ಆತ್ಮೀಯರೇ,
ಎಲ್ಲರಿಗೂ ನಮಸ್ಕಾರಗಳು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವಂತೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ಶಿವಶಂಕರ್ ಜೊಲ್ಹೆ ಪಬ್ಲಿಕ್ ಶಾಲೆ ಶ್ರೀಪೇವಾಡಿ ರಸ್ತೆ, ನಾಗನೂರು ಇಲ್ಲಿ ಆಯೋಜಿಸಲಾಗಿದ್ದು ದಿನಾಂಕ 19.06.2022 ರಿಂದ ಬೆಳಿಗ್ಗೆ 6 ಗಂಟೆಯಿಂದ 3 ದಿನಗಳ ಮಟ್ಟಿಗೆ ನಡೆಯುವ ಯೋಗ ಶಿಬಿರ ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ನಿಪ್ಪಾಣಿಯ ಬೆಳಗಾವಿ ನಾಕಾ, ಬಸ್ ಸ್ಟ್ಯಾಂಡ್ ಮತ್ತು ಚೆನ್ನಮ್ಮ ಸರ್ಕಲದಿಂದ ಶ್ರೀ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆ ಇಲ್ಲಿಯವರೆಗೆ ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಲಾಗಿರುತ್ತದೆ.
ಈ ಕುರಿತು ಆಸಕ್ತರು ಭಾಗಿಯಾಗಲು ಈ ಮೂಲಕ ವಿನಂತಿಸಿದೆ. ಜೊಲ್ಲೆ ಉದ್ಯೋಗ ಸಮೂಹದಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ನಾಗರಿಕರು ಮಕ್ಕಳು ಯೋಗವನ್ನು ಮಾಡಿ ಲಾಭವನ್ನು ಪಡೆಯಬಹುದು. ಯೋಗ ಮಾಡಿರಿ ನಿರೋಗಿಯಾಗಿರಿ.
ನಾಳೆಯಿಂದ ನಡೆಯಲಿರುವ ಯೋಗಾಸನ ಶಿಬಿರದ ಯೋಗಾಚಾರ್ಯರು ಶ್ರೀ ಭವರ್ ಲಾಲ್ ಆರ್ಯ ಕರ್ನಾಟಕ ರಾಜ್ಯದ ಪತಂಜಲಿ ಮುಖ್ಯಸ್ಥರು ಇವರು ಪರಮಪೂಜ್ಯ ಯೋಗಾಚಾರ್ಯ ರಾಮ್ ದೇವ್ ಬಾಬಾ ಇವರ ಆಪ್ತರಲ್ಲಿ ಒಬ್ಬರು. ಓಂ. ನಾಳೆಯಿಂದ ಯೋಗ ಪ್ರಾರಂಭ ವೇಳೆ ಬೆಳಿಗ್ಗೆ 6.30 ಕ್ಕೆ.