ನಮ್ಮ ಜೀವನದಲ್ಲಿ ಅಮ್ಮನಷ್ಟೇ ಮಹತ್ವದ ಪಾತ್ರ ಅಪ್ಪನದೂ ಇರುತ್ತದೆ. ನಮ್ಮನ್ನು ತಿದ್ದಿ ತೀಡಿ ಸರಿದಾರಿ ತೋರುವ ಅಪ್ಪ ಒಂದು ರೀತಿಯಲ್ಲಿ ಮೂರ್ತಿಕಾರನಿದ್ದಂತೆ. ಕಲ್ಲಾಗಿರುವ ನಮ್ಮನ್ನು ಕಡೆದು ಸುಂದರ ಮೂರ್ತಿಯಾಗಿಸುವ ಅಪ್ಪ ನಿಜಕ್ಕೂ ನಮ್ಮ ಜೀವನದ ಮಹತ್ತರ ಶಿಲ್ಪಿ.
ಇಂದು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಫಾದರ್ಸ್ ಡೇ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಹಲವೆಡೆ ಈ ದಿನವನ್ನು ಜೂನ್ 3ನೇ ಭಾನುವಾರದಂದು ಆಚರಿಸಲಾಗುತ್ತದೆ. ಸ್ಪೇನ್ ಮತ್ತು ಪೋರ್ಚುಗಲ್ನಂತಹ ದೇಶಗಳು ಮಾರ್ಚ್ 19ರಂದು ಸೇಂಟ್ ಜೋಸೆಫ್ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್ನಲ್ಲಿ ಆಗಸ್ಟ್ 8ರಂದು ಹಾಗೂ ಥೈಲಾಂಡ್ನಲ್ಲಿ ಡಿಸೆಂಬರ್ 5ರಂದು ಆಚರಿಸಲಾಗುತ್ತದೆ.
ಅಮೇರಿಕದಲ್ಲಿ ಭೀಕರವಾದ ಅಪಘಾತವೊಂದು ನಡೆಯಿತು. 1908 ಜುಲೈ 5 ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಇಲ್ಲೋರ್ವರ ಮಗಳು ಗ್ರೇಸ್ ಗೋಲ್ಡನ್ ಕ್ಲೇಟನ್, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು.
ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್ ಡಾಡ್ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ತಂದೆಯ ದಿನಾಚರಣೆ ಆಚರಿಸುವ ಘೋಷಣೆ ಹೊರಡಿಸಿದ ಬಳಿಕ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.