ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನ ಆಚರಿಸಲಾಯಿತು. ಪ್ರತಿನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಹೇಳಿದರು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧಿಸಲು ಯೋಗ ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ವಿದ್ಯಾರ್ಥಿಗಳಿಗೆ ಪ್ರಾಣಾಯಾಮ, ಓಂಕಾರ, ಯೋಗಮಂತ್ರ, ಸೂರ್ಯ ನಮಸ್ಕಾರ, ಚಕ್ರಾಸನ ಮುಂತಾದ ಯೋಗಾಸನಗಳನ್ನು ಹೇಳಿಕೊಡುತ್ತ ವಿಶ್ವಯೋಗ ದಿನದ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಟ್ಟರು.
ವಿದ್ಯಾರ್ಥಿಗಳಾದ ಸುನಿತಾ ಚಿಲಮೂರ, ಪ್ರೀತಂ ವಾರಿ ಯೋಗ ದಿನಚರಿ, ಆರೋಗ್ಯಕರ ಹವ್ಯಾಸಗಳು, ಉತ್ತಮ ಜೀವನ ಕ್ರಮದ ಕುರಿತು ಮಾತನಾಡಿದರು.
ಶಿಕ್ಷಕರಾದ ಜಗದೀಶ ನರಿ, ಸುನೀಲ ಭಜಂತ್ರಿ, ಶಿವಾನಂದ ಬಳಿಗಾರ, ಶ್ರೀಪಾಲ ಚೌಗಲಾ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ವಿರೇಂದ್ರ ಪಾಟೀಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಕ್ಷ್ಮೀ ನಾಗಣ್ಣವರ ಸ್ವಾಗತಿಸಿದರು. ಪೃಥ್ವಿ ಗರಗದ ನಿರೂಪಿಸಿದರು. ಸುಶ್ಮಿತಾ ಸೊಗಲದ ವಂದಿಸಿದರು.