ರಡ್ಡಿ ಸಮುದಾಯ ಜನಗಣತಿಯಲ್ಲಿ ಹಿಂದೂ ರಡ್ಡಿ ಎಂದು ಬರೆಯಿಸಿ

Must Read

ಬಾಗಲಕೋಟೆ: ರಡ್ಡಿ ಸಮುದಾಯದಲ್ಲಿನ ಉಪ ಪಂಗಡದವರೆಲ್ಲ ಸಾಮಾಜಿಕ, ಶೈಕ್ಷಣಿಕ, ಗಣತಿ ವೇಳೆ ಜಾತಿ ಕಾಲಂನಲ್ಲಿ ಹಿಂದೂ ರಡ್ಡಿ ಎಂದು ಬರೆಸುವಂತೆ ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿಗಳು ಹೇಳಿದರು.

ಅವರು ಸೋಮವಾರ ನಗರದಲ್ಲಿನ ರಡ್ಡಿ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಡ್ಡಿ ಸಮುದಾಯದಲ್ಲಿ ಆರು ಉಪ ಪಂಗಡಗಳು ಇದ್ದು, ಎಲ್ಲರ ಆಹಾರ, ಪೂಜಾ ವಿಧಿವಿಧಾನಗಳು, ಅಂತ್ಯಕ್ರಿಯೆಗಳು ಸೇರಿದಂತೆ ಎಲ್ಲವೂ ಬೇರೆ ಬೇರೆ ಆಗಿವೆ. ಆದರೆ ಮೂಲದಲ್ಲಿ ನಾವೆಲ್ಲ ರಡ್ಡಿ ಸಮುದಾಯದವರು ಹಾಗಾಗಿ ಜನಗಣತಿ ವೇಳೆ ಎಲ್ಲರೂ ಹಿಂದೂ ರಡ್ಡಿ ಎಂದು ದಾಖಲಿಸಬೇಕು ಎಂದು ಅವರು ಮನವಿ ಮಾಡಿದರು.

ಹಿಂದೂ ರಡ್ಡಿ ಎಂದು ಬರೆಸುವದರಿಂದ ಸಮುದಾಯದ ಭವಿಷ್ಯದ ಪೀಳಿಗೆಗೆ ಮೀಸಲು ಸೌಲಭ್ಯಗಳು ಸಿಗಲು ಸಾಧ್ಯವಾಗಲಿದೆ ಎನ್ನುವದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ಕರ್ನಾಟಕ ರಡ್ಡಿ ಜನಸಂಘ ೧೯೨೫ ರಲ್ಲಿ ಸ್ಥಾಪಿತವಾಗಿ ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಕೆಲಸ ಮಾಡುತ್ತಾ ಬಂದಿದ್ದು ಇಂದು ಅದು ೧೦೦ನೇ ವಸಂತವನ್ನು ಪೂರೈಸಿ ಶತಮಾನೋತ್ಸವ ಸಂಭ್ರಮದಲ್ಲಿದೆ. ಶತಮಾನೋತ್ಸವ ಅಂಗವಾಗಿ ಬೆಂಗಳೂರಿನ ಗಾಯಿತ್ರಿ ವಿಹಾರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ರಡ್ಡಿ ಜನಸಂಘ ಶತಮಾನೋತ್ಸವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಸಮುದಾಯದ ಜನತೆ ಭಾಗವಹಿಸಬೇಕೆಂದು ಹೇಳಿದರು.

ರಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ರಡ್ಡಿ ಮಾತನಾಡಿ, ರಾಜ್ಯದಲ್ಲಿ ಸಮುದಾಯ ವನ್ನು ಒಟ್ಟುಗೂಡಿಸಲು ಶ್ರಮಿಸುತ್ತಿರುವ ಸಂಘಟನೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದು, ಬಾಗಲಕೋಟೆಯಲ್ಲಿಯೂ ಕೂಡಾ ೫ ಎಕರೆ ಜಾಗೆಯಲ್ಲಿ ವಿದ್ಯಾ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದೆ. ಸಮುದಾ ಯದ ಮುಖಂಡರು ಅಗತ್ಯ ಜಾಗೆಯನ್ನು ಗುರುತಿಸಿದ್ದಲ್ಲಿ ಆ ಜಾಗೆಯನ್ನು ಸಂಘದ ಹೆಸರಿನಲ್ಲಿ ಖರೀದಿಸಿ ವಿದ್ಯಾ ಸಂಸ್ಥೆ ಆರಂಭಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಂಗರಡ್ಡಿ ರಡ್ಡಿ, ಆರ್.ಎಲ್. ಕಟಗೇರಿ, ಶಾಂತರಾಜ, ಮಹೇಶ ಕಕರಡ್ಡಿ, ದಯಾನಂದ ಪಾಟೀಲ, ಪರ್ವತಗೌಡ, ನಾರಾ ಯಣ ಹಾದಿಮನಿ, ಅಚ್ಯುತ ರಡ್ಡಿ, ವಿರೂಪಾಕ್ಷ ಹಾದಿಮನಿ, ಆರ್.ಎಸ್.ಪಾಟೀಲ ಇದ್ದರು.

Latest News

ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

ಸಿಂದಗಿ - ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ...

More Articles Like This

error: Content is protected !!
Join WhatsApp Group