ಗುರು ರಾಘವೇಂದ್ರ ಆರಾಧನೆ; ವಿಠಲೇಶ ದಾಸರ ಚಿಂತನೆಗಳು

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಕಲಿಯುಗದ ಕಲ್ಪವೃಕ್ಷ‌ ಕಾಮಧೇನು ಆಗಿರುವ, ನೊಂದು ಬೆಂದು ಬಂದ ಜನಕ್ಕೆ ಬೇಡಿದ ಇಷ್ಟಾರ್ಥವನ್ನು ಕೊಟ್ಟು ಉದ್ಧರಿಸುವ ಗುರು ರಾಘವೇಂದ್ರರ ಆರಾಧನೆ ಮಾಡಿಕೊಳ್ಳಲು ಜೊತೆ ಅಧ್ಯಾತ್ಮದ ಅರ್ಥ ಚಿಂತನೆ.

ವಿಠಲೇಶ ದಾಸರು ಈ ಕೃತಿಯಲ್ಲಿ ಬಹಳ‌ ಸುಂದರವಾದ ಅರ್ತನಾದ ಮೊರೆಯಿಂದ ಗುರುರಾಘವೇಂದ್ರ ಸ್ವಾಮಿಗಳಲ್ಲಿ ಮೊರೆ ಹೋಗಿದ್ದಾರೆ.

ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ
ಘನ್ನ ಶ್ರೀ ಗುರುರಾಘವೇಂದ್ರ ಸಂಪನ್ನ || ಪ ||

ಚಿಂತನೆ:

- Advertisement -

ಶ್ರೀಮಂತನಿರಲಿ ಅಥವಾ ಬಡವನಿರಲಿ ಎಷ್ಟೇ ದುಡಿದರೂ ,ಏನೇ ಸಾಧಿಸದರೂ ಆಪರಿಶ್ರಮದ ಜೊತೆ ದೇವರ ಮತ್ತು ಗುರುಹಿರಿಯರ ಅನುಗ್ರಹ ಆಶಿರ್ವಾದ ಬಲದಿಂದ ಒಂದು ಸಾಧನೆಯ ಹಂತಕ್ಕೆ ಹೋಗಿರುತ್ತಾರೆ.

ಅದಕ್ಕೆ ವಿಠಲೇಶದಾಸರು ಈ ಪಲ್ಲವಿಯಲ್ಲಿ ಭೂಮಿಯೆಂಬ ಅಂಗಳದಲ್ಲಿ ಜ್ಞಾನ ಎಂಬ ಅನ್ನವನ್ನು ಕರುಣೆಯಿಂದ ಹಾಕು , ಈ ಮನುಷ್ಯ ದೇಹದ ಶ್ವಾನ ಎಂಬ ಪ್ರಾಣಿ ಅದನ್ನುಂಡು ನಿನ್ನ ಪಾಪ್ರಭಾವಿತರೋ ನಾಮಕೀರ್ತನೆಯ ಸದ್ಚಿಂತನೆಯಲ್ಲಿ ತೊಡಗಿಸಿ ಇರುವೆ ಎಂದು ಪ್ರಾರ್ಥಿಸಿದ್ದಾರೆ.

ಏಕೆಂದರೆ ನಾವುಗಳು ತಿನ್ನುವ ಅನ್ನದಲ್ಲಿ ವಾಸುದೇವ ನಾಮಕ ಭಗವಂತನಿರುವನು. ಹರಿಕಥಾಮೃತಸಾರದ ಭೋಜನಸಂಧಿಯಲ್ಲಿ ಪಂಚಕೋಶಗಳಲ್ಲಿನ ಅನ್ನಮಯ ಕೋಶದಲ್ಲಿ ಹೇಳಿರುವರು. ನಾವು ಉಣ್ಣುವ ಅನ್ನ ನಮ್ಮ‌ ಇಂದ್ರೀಯಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನೀವು ಕರುಣಿಸುವ ಸಾತ್ವಿಕ ಅನ್ನವನ್ನು ಉಂಡು ನನ್ನಲ್ಲಿರು ತಾಮಸಿಕ ಗುಣ ಕಳೆದು ಸಾತ್ವಿಕ ಸದ್ಚಿಂತನೆಯಲ್ಲಿ ನಿನ್ನ ಪಾದ ಬಳಿಯಿರುವೆ ಎಂದಿದ್ದಾರೆ.

ನುಡಿ-೧

ವರುಷ ವರುಷಕೆ ನಿನ್ನ ದರುಶನವ ದಯಾ ಮಾಡೋ ದುರಿತ ನಾಶನ ಗೈದು ಪರಿಶುದ್ಧಗೊಳಿಸೋ ಅರಿತು ಅರಿಯದೆ ಗೈವ ಪಾಪ ಕರ್ಮವ ಕಳೆದು ನಿರುತ ಶ್ರೀಹರಿ ಕೃಪೆಗೆ ಪಾತ್ರನಾಗಿರಿಸೋ ।।೧।।

ಚಿಂತನೆ:

ಪ್ರತಿ ವರುಷ ನಿನ್ನ ದರ್ಶನಕ್ಕೆ ಬರಲು ಅನುಗ್ರಹಿಸು ಎಂದಿದ್ದಾರೆ. ನನ್ನ ಚಿತ್ತ ನಿನ್ನತ್ತ ಹೋಳ್ಳುವ ಹಾಗೇ ಮಾಡಿ; ತಿಳಿದು ಅಥವಾ ತಿಳಿಯದೇ ಮಾಡಿದ ಸಾವಿರ ತಪ್ಪಿನ ದೋಷ ನಿವಾರಣೆ ಮಾಡಿಕೊಳ್ಳಲು ದರ್ಶನದ ಭಾಗ್ಯ ಕರುಣಿಸು ಎಂದಿದ್ದಾರೆ. ನಿನ್ನ ಮೂಲಕ ಭಗವಂತನ ಮೆಚ್ಚುವ ಹಾಗೇ ಕರ್ಮಗಳನ್ನು ಮಾಡುತ್ತ ಇರುವ ಸೌಭಾಗ್ಯ ಕರುಣಿಸು ಎಂದಿದ್ದಾರೆ. ಹರಿಕಥಾಮೃತ ಸಾರದ ವಿಭೂತಿ ಸಂಧಿ ಮತ್ತು ಸರ್ವಪ್ರತಿಕ ಸಂಧಿಯಲ್ಲಿ ಹೇಳಿದ್ದಾರೆ.

ಎಲ್ಲರೂ ತಮ್ಮ ವೈಯಕ್ತಿಕ ಸಂತೋಷವಾಗಿರಲು ಎಲ್ಲೋ ಯಾವ್ಯಾವುದೋ ತಾಣಗಳಿಗೆ ಸಮಯ ಮಾಡಿಕೊಂಡು ಹೋಗುತ್ತೇವೆ. ನಾವು ಹಾಗೇ ಮಾಡುವ ಬದಲು ಗುರುಗಳ ಕ್ಷೇತ್ರಕ್ಕೆ, ಜ್ಞಾನಿಗಳ ದರ್ಶನಕ್ಕೆ ಭೇಟಿ ನೀಡಿದರೆ ಕಿಂಚಿತ್ತಾದರೂ ಲೋಪದ‌ ಲೇಶ ಕಡಿಮೆ ಆಗಬಹುದಲ್ಲವೆ ?

ನುಡಿ-೨

ನಿನ್ನ ಭಕುತರ ಪಾದ ರಜದೊಳಿದಾಡಿಸೋ
ನಿನ್ನ ಗುಣ ಕೀರ್ತನೆಯ ಕಿವಿಗಳಲಿ ನಿಲಿಸೋ
ನಿನ್ನ ಪಾದೋದಕದಿ ಪಾವನ ಮಾಡೆನ್ನ
ನಿನ್ನ ರಘುಪತಿ ದಿವ್ಯ ದರುಶನವ ಕೊಡಿಸೋ ।।೨।।

ಗುರುಭಗದ್ಚಿಂತನೆಯಲ್ಲಿರುವ ಭಕ್ತರು ನಡೆದಾಡಿದ ಧೂಳು ಸೋಕಿದರೆ ನಮ್ಮ ಕುಕರ್ಮಗಳ ಗಂಟು ಕರುಗುತ್ತದೆ. ಭಗವಂತನ ನೇರ ದರ್ಶನ ಆಗುವುದಿಲ್ಲ, ಹೀಗಾಗಿ ಗುರುಗಳ ಮತ್ತು ಜ್ಞಾನಿಗಳ ಮುಖಾಂತರ ನಮ್ಮನ್ನು ಸಲಹುತ್ತಾನೆ.

ಭಜನೆ ಕೀರ್ತನೆಗಳು ನಮ್ಮ ಕಿವಿಗೆ ಬೀಳುವ ಹಾಗೇ ಮತ್ತು ಅದರಲ್ಲಿ ತೊಡಗುವ ಮಾಡಿಸು ಎಂದಿದ್ದಾರೆ. ನಿತ್ಯದಲ್ಲಿ ನಿನ್ನ ಪಾದೋಕದಿಂದ ನನ್ನ ಒಳಗಿರುವ ಪಾಪ ಪುರುಷನನ್ನು ಭಸ್ಮ ಮಾಡಿ ನನ್ನನ್ನು ಉದ್ಧರಿಸು ಎಂದಿದ್ದಾರೆ.

ನಮ್ಮ ಜೀವನ‌ ಸಂಸಾರದಲ್ಲಿ ಲೌಕಿಕ ಶಿಕ್ಷಣದ ಜೊತೆ ಸಂಸ್ಕಾರವನ್ನು ಬೆರೆಸಿದರೆ , ಜೀವನಕ್ಕೆ ಒಂದು ಅರ್ಥ ಬರುತ್ತದೆ. ಉದಾ:- ಒಂದು ವಸ್ತು ತಯಾರಿಸಬೇಕಾದರೆ , ಅದು ಮಾರಾಟಕ್ಕೆ ಬರುವ ಮೊದಲು ವಿವಿಧ ಹಂತಗಳಲ್ಲಿ ಅದಕ್ಕೆ ಸಂಸ್ಕರಣ ಮತ್ತು ಸಂಸ್ಕಾರ ನೀಡುತ್ತಾರೆ. ಆಗ ಒಂದು ಮಾರಾಟಕ್ಕೆ ಯೋಗ್ಯವಾದ ವಸ್ತು ಆಗುತ್ತದೆ. ಹಾಗೇ ನಮ್ಮ ಜೀವನವು ಸಹ ಪರಿಪೂರ್ಣತೆ ಹೊಂದಲು ಪೂಜೆ,ಜಪ,ತಪ,ದೇಹ ಸಾಧನೆ, ನವವಿಧ ಭಕ್ತಿ ಇವೆಲ್ಲ ಇದ್ದಾಗ ಒಂದು ಮುಕ್ತರೂಪವಾದ ಸದ್ಗುಣಿ ಆಗಬಹುದು.ಆಗ ಒಂದು ಸುಂದರ ಸಮಾಜ ನಿರ್ಮಾಣವಾಗಲು‌ಸಾಧ್ಯ.

ನುಡಿ -೩

ಮಂತ್ರ ಸದನದಿ ನಿನ್ನ ಸಂತಸ ಮಹೋತ್ಸವದಿ
ಶಾಂತಿ ಸುಖ ಸಂಭ್ರಮದಿ ಸನ್ನಿಧಿಯೊಳಿರಿಸೋ ಸಂತ ಶರಣರ ಭಕುತಿ ನೃತ್ಯಗೀತಗಳ ನೋಡಿ ನಲಿಯುವ ಭಾಗ್ಯ ಕೊಡು ಎನಗೆ ಪ್ರಭುವೇ ।।೩।।

ನಾನು ಎಲ್ಲೇ ಇರಲಿ, ಹೇಗೆ ‌ಇರಲಿ ನಿನ್ನ ನಾಮಸ್ಮರಣೆಯು ವಿಸ್ಮರಣೆ‌ ,ಆಗದೆ ಅದು ನನ್ನಲ್ಲಿ ಬೆರೆತು ಆ ಆತ್ಮಾನಂದ ಸುಖದ ಮಹೋತ್ಸವ ನನಗೆ ಕರುಣಿಸು, ಮತ್ತು ಸಜ್ಜನರ ಶರಣರ ಸಾಧು ಸಂತರ ಸತ್ಸಂಗ ನನಗೆ  ಸದಾ ದೊರೆತು ಈ ಜೀವನದಲ್ಲಿ ನಲಿಯುವ ಹಾಗೇ ಕರುಣಿಸು ಎಂದಿದ್ದಾರೆ.

ನುಡಿ- ೪

ಪ್ರಲ್ಹಾದ ರಾಯನೀ ಬಲ್ಲಿದನು ಜಗದೊಳಗೆ
ಕಾಯ್ವ ನರಹರಿ ದೂತಾನಹುದೋ
ಎಲ್ಲ ರಾಜರ ರಾಜ ವ್ಯಾಸರಾಯನೇ ಸತ್ಯ
ಇಲ್ಲಿ ಶ್ರೀ ಪರಿಮಳರಾಯರ ಮಹಿಮೆಯೇ ಸ್ತುತ್ಯ ।।೪।।

ಪ್ರಲ್ಹಾದನ ಕಥೆ ಗೊತ್ತಿದೆ , ತಾಯಿ ಗರ್ಭದಿಂದಲೇ ಹರಿನಾಮ ಸ್ಮರಣೆಯ ಅಪರಮಿತ ಭಕ್ತ. ತಂದೆಯಾದ ಹಿರಣ್ಯ ಕಶ್ಯಪನಿಗೆ ನರನು ಅಲ್ಲದ ಮೃಗವು ಅಲ್ಲದ ನರಸಿಂಹ ರೂಪದ ಮುಖಾಂತರ ಭಗವಂತನನ್ನು ತೋರಿಸಿದವನು. ಅಂತಹ ಪ್ರಲ್ಹಾದ ರಾಹ ಅಂಶದಿಂದ ಧರೆಯಲಿ ಪಾಮರರನ್ನು ಉದ್ಧರಿಸಲು ಬಂದವರು ನೀವು ವಿಜಯನಗರದ ಕೃಷ್ಣ ದೇವರಾಯನ ಕುಹಯೋಗ ಕಳೆದ ಯತಿಗಳಾದ ವ್ಯಾಸರಾಜರು ಎಷ್ಟು ಪ್ರಭಾವಿತರೋ; ಅಷ್ಟೇ ಬಂದ ಜನರಿಗೆ ಉದ್ಧರಿಸುವ ಕರುಣಿಗಳ‌ ಅರಸರು ನೀವು.

ನುಡಿ – ೫

ಏನು ಬೇಡಲಿ ನಾನು ದಾನಿ ಕರ್ಣನೆ ನಿನ್ನ / ಜ್ಞಾನಿ ಸದ್ಗುರು ಕಲ್ಪವೃಕ್ಷ ಸುರಧೇನು
ದೀನ ರಕ್ಷಕ ವಿಠಲೇಶ ಕರುಣಾಭರಣ
ಸಾನುರಾಗದಿ ನಿನ್ನ ಸೇವಕರೊಳಿರಿಸೋ ।।೫।।

ಚಿಂತನೆ: 

ನಾನು ಕರ್ಣನಷ್ಟು ದಾನಿಯಲ್ಲ , ನನ್ನದು ವ್ಯಾಮೋಹದ ಕುಬ್ಜ ಮನಸ್ಸು ಹೀಗಾಗಿ, ನಾ ಏನೆಂದು ಬೇಡಲಿ, ಆದರೂ ನಿನ್ನಲ್ಲಿ ಬೇಡುವೆ
ನಾನೊಬ್ಬ ದೀನನಾಗಿ ನಿನ್ನಲ್ಲಿ ಬಂದಿದ್ದಿನಿ, ನನ್ನ ರಕ್ಷಣೆಯ ಭಾರ ಮತ್ತು ಗುರುಭಕ್ತಿಯ ಸೇವೆ ಕರುಣಿಸು ಎಂದಿದ್ದಾರೆ.

ಇಲ್ಲಿ ವಿಠಲೇಶ ದಾಸರು ಜ್ಞಾನಿಗಳು ಅವರಂತಹವರು ದೀನನಾಗಿ ಮೊರೆ ಹೋಗಿ ಜನ್ಮ ಉದ್ಧರಿಸುವ ಬಗೆ, ನಾವುಗಳು ಅಲ್ಪಜ್ಞಾನಿಗಳು ಬಂದು ಹೋಗುವ ಈ ಶರೀರದ ವ್ಯಾಮೋಹ ಅಹಂಕಾರವೇತಕೆ ಬೇಕು.ಈ ಸಾಹಿತ್ಯದಿಂದ ನಾವು ತಿಳಿದುಕೊಳ್ಳಬೇಕಾಗಿದ್ದೇನೆಂದರೆ ನರಜನ್ಮ ಬರುವುದು ಸುಲಭವಲ್ಲ , ಕೇವಲ ದೇಹದ ಸಂಸಾರಿಕ ವ್ಯಾಪಾರ ಮಾಡದೇ, ಆತ್ಮದ ಸಂಸ್ಕಾರದಚಿಂತನೆಯಲ್ಲಿ ತೊಡಬೇಕು.

ಸಂಸಾರ ಸಾಗರದಲ್ಲಿ ಅರಷಡ್ ವರ್ಗಗಳ ಚಿತ್ತ ಚಾಂಚಲ್ಯೆದ ತೆರಗಳು
ಬಂದು ಅಪ್ಪಳಿಸಿದರು.ಗುರು ರಾಘವೇಂದ್ರ ಸ್ವಾಮಿಗಳು ಕಾಪಾಡುತ್ತಾರೆ.


ಪ್ರಿಯಾ ಪ್ರಾಣೇಶ ಹರಿದಾಸ,
(ಆದರ್ಶ ನಗರ ವಿಜಯಪುರ)

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!