈದ್ಯರು ಜನರಿಗೆ ತಪಾಸಣೆಯ ಮೂಲಕ ಉಪಚರಿಸಿದರೆ ಔಷಧಿಕಾರರು ವಯಸ್ಸಿನ ತಕ್ಕಂತೆ ಔಷಧಿಯನ್ನು ನೀಡುತ್ತಾರೆ ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿಯೂ ಆರೋಗ್ಯವನ್ನು ಸುಧಾರಿಸುವಲ್ಲಿ ಔಷಧಿಕಾರರ ಪಾತ್ರವನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಔಷದಾಲಯ ತಜ್ಞಾಧಿಕಾರಿ ಶ್ರೀಶೈಲ ಪರೀಟ್ ಹೇಳಿದರು.
ಪಟ್ಟಣದ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಶ್ರೀ ಸಂಗಮೇಶ್ವರ ಪಾರ್ಮಸಿ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ವ ಔಷಧಿಕಾರರ ದಿನಾಚರಣೆಯ ಕಾರ್ಯಕ್ರಮವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಔಷದಾಲಯ ತಜ್ಞಾಧಿಕಾರಿ ಶ್ರೀಶೈಲ ಪರೀಟ್ ಉದ್ಘಾಟಿಸಿ ಮಾತನಾಡಿ, ಔಷಧಿ ತಜ್ಞ ಎನ್ನುವುದು ಆರೋಗ್ಯ ರಕ್ಷಣೆ ವೃತ್ತಿಪರ ಪರವಾನಿಗೆಯಾಗಿದ್ದು, ಔಷಧಿಗಳನ್ನು ವಿತರಣೆ ಮಾಡುವುದು, ಲಸಿಕೆಗಳನ್ನು ನೀಡುವುದು, ಆಹಾರ ಪೂರಕಗಳ ಸರಿಯಾದ ಬಳಕೆಯ ರೋಗಿಗಳಿಗೆ ಸಲಹೆ ನೀಡುವುದು ಸೇರಿದಂತೆ ಕರ್ತವ್ಯಗಳೊಂದಿಗೆ ಔಷಧಾಲಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.
ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಎಂ.ಹಂಗರಗಿ ಮಾತನಾಡಿ, ಡಾಕ್ಟರ ಡೈಂಗ್ನೋಸ್ ಮಾಡುತ್ತಾರೆ ಆದರೆ ರೋಗಕ್ಕೆ ತಕ್ಕಂತೆ ಔಷಧಿ ನೀಡುವ ಔಷಧಿಕಾರರ ಕಾರ್ಯ ಅಮೋಘವಾದದ್ದು ಅದಕ್ಕೆ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪರಿಣಿತಿಯನ್ನು ಪಡೆದು ಅನುಭವ ಪಡೆದುಕೊಳ್ಳಬೇಕು ಅಂದಾಗ ಔಷಧಾಲಯದಲ್ಲಿ ಬೇರೆ ಬೇರೆ ಆಯಾಮಗಳನ್ನು ಕಲಿತು ಜನರಿಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಉಪನ್ಯಾಸಕ ಮಹಾಂತೇಶ ನೂಲಾನವರ ಹಾಗೂ ಇಸ್ಮಾಯಿಲ್ ಶೇಖ್ ಮಾತನಾಡಿ, ವೃತ್ತಿಪರ ಶಿಕ್ಷಣದ ಉದ್ದೇಶವು ವಿದ್ಯಾರ್ಥಿಯನ್ನು ತನ್ನನ್ನು ತಾನೇ ರಕ್ಷಿಸಿಕೊಳ್ಳುವುದು. ಪ್ರಾಯೋಗಿಕ ಪರಿಣಿತಿಯನ್ನು ಬೆಳೆಸಲು, ವಿದ್ಯಾರ್ಥಿಗಳನ್ನು ನೈಜ ಕ್ಷೇತ್ರಕ್ಕೆ ಒಡ್ಡಲು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಲು ಭವಿಷ್ಯದಲ್ಲಿ ಈ ವಿಭಾಗವು ಪ್ರಯೋಜನಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಮಾತನಾಡಿ, ಈ ದೇಶಕ್ಕೆ ಅನ್ನ ನೀಡುವ ರೈತರು, ಸೈನಿಕರು, ಶಿಕ್ಷಕರು ಎಷ್ಟು ಮುಖ್ಯನೋ ಅಷ್ಟೆ ಆರೋಗ್ಯ ಕಾಪಾಡಲು ಈ ಸಮಾಜಕ್ಕೆ ಔಷಧಿಕಾರ ಪಾತ್ರ ಬಹುಮುಖ್ಯವಾಗಿದೆ ಕಾರಣ ವಿದ್ಯೆ ಕಲಿವಿಕೆಗೆ ಅಂತ್ಯವಿಲ್ಲ ಯಾವಾಗಲೂ ವಿಧ್ಯಾರ್ಥಿಗಳಾಗಿದ್ದೇವೆ ಎನ್ನುವ ಭಾವನೆಯಲ್ಲಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾನಿಪ ಧ್ವನಿ ಸಂಘದ ತಾಲೂಕಾಧ್ಯಕ್ಷ ಪಂಡಿತ್ ಯಂಪುರೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಬಳಗಾನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಔಷಧಾಲಯ ಅಧಿಕಾರಿ ಸುರೇಶ ಬಬಲೇಶ್ವರ ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಉದ್ಯಮಿ ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಪ್ರಾಚಾರ್ಯ ಸಂದೀಪ ಚಾಂದಕವಟೆ, ಮುಖ್ಯೋಪಾಧ್ಯಾಯ ರಾಜಶೇಖರ ಕಾಂಬಳೆ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಕು. ಸಿದ್ದಮ್ಮ ಪ್ರಾರ್ಥಿಸಿದರು. ಅನುಷ್ಯಾ ನಿರೂಪಿಸಿದರು.