spot_img
spot_img

ವಚನ ಸಾಹಿತ್ಯ ಜಗತ್ತಿನ ಸರ್ವಶ್ರೇಷ್ಠ ಅತ್ಯಮೂಲ್ಯವಾದ ಸಾಹಿತ್ಯವಾಗಿದೆ- ಪ್ರೊ.ಶಿವಕುಮಾರ ಕೋಡಿಹಾಳ

Must Read

- Advertisement -

ಮೂಡಲಗಿ – “ಶರಣರ ವಚನಸಾಹಿತ್ಯ ಜಗತ್ತಿನ ಅತ್ಯದ್ಭುತ ಸಾಹಿತ್ಯವಾಗಿದ್ದು ಸಮಾಜದ ಹಿತಕ್ಕಾಗಿ ಸರ್ವರ ಏಳಿಗೆಗಾಗಿ ಹುಟ್ಟಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ, ಸರ್ವಕಾಲಕ್ಕೂ ಸಲ್ಲುವ ಸಾಹಿತ್ಯವಾಗಿದೆ. ಇದು ಜಗತ್ತಿನ ಸರ್ವಶ್ರೇಷ್ಠವಾದ ಯಾವ ಭಾಷೆಯಲ್ಲೂ ಇರದ ಉತ್ಕೃಷ್ಟ ಸಾಹಿತ್ಯವಾಗಿದೆ” ಎಂದು ಪ್ರೊ. ಶಿವಕುಮಾರ ಕೋಡಿಹಾಳ ಅವರು ತಿಳಿಸಿದರು.

ಅವರು ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜ್ಞಾನ ದೀಪ್ತಿ ಪೌಂಡೇಶನ್, ಸತ್ಯಸಾಯಿ ಸೇವಾ ಸಮಿತಿ ಮೂಡಲಗಿ ಇವುಗಳ ಸಹಯೋಗದಲ್ಲಿ ನಮ್ಮ ನಾಡಿನ ಸರ್ವಶ್ರೇಷ್ಠ ಮಾಸವಾದ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಂಡಿದ್ದ        ” ಮನೆಮನೆಯಲ್ಲಿ ವಚನ ಶ್ರಾವಣ “ಎಂಬ ಕಾರ್ಯಕ್ರಮದಲ್ಲಿ ಲಕ್ಷ್ಮಿ ನಗರದ ಬಾಲಗಜಾನನ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಆರೋಗ್ಯದ ಪರಿಕಲ್ಪನೆ ಎಂಬ ವಿಷಯದ ಕುರಿತು ವಚನ ನಿರ್ವಚನ ಮಾಡುತ್ತಾ, ೨೧ ನೇ ಶತಮಾನದಲ್ಲಿ ಬದುಕುತ್ತಿರುವ ಮಾನವ ಕುಲದ ಒತ್ತಡದ ಬದುಕಿಗೆ ಹನ್ನೆರಡನೆಯ ಶತಮಾನದ ಶರಣರ ವಚನಗಳು ಸಂಜೀವಿನಿಯಾಗಿವೆ.
ಕಾಯಕವೇ ಕೈಲಾಸವೆಂದು ಭಗವಂತ ನೀಡಿದ ಈ ಕಾಯವನ್ನು ಸತ್ಕಾರ್ಯಗಳನ್ನು ಮಾಡುತ್ತಾ ನಿಸ್ವಾರ್ಥದಿಂದ ದಾಸೋಹಗೈದರೆ ಭಗವಂತನ ದಿವ್ಯ ಸಾನ್ನಿಧ್ಯ ಸಾಧ್ಯ. ಚಿತ್ತಶುದ್ಧದಲ್ಲಿ ಕಾಯಕ ಮಾಡುವ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು. ಆರೋಗ್ಯ ಎಂದರೆ ಆರು ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,  ಮೋಹ, ಮದ, ಮತ್ಸರಗಳನ್ನು ಯಾರು ಜಯಿಸುವರೋ ಅವರೇ ಆರೋಗ್ಯಶಾಲಿಗಳು.ವಚನಕಾರರು ಇವುಗಳನ್ನು ಜಯಿಸಲು ಇರುವ ಮಾರ್ಗಗಳನ್ನು ತಮ್ಮ ವಚನಗಳಲ್ಲಿ ಎಳೆಎಳೆಯಾಗಿ ತಿಳಿಸಿಕೊಟ್ಟಿದ್ದಾರೆ. ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ,ವೈದ್ಯ ಸಂಗಣ್ಣ, ಅಂಬಿಗರ ಚೌಡಯ್ಯ, ಸರ್ವಜ್ಞ ಮುಂತಾದ ವಚನಕಾರರ ವಚನಗಳನ್ನು ವ್ಯಾಖ್ಯಾನಿಸುತ್ತಾ ಇಂದಿನ ಒತ್ತಡದ ಬದುಕಿಗೆ ನೆಮ್ಮದಿ ಕಾಣಲು ಅಣ್ಣ ಬಸವಣ್ಣನವರ ಸಪ್ತ ಸೂತ್ರಗಳಾದ ಕಳಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ ಎಂಬ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಸುಂದರವಾದ ಬದುಕು ರೂಪಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಯಾರು ಏನೇ ಮಾಡಿದರೂ ಸಾವು ಬೆನ್ನ ಬಿಡದು. ಇರುವಷ್ಟು ದಿನ ಭಗವಂತನ ಸೇವೆ ಮಾಡೋಣ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ತೊಡಗೋಣ ಭಗವಂತನನ್ನು ಭಜಿಸೋಣ ನೆಮ್ಮದಿಯ ಬದುಕು ಕಾಣೋಣ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜೋಕಾನಟ್ಟಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ಅರ್ಜುನ ಕಾಂಬಳೆ ಅವರು ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ , ಎಂಬ ವಚನವನ್ನು ರಾಗಸಂಯೋಜನೆ ಮಾಡಿ ಹಾರ್ಮೋನಿಯಂ ವಾದ್ಯದೊಂದಿಗೆ ನೆರೆದ ಎಲ್ಲಾ ಶರಣಗಣಕ್ಕೆ ವಚನಾಮೃತವನ್ನು ಉಣಬಡಿಸಿದರು.

- Advertisement -

ಇದೇ ಸಂದರ್ಭದಲ್ಲಿ ಡಾ. ಸಂಜಯ ಸಿಂಧಿಹಟ್ಟಿಯವರು ಶರಣರ ಕಾಯಕ ಮತ್ತು ದಾಸೋಹ ಪರಿಕಲ್ಪನೆಗಳ ಮಹತ್ವವನ್ನು ವಿಶ್ಲೇಷಿಸಿದರು.

ಈ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜ್ಞಾನ ದೀಪ್ತಿ ಪೌಂಡೇಶನ್ ಅಧ್ಯಕ್ಷರಾದ ಸಂಜಯ ಸಿಂಧಿಹಟ್ಟಿ, ಪರಿಷತ್ ನ , ಬಿ.ಆರ್ ತರಕಾರ, ಕೋಶಾಧ್ಯಕ್ಷರಾದ ಬಿ.ವಾಯ್.ಶಿವಾಪೂರ, ಲಂಕೆಪ್ಪನವರ ಗುರುಗಳು, ನಂದಿ ಗುರುಗಳು, ಮಿಲ್ಲಾನಟ್ಟಿ ಸರ್ , ಕಿತ್ತೂರ ಸರ್, ಕೊತ್ತಲ ಸರ್, ತಳವಾರ ಸರ್, ಯಲ್ಲಪ್ಪ ಕರಗಣ್ಣಿ, ಲಕ್ಷ್ಮಣ ಕಂಕಣವಾಡಿ, ಸುಳ್ಳನವರ ಮತ್ತಿತರರು ಹಾಜರಿದ್ದರು.

- Advertisement -
- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group