ಲೇಖಕಿಯರ ಸಂಘದ ವತಿಯಿಂದ ಕೃತಿಗಳ ಲೋಕಾರ್ಪಣೆ ಮಕ್ಕಳು ಸಂಸ್ಕೃತಿ ಅರಿತು ಸಂಸ್ಕಾರ ಪಡೆದು ಮೊದಲು ಮನುಷ್ಯರಾಗಲಿ -ಡಾ ಜೀನದತ್ತ ದೇಸಾಯಿ ಅಭಿಮತ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಗೋಕಾಕದ ಸಾಹಿತಿ ಪ್ರೊ. ಶಕುಂತಲಾ ಹಿರೇಮಠರವರು ಬರೆದ ಅವಳಿ ಕೃತಿಗಳ ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ, ಇತ್ತೀಚಿನ ದಿನಗಳಲ್ಲಿ ನಮ್ಮ ಹಿರಿಯ ಮತ್ತು ಕಿರಿಯ ಲೇಖಕಿಯರು ಪುಸ್ತಕಗಳ ಮತ್ತು ಕಥಾ ವಿಮರ್ಶೆ,ಕವಿಗೋಷ್ಠಿ,ವಿಚಾರ ಸಂಕಿರಣ ಮುಂತಾದವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಸರ್ವೋತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಲೇಖಕಿಯರು ಹೊರಬಂದು ಇಡೀ ನಾಡಿನಲ್ಲಿ ಮಿನುಗುವಂತಾಗಲಿ ಎಂದರು.

ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಜೀವನದ ಮುಖ್ಯ ಉದ್ದೇಶ ಆನಂದದ ಅನ್ವೇಷಣೆಯೇ ಆಗಿದೆ. ನಮ್ಮ ಜಿಲ್ಲೆಯ ಹಿರಿಯರು ವಿಶೇಷ ಆಸಕ್ತಿ ವಹಿಸಿ ಮಾರ್ಗದರ್ಶನ ನೀಡುತ್ತಾ ಮೇರು ಲೇಖಕಿಯರನ್ನು ಬೆಳೆಸುತ್ತಾ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸುತ್ತಿದ್ದಾರೆ ಎಂದರು.

- Advertisement -

ಕಥೆ ಮತ್ತು ಕವನ ಸಂಕಲನ ಎರಡೂ ಕೃತಿಗಳನ್ನು ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಜಿ. ರಾಮಯ್ಯ ಲೋಕಾರ್ಪಣೆ ಮಾಡಿ ಮಾತನಾಡಿ, ಒಬ್ಬ ಸಾಹಿತಿಯ ಒಂದು ಪುಸ್ತಕ ಅವನನ್ನು ಸದಾಕಾಲ ಜೀವಂತವಾಗಿರುತ್ತದೆ. ಸಾಮಾಜಿಕ ಹಿತದೃಷ್ಟಿಯಿಂದ ಬೆಳಗಾವಿಯಲ್ಲಿ ಸಾಹಿತ್ಯಕ ಕೃಷಿ ಇನ್ನೂ ಬೆಳೆಯಲಿ ಎಂದರು.

ಹಿರಿಯ ಸಾಹಿತಿ ಡಾ. ಪಿ. ಜಿ. ಕೆಂಪಣ್ಣವರ ‘ ಹೊಸ ಚಿಗುರು ಹಳೆ ಬೇರು ‘ ಮಕ್ಕಳ ಕಥಾಸಂಕಲನ ಪರಿಚಯಿಸುತ್ತಾ ಸಾಹಿತ್ಯದ ಉದ್ದೇಶ ಸ್ವಹಿತ ಒದಗಿಸುವುದಾಗಿದೆ. ಮಕ್ಕಳಲ್ಲಿ ಶ್ರದ್ಧೆ, ಆಸಕ್ತಿ, ಭಕ್ತಿ ಮತ್ತು ಮೌಲ್ಯಗಳನ್ನು ವೃದ್ಧಿಸುವಂತಹ ಮತ್ತು ಜೀವನಕ್ಕೆ ಸಂದೇಶವನ್ನು ನೀಡುವಂತಹ ಕಥೆಗಳು ಕಥಾಸಂಕಲನದಲ್ಲಿ ಇವೆ. ಮಕ್ಕಳಿಗೆ ಕಥೆಗಳು ಅವರ ದೈನಂದಿನ ಬದುಕನ್ನು ರಂಜನೀಯಗೊಳಿಸುವದಲ್ಲದೆ ದೃಷ್ಟಾಂತಗಳು ಮಕ್ಕಳನ್ನು ಸೆಳೆಯುವುದಲ್ಲದೆ ಒಂದು ನೀತಿಯನ್ನು ತಿಳಿಸುತ್ತವೆ.

ಆ ನಿಟ್ಟಿನಲ್ಲಿ ಸಂಸ್ಕೃತಿ,ಸಂಸ್ಕಾರ ಬೆಳೆಸಲು ಕಥಾಸಂಕಲನದ ಕಥೆಗಳು ಸಹಾಯಕವಾಗಿವೆ ಎಂದರು. ‘ಭಾವಯಾನ’ ಕವನ ಸಂಕಲನ ಪರಿಚಯಿಸಿ ಮಾತನಾಡಿದ ಲಿಂಗರಾಜ ಮಹಾವಿದ್ಯಾಲಯದ ಅಧ್ಯಾಪಕರಾದ ಡಾ. ಎಚ್. ಎಂ.ಚನ್ನಪ್ಪಗೋಳ ಮನುಷ್ಯನ ದುರಾಸೆ ನಮ್ಮನ್ನು ಕೀಳುಮಟ್ಟಕ್ಕೆ ಒಯ್ಯುತ್ತಿದೆ. ಕಾರ್ಮಿಕ,ರೈತ,ಪ್ರಕೃತಿ ಮುಂತಾದವರ ದಾರುಣ ಸ್ಥಿತಿಗಳ ಬಗ್ಗೆ ಕವನಗಳು ಬೆಳಕು ಚೆಲ್ಲುತ್ತವೆ. ಕವನ ಗಮನಿಸಿ ನಾವು ಸ್ವಾರ್ಥ ಬಿಟ್ಟು ಸ್ವಲ್ಪಮಟ್ಟಿನ ತ್ಯಾಗಿಗಳಾಗಿ ಬದಲಾಗಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಡಾ. ಜಿನದತ್ತ ದೇಸಾಯಿ ಮಾತನಾಡಿ, ಇಂದಿನ ನಮ್ಮ ಲೇಖಕಿಯರು ಸಾಹಿತ್ಯದ ಒಂದೇ ಪ್ರಾಕಾರಕ್ಕೆ ಅಂಟಿಕೊಂಡಿಲ್ಲ. ಕವಯತ್ರಿ, ಲೇಖಕಿ ಮತ್ತು ಚಿಂತಕಿಯಾಗಿ ಬೆಳೆಯುತ್ತಿರುವುದು ಸಂತಸದಾಯಕ. ನಮ್ಮ ಮಕ್ಕಳು ಸಂಸ್ಕೃತಿ ಕಲಿತು ಸಂಸ್ಕಾರ ಪಡೆದು ಮೊದಲು ಮನುಷ್ಯರಾಗಬೇಕಿದೆ. ಆ ನಿಟ್ಟಿನಲ್ಲಿ ಕಥೆಗಳು ಮಕ್ಕಳಿಗೆ ಪ್ರೇರಣೆಯಾಗಿವೆ. ಇದರಿಂದ ಸುಸಂಸ್ಕೃತ ನಾಗರಿಕ ಸಮಾಜ ನಾವು ನಿರ್ಮಿಸಿ ಜಗತ್ತಿಗೆ ಮಾದರಿಯಾಗಲು ಶ್ರಮಿಸೋಣ ಎಂದರು.

ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಶಾಂತಾದೇವಿ ಹುಲೆಪ್ಪನವರಮಠ ಮಾತನಾಡಿ, ಪುಸ್ತಕಗಳನ್ನು ನಾವು ಮುಟ್ಟಿ ಕೈತೊಳೆದುಕೊಳ್ಳುವಂತಾಗದೆ ಕೈತೊಳೆದು ಮುಟ್ಟುವಂತಹ ಗುಣಮಟ್ಟದವು ಆಗಿರಬೇಕು ಎಂದು ಪುಸ್ತಕಗಳ ಉತ್ಕೃಷ್ಟತೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕೃತಿಗಳನ್ನು ಬರೆದ ಲೇಖಕಿ ಶಕುಂತಲಾ ಹಿರೇಮಠ ಎಲ್ಲ ಹಿರಿಯ ಸಾಹಿತಿಗಳನ್ನು ಸನ್ಮಾನಿಸಿ ಸಮಾಜಕ್ಕೆ ನಮ್ಮದು ಎನ್ನುವುದನ್ನು ಏನಾದರೂ ಕೊಡೋಣ. ಸಮಾಜಕ್ಕೆ ಸಹಕಾರಿಯಾಗೋಣ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿಯರಾದ ದೀಪಿಕಾ ಚಾಟೆ,ರಾಜನಂದಾ ಘಾರ್ಗಿ, ಶಾರದಾ ಹರಕುಣಿ, ಸುನಂದಾ ಎಮ್ಮಿ, ವಿದ್ಯಾ ಹುಂಡೇಕರ,ಲಲಿತಾ ಪರ್ವತರಾವ,ವಾಸಂತಿ ಮೇಳೆದ, ಮೀನಾಕ್ಷಿ ಸದಲಗಿ, ಶುಭಾ ತೆಲಸಂಗ, ದಾನಮ್ಮ ಜಳಕಿ, ಜಯಶ್ರೀ ಅಬ್ಬಿಗೇರಿ, ಭಾರತಿ ಕೋರಿ,ಅನಿತಾ ಮಾಲಗತ್ತಿ,ಸುನಿತಾ ಸೊಲ್ಲಾಪುರೆ,ಶ್ರೀರಂಗ ಜೋಷಿ, ಎಂ ವೈ ಮೆಣಸಿನಕಾಯಿ, ವೀರಭದ್ರ ಅಂಗಡಿ, ಶಿವಾನಂದ ತಲ್ಲೂರ ಸೇರಿದಂತೆ ಅನೇಕ ಲೇಖಕರು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಲೇಖಕಿ ಹೇಮಾ ಬರಬರಿ ಪ್ರಾರ್ಥಿಸಿದರು, ಲೇಖಕಿ ಇಂದಿರಾ ಮೋಟೆಬೆನ್ನೂರ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಾಹಿತಿ ಜ್ಯೋತಿ ಬದಾಮಿ ವಂದಿಸಿದರು ಮತ್ತು ಸರ್ವಮಂಗಳಾ ಅರಳಿಮಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!