spot_img
spot_img

YB Kadakol: ಕಡಕೋಳ ಗುರುಗಳ ವೈಶಿಷ್ಯಪೂರ್ಣ ಹುಟ್ಟು ಹಬ್ಬ

Must Read

- Advertisement -

ಮುನವಳ್ಳಿ: ಹುಟ್ಟು ಹಬ್ಬದ ವಾತಾವರಣ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ರೂಪದಲ್ಲಿ ಜರುಗುತ್ತಿವೆ.ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಗುರುಗಳ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಿ ಸಿಹಿ ವಿತರಿಸುವ ಮೂಲಕ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ ಎಂದು ಮುನವಳ್ಳಿಯ ಜೈಂಟ್ಸ್ ಗ್ರುಪ್ ಅಧ್ಯಕ್ಷ ರಾದ ಶಿವಾಜಿ ಮಾನೆ ಹೇಳಿದರು.

ಅವರು ಸ್ಥಳೀಯ ವ್ಹಿ.ಪಿ.ಜೇವೂರ ಶ್ರವಣ ನ್ಯೂನತೆ ಮಕ್ಕಳ ಶಾಲೆಯಲ್ಲಿ ತಾಲೂಕಿನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ. ಬಿ. ಕಡಕೋಳ ಅವರ 52 ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ವೈ. ಬಿ. ಕಡಕೋಳ ಹಾಗೂ ಅವರ ಪತ್ನಿ ಶಿವಲೀಲಾ ಇಬ್ಬರ ಜನ್ಮ ದಿನ ಒಂದೇ ದಿನಾಂಕ ವಯಸ್ಸಿನಲ್ಲಿ ಅಂತರ ಈ ರೀತಿಯ ಸಂಗತಿಗಳು ಅಪರೂಪ. ಈ ದಂಪತಿಗಳ ಹುಟ್ಟು ಹಬ್ಬ ಸಾರ್ಥಕತೆ ಪಡೆದಿದೆ” ಎಂದು ಶಿಕ್ಷಕ ವೀರಣ್ಣ ಕೊಳಕಿ ಇದೇ ಸಂದರ್ಭದಲ್ಲಿ ವೈ. ಬಿ. ಕಡಕೋಳ ಅವರ ವ್ಯಕ್ತಿತ್ವ ಕುರಿತು ಮಾತನಾಡುತ್ತಾ ತಮ್ಮ ಹಾಗೂ ಕಡಕೋಳ ಗುರುಗಳ ಒಡನಾಟ ಕುರಿತು ಮಾತನಾಡಿದರು.

- Advertisement -

ಜೈಂಟ್ಸ್ ಗ್ರುಪ್ ನ  ಡಾ. ಎಂ. ಬಿ. ಅಷ್ಟಗಿಮಠ,  ಅರುಣಗೌಡ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಬಾಳು ಹೊಸಮನಿ, ಶಾಲೆಯ ಶಿಕ್ಷಕರಾದ ವೀರೂ ಕಳಸಣ್ಣವರ, ಶಿವೂ ಕಾಟೆ, ಲಾಲ್ ಸಾಬ್ ವಟ್ನಾಳ, ಅನಿತಾ ತಾಸೇದ ಮೊದಲಾದವರು ಉಪಸ್ಥಿತರಿದ್ದರು. 

ತಮ್ಮ ಜನ್ಮ ದಿನದ ಕುರಿತು ಮಾತನಾಡಿದ ವೈ. ಬಿ. ಕಡಕೋಳ ಜೇವೂರ ಗುರುಗಳ ಹಾಗೂ ಜಂಬಗಿಯವರನ್ನು ಸ್ಮರಿಸುತ್ತಾ ಮುನವಳ್ಳಿ ತಮಗೆ ಸಾಹಿತ್ಯ ಕೃಷಿಗೆ ನೆಲೆ ಒದಗಿಸಿದ ಭೂಮಿ. ಈ ಶಾಲೆಯ ನಂಟು ಮೊದಲಿನಿಂದಲೂ ಇರುವುದನ್ನು ನೆನಪಿಸಿಕೊಂಡರು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಹಾಗೂ ಸಿಹಿ ವಿತರಿಸಲಾಯಿತು.

- Advertisement -

ಶಿವೂ ಕಾಟೆ ಸನ್ನೆ ಭಾಷೆಯಲ್ಲಿ ಮಕ್ಕಳಿಗೆ ಮಾಹಿತಿ ನೀಡಿದರು. ಬಾಳು ಹೊಸಮನಿ ನಿರೂಪಿಸಿದರು. ವೀರೂ ಕಳಸಣ್ಣವರ ವಂದಿಸಿದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group