ಎಂ.ಎ.ರಾಜ್ಯಶಾಸ್ತ್ರದಲ್ಲಿ ೭ ಸುವರ್ಣ ಪದಕ ಪಡೆದ ಗ್ರಾಮೀಣ ಪ್ರತಿಭೆ ಯಶೋಧಾ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸವದತ್ತಿಃ ತಾಲೂಕಿನ ತೆಗ್ಗಿಹಾಳ ಗ್ರಾಮದ ಯಶೋಧಾ ಗದಿಗೆಪ್ಪ ಧೂಳನ್ನವರ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ.ಅಂತಿಮ ವರ್ಷದಲ್ಲಿ ೭ ಸುವರ್ಣ ಪದಕಗಳೊಂದಿಗೆ ಉತ್ತೀರ್ಣಳಾಗಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಕರಿಸಿದ್ಧಪ್ಪ, ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ವ್ಹಿ.ಸಿ.ಮಹದೇವ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಗುಡಸಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಚ್.ನಾಗರಾಜ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ಟಿ.ಹನುಮಂತಪ್ಪ ಉಪಸ್ಥಿತರಿದ್ದ ಘಟಿಕೋತ್ಸವದಂದು ೭ ಸುವರ್ಣ ಪದಕಗಳೊಂದಿಗೆ ಪದವಿ ಪ್ರದಾನ ಮಾಡಲಾಯಿತು.

ಗ್ರಾಮೀಣ ಪ್ರದೇಶದ ರೈತನ ಮಗಳ ಈ ಸಾಧನೆಯನ್ನು ತೆಗ್ಗಿಹಾಳ ಶಾಲೆಯ ಗುರುವೃಂದ ವಿದ್ಯಾರ್ಥಿನಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ವೈ.ಬಿ.ಕಡಕೋಳ. ಆರ್.ವೈ.ಅಡಿಭಟ್ಟಿ. ಎಂ.ಎಸ್.ಹೊಂಗಲ.ಎ.ಡಿ.ಕಬ್ಬಿನ ಮೊದಲಾದವರು ಅಭಿನಂದಿಸಿದ್ದಾರೆ.

- Advertisement -

ಯಶೋಧಾ ಧೂಳನ್ನವರ ತನ್ನ ಪ್ರಾಥಮಿಕ ಶಿಕ್ಷಣವನ್ನು ತೆಗ್ಗಿಹಾಳ ಶಾಲೆಯಲ್ಲಿ ಒಂದರಿಂದ ಐದನೆಯ ತರಗತಿಯವರೆಗೆ ಪೂರೈಸಿದ್ದು ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯ ವೈ.ಬಿ.ಕಡಕೋಳ, ಹಿರಿಯ ಶಿಕ್ಷಕರಾದ ಆರ್.ವೈ.ಅಡಿಭಟ್ಟಿ, ಎಂ.ಎಸ್.ಹೊಂಗಲ, ಎ.ಡಿ.ಕಬ್ಬಿನ, ಎಂ.ಎನ್.ಡೊಂಬರ ಗುರುಗಳ ಮಾರ್ಗದರ್ಶನದಲ್ಲಿ ವ್ಯಾಸಂಗ ಪೂರೈಸುವ ಸಂದರ್ಭದಲ್ಲಿ ಎಂ.ಎಸ್.ಹೊಂಗಲ ಗುರುಗಳ ಪ್ರೋತ್ಸಾಹದಿಂದ ಕಬಡ್ಡಿ,ಖೋಖೋ,ವ್ಹಾಲಿಬಾಲ್ ಕ್ರೀಡೆಗಳಲ್ಲಿ ಭಾಗವಹಿಸುವ ಜೊತೆಗೆ ಅಭ್ಯಾಸದಲ್ಲಿಯೂ ಮುಂಚೂಣಿಯಲ್ಲಿದ್ದಳು. ನಂತರ ೬ ರಿಂದ ೭ ನೆಯ ತರಗತಿಯನ್ನು ಮುನವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಪೂರೈಸಿ ನಂತರ ಎಸ್.ಪಿ.ಜೆ.ಜಿ.ಪ್ರೌಢಶಾಲೆಯಲ್ಲಿ ೮ ರಿಂದ ೧೦ನೆಯ ತರಗತಿಯನ್ನು ಮುಗಿಸಿದಳು.

ಕರ್ನಾಟಕ ಕಾಲೇಜು ಧಾರವಾಡದಲ್ಲಿ ಪಿ.ಯು.ಸಿ ಮತ್ತು ಪದವಿ ವ್ಯಾಸಂಗ ಮುಗಿಸಿ ಎಂ.ಎ.ವ್ಯಾಸಂಗವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೭ ಸುವರ್ಣ ಪದಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ. ಮೊದಲಿನಿಂದಲೂ ಆಟ ಪಾಠ ಎರಡರಲ್ಲೂ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಯಶೋಧ ಕಬಡ್ಡಿ ತಂಡದಲ್ಲಿ ಕರ್ನಾಟಕ ಪದವಿ ಕಾಲೇಜಿನಲ್ಲಿಯೂ ಕೂಡ ಭಾಗವಹಿಸಿದ್ದಾಳೆ.

ಪದವಿ ಓದುವಾಗ ಜಿಮಖಾನಾ ವಿಭಾಗದಲ್ಲಿ ಚರ್ಚೆ ಮತ್ತು ಭಿತ್ತಿಪತ್ರ ವಿಭಾಗದಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿಭಾಯಿಸಿದ್ದು ಎಂ.ಎ.ಸ್ನಾತಕೋತ್ತರ ಪದವಿ ಹಂತದಲ್ಲಿ ವಿಶ್ವವಿದ್ಯಾಲಯದ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗುವ ಮೂಲಕ ಗ್ರಾಮೀಣ ಪ್ರತಿಭೆಯೊಂದು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಜವಾಬ್ದಾರಿ ಸ್ಥಾನವನ್ನು ಹೊಂದಿರುವುದು ಗಮನಾರ್ಹ.

ಅಷ್ಟೇ ಅಲ್ಲದೇ ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನದ ಹಂತದಲ್ಲಿ ವಿಶ್ವವಿದ್ಯಾಲಯದ ಕಬಡ್ಡಿ ವಿಭಾಗದ ಯುನಿವರ್ಸಿಟಿ ಬ್ಲ್ಯೂ ಆಗಿರುವಳು. ಇದರ ಜೊತೆಗೆ ಧಾರವಾಡ ಆಕಾಶವಾಣಿಯಲ್ಲಿ ಜರುಗುವ ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗವಹಿಸಿರುವಳು. ೨೦೧೯ ರ ಜನೇವರಿ ೧೮ ರಿಂದ ೨೪ ರಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಆಯೋಜನೆಯ ಭಾರತೀಯ ಪ್ರವಾಸ ರಾಷ್ಟ್ರೀಯ ಇಂಟಿಗ್ರೇಷನ್ ಕ್ಯಾಂಪ್ ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ತಂಡದ 5 ವಿದ್ಯಾರ್ಥಿನಿಯರಲ್ಲಿ ಒಬ್ಬಳಾಗಿ ಭಾಗವಹಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಕೂಡ ಹೆಮ್ಮೆಯ ಸಂಗತಿ.

ಹೀಗೆ ಗ್ರಾಮೀಣ ಪ್ರದೇಶದ ಪ್ರತಿಭೆಯೊಂದು ರೈತ ಕುಟುಂಬದಲ್ಲಿ ಹುಟ್ಟಿ ೭ ಸುವರ್ಣ ಪದಕಗಳೊಂದಿಗೆ ಸ್ನಾತಕೋತ್ತರ ರಾಜ್ಯಶಾಸ್ತ್ರ ಪದವಿಯನ್ನು ಪಡೆದದ್ದು ಸವದತ್ತಿ ತಾಲೂಕಿನ ಹೆಮ್ಮೆ. ಮುಂದೆ ಪಿ. ಹೆಚ್. ಡಿ ಮಾಡುವ ಹಂಬಲವಿರುವ ವಿದ್ಯಾರ್ಥಿ ನಿಯ ಆಸೆ ಈಡೇರುವ ಜೊತೆಗೆ ಉನ್ನತ ಹುದ್ದೆಗೆ ಆಯ್ಕೆಯಾಗಲೆಂದು ಆಶಿಸುವೆ.


ವೈ. ಬಿ. ಕಡಕೋಳ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!