ಸಿಂದಗಿ: ಭಾರತೀಯ ಜನತಾ ಪಕ್ಷ ಸಿಂದಗಿ ಮಂಡಲ ವತಿಯಿಂದ ಇಂದು ಶ್ರೀ ಬಸವ ಕಲ್ಯಾಣ ಮಂಟಪದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಎಚ್ ಟಿ ಕುಲಕರ್ಣಿ ಶಿಕ್ಷಕರು ( ಶಿಕ್ಷಣ ತಜ್ಞರು ) ಮತ್ತು ಪೂಜ್ಯ ಶ್ರೀ ಪ್ರಭುಲಿ0ಗ ಸ್ವಾಮೀಜಿ ಬಸವ ಮಂಟಪ ಇಬ್ಬರಿಗೂ ಸನ್ಮಾನಿಸಿ ಗೌರವಿಸಲಾಯಿತು ಸಿ0ದಗಿಯ ವಿಜಯಕುಮಾರ ಪತ್ತಾರ ಯೋಗ ಗುರುಗಳು ವೇದಿಕೆ ಮೇಲೆ ಇದ್ದರು .ಇನ್ನು ಕಾರ್ಯಕ್ರಮದಲ್ಲಿ ಯೋಗಾ ಅಭ್ಯಾಸ ಮಾಡಲು ಆಗಮಿಸಿದ ಎಲ್ಲ ಯೋಗ ಶಿಬಿರಾರ್ಥಿಗಳಿಗೆ ಸಸಿ ಕೋಡುವುದರ ಮೂಲಕ ಪರಿಸರ ಸ್ನೇಹಿ ಯೋಗ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಿ0ದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಶ್ರೀಶೈಲ ಪಾರಗೋ0ಡ, ಶಿವು ಸೊಂಪುರ, ಸಿದ್ದಲಿಂಗಯ್ಯ ಹಿರೇಮಠ, ಶ್ರೀಶೈಲಗೌಡ ಮಾಗಣಗೇರಿ, ಸಿದ್ದು ಪೂಜಾರಿ ರಾಜಕುಮಾರ ಗೌ0ಡಿ, ಸುರೇಶ ಮಳಲಿ, ರವಿ ಬಿರಾದಾರ, ಶಿವಾನಂದ ಕಲಬುರ್ಗಿ, ಗುರು ತಾರಾಪೂರ, ಪ್ರಕಾಶ ಶೇರಖಾನೆ, ಮಲ್ಲಪ್ಪ ಅರ್ಜುಣಗಿ, ಶರಣು ಖೈನೂರ ಹಾಗೂ ಪಕ್ಷದ ಪ್ರಮುಖರು ಎಲ್ಲ ಮೊರ್ಚದ ಪದಾಧಿಕಾರಿಗಳು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.