spot_img
spot_img

ಯೋಗಃ ಕರ್ಮಸು ಕೌಶಲ್ಯಂ ಯೋಗ ಫಾರ್ ಹುಮನಿಟಿ: ಹೇಮಾ ಪೊದ್ದಾರ

Must Read

ಸಿಂದಗಿ: ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ ಸಿಂಧೂ ಸರಸ್ವತಿ ನಾಗರಿಕತೆಯಲ್ಲಿ ಅಳವಡಿಕೆ ಯೋಗದ ಮಹತ್ವ ಸುಮಾರು 5000 ವರ್ಷಗಳ ಹಿಂದೆಯೇ ಎಂಟನೇ ತರಗತಿ ಇತಿಹಾಸ ಪುಸ್ತಕದಲ್ಲಿ ಪ್ರಸ್ತುತವಾಗಿದೆ ಎಂದು ಶಾಲೆಯ ಮುಖ್ಯ ಗುರುಮಾತೆ ಹೇಮಾ ಪೊದ್ದಾರ ಯೋಗ ಕುರಿತು ವಿದ್ಯಾರ್ಥಿಗಳಲ್ಲಿ ಅರಿಕೆ ಮಾಡಿಕೊಟ್ಟರು.

ನಗರದ ಶ್ರೀ ಗುರು ಕೃಪಾ ಆಂಗ್ಲಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ, ದಿನನಿತ್ಯದ ಯೋಗಾಭ್ಯಾಸವು ಮಕ್ಕಳಲ್ಲಿ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾಗಿದ್ದು, ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸಿನ ಮಾರ್ಗದಲ್ಲಿ ಸಾಗುವಂತೆ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಹೇಮಾ ಪೋದಾರ್ ರವರು ಮಕ್ಕಳಿಗೆ ಹುರಿದುಂಬಿಸಿದರು ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗ ಅತ್ಯಂತ ಹರ್ಷದಿಂದ 7 ಘಂಟೆಗೆ ಯೋಗಾಭ್ಯಾಸ ಮಾಡಿದರು ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕುಲ್ಕರ್ಣಿ ಯೋಗ ಅಭ್ಯಾಸ ಮಾಡಿಸಿದರು.

ಶ್ರೀ ಗುರು ಕೃಪಾ ಆಂಗ್ಲಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆಯ ಕಾರ್ಯದರ್ಶಿ ಹಣಮಂತರಾವ ಪೋದ್ದಾರ, ಶಿಕ್ಷಕರಾದ ಸವಿತಾ ಬಿ, ಪೂಜಾ ದಶ್ಮಾ, ಸೌಮ್ಯ ಪೋದ್ದಾರ, ಹರೀಶ ಪೊದ್ದಾರ ಹಾಗೂ ಶೃತಿ ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗ ವಿಶಾಲ ಹಿರೇಮಠ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!