ಬಿಜೆಪಿ ಅರಭಾವಿ ಮಂಡಲ ಪದಾಧಿಕಾರಿಗಳಿಂದ ವಿಶ್ವ ಯೋಗ ದಿನ ಆಚರಣೆ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಮೂಡಲಗಿ ಜೂ 21 : ಯೋಗ ಹಾಗೂ ಧ್ಯಾನದಿಂದ ಸದೃಢ ಕಾಯವನ್ನು ಬೆಳೆಸಿಕೊಂಡು, ನಮ್ಮ ದೇಶವಲ್ಲದೆ ವಿದೇಶಗಳಿಗೂ ಯೋಗ ಹಾಗೂ ಭಾರತದ ಸಂಸ್ಕೃತಿಯನ್ನು ಪರಿಚಯಿಸಿ,ವಿದೇಶಿಗರು ಅನುಕರಿಸಲು ಸ್ವಾಮಿ ವಿವೇಕಾನಂದರ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಮಹತ್ತರವಾಗಿದೆ, ವಿದೇಶಗಳು ದುಡ್ಡು ಹೇಗೆ ಗಳಿಸಬೇಕೆಂದು ಕಲಿಸಿಕೊಟ್ಟರೆ, ನಮ್ಮ ಭಾರತ ಯೋಗದಿಂದ ಉತ್ತಮ ಆರೋಗ್ಯ ಹೇಗೆ ಗಳಿಸಬಹುದೆಂದು ಹೇಳಿಕೊಟ್ಟಿದೆ.

ಆದಕಾರಣ ಯೋಗದ ಹುಟ್ಟು ಸ್ಥಳವಾದ ಭಾರತದ ಹೆಸರು ಅಜರಾಮರವಾಗಿಸಲು ಪ್ರತಿ ವರ್ಷ ಜೂನ್ 21 ನ್ನು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತಿದೆ ಎಂದು ಶ್ರೀ ಕೃಷ್ಣ ಧ್ಯಾನ ಯೋಗ ಪೀಠ  ಭಾರತೀಯ ಗೋ ಸಂರಕ್ಷಣಾ ಸಮೀತಿ ಅಧ್ಯಕ್ಷರಾದ ಶ್ರೀ ದಯಾನಂದ ಸವದಿಯವರು ಹೇಳಿದರು.

ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ,ಸೋಮವಾರ ಜೂನ್ 21 ರಂದು ಬಿಜೆಪಿ ಅರಭಾಂವಿ ಮಂಡಳ ಅಧ್ಯಕ್ಷರಾದ ಮಹಾದೇವ ಶೆಕ್ಕಿಯವರ ಉಸ್ತುವಾರಿಯಲ್ಲಿ ನಡೆದ ವಿಶ್ವ ಯೋಗ ದಿನ ಆಚರಣೆಯ ಅಂಗವಾಗಿ ನಾಗರಿಕರಿಗೆ ಯೋಗವನ್ನು ಮಾಡಿಸುವ ಮೂಲಕ ಮಾತನಾಡಿದ ಅವರು, ಯೋಗ ಆಸನಗಳಿಂದ ದೇಹ ಗಟ್ಟಿಯಾದರೆ,ಪ್ರಾಣಾಯಾಮ ಹಾಗೂ ಧ್ಯಾನಗಳಿಂದ ಮನಸ್ಸು ಗಟ್ಟಿಯಾಗುತ್ತ ಕೆಲಸದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಲು ಕಾರಣವಾಗುತ್ತದೆ ಎಂದರು.

- Advertisement -

ನಮ್ಮ ದಿನ ನಿತ್ಯದ ಕೆಲಸಗಳ ಒತ್ತಡದಿಂದ ಹಾಗೂ ಅನಿಯಮಿತ ಆಹಾರ ಪದ್ಧತಿಯಿಂದ ಜನರು ಅನೇಕ ರೋಗಗಳಿಂದ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಆದಕಾರಣ ದಿನನಿತ್ಯ ಸ್ವಲ್ಪ ಸಮಯವಾದರು ಯೋಗ ಹಾಗೂ ಪ್ರಾಣಾಯಾಮಗಳಿಗೆ ಮೀಸಲಿಟ್ಟರೆ ಆರೋಗ್ಯಯುತ ದೇಹ ಹಾಗೂ ಉತ್ತಮ ಸಮಾಜ ನಿರ್ಮಾಣವಾಗಲು ಸಹಕಾರಿಯಾಗಿದೆ ಎಂದರು.

ನೆರೆದಿದ್ದ ನಾಗರಿಕರಿಗೆ ಸರಳ ಯೋಗ ಆಸನಗಳನ್ನು ಹಾಗೂ ಪ್ರಾಣಾಯಮವನ್ನು ಕಲಿಸುತ್ತ ಉಂಡು ನೂರಡಿ ಎಣಿಸಿ,ಕೆಂಡಕ್ಕೆ ಕೈ ಕಾಸಿ,ಗಂಡು ಭುಜವ ಮೇಲಾಗಿ ಮಲಗಿದವನು,ವೈದ್ಯರ ಮಿಂಡ ಕಾಣ ಸರ್ವಜ್ಞ ಎಂದು ವಚನದ ಮೂಲಕ ಮಾರ್ಮಿಕವಾಗಿ ನುಡಿದರು.

ಈ ಸಂಧರ್ಭದಲ್ಲಿ ಅರಭಾಂವಿ ಮಂಡಳ ಅಧ್ಯಕ್ಷರಾದ ಮಹಾದೇವ ಶೆಕ್ಕಿ,ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ,ಯುವ ಮೋರ್ಚಾ ಅದ್ಯಕ್ಷರಾದ ಪ್ರಮೋದ್ ನುಗ್ಗಾನಟ್ಟಿ,ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕೇದಾರಿ ಭಸ್ಮೇ,ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ನಂದಗಾವಿ,ಕರ್ನಾಟಕ ರಾಜ್ಯ ಯುವ ಸಂಘ ಒಕ್ಕೂಟದ ಜಿಲ್ಲಾಧ್ಯಕ್ಷ  ಸಿದ್ದಣ್ಣ ದುರದುಂಡಿ,ಪಿ.ಕೆ.ಪಿ.ಎಸ್.ಅಧ್ಯಕ್ಷರಾದ ತಿಪ್ಪಣ್ಣ ಕುರಬಗಟ್ಟಿ,ಯುವ ಮೋರ್ಚಾ ಕಾರ್ಯದರ್ಶಿ ಪಾಂಡು ಮಹೇಂದ್ರಕರ,ಬಿಜೆಪಿ ಮುಖಂಡ ಜಗದೀಶ್ ತೇಲಿ ಪ್ರಭು ಹಡಪದ ,ಜಿಲ್ಲಾ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಪ್ಪ ಡವಳೇಶ್ವರ,ನವೀನ ನಿಶಾನಿಮಠ,ರಾಜು ಭಜಂತ್ರಿ,ಸಂಗಯ್ಯ ಮಠಪತಿ,ಚೇತನ್ ನಿಶಾನಿಮಠ,ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು,ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ ಕುಡಚಿ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!