spot_img
spot_img

ಸಕಲರಿಗೂ ಆರೋಗ್ಯ ನೀಡುವ ಯೋಗೋತ್ಸವ ಪ್ರತಿವರ್ಷ ಜರುಗಲಿ

Must Read

- Advertisement -

ಯೋಗೋತ್ಸವ ಕಾರ್ಯಕ್ರಮ ಮುಕ್ತಾಯ ಸಮಾರಂಭ

ಸಿಂದಗಿ; ಶಾಸಕರು ಯಾವಾಗಲೂ ಧರ್ಮ ಕಾರ್ಯಗಳನ್ನು ಮಾಡುತ್ತ ಬಂದಿದ್ದು ತಾಲೂಕಿನ ಜನತೆಗೆ ಬೇಕಾಗಿರುವ ಒಳ್ಳೆಯ ಕಾರ್ಯಗಳು ಜನಮೆಚ್ಚುಗೆ ಪಡೆದುಕೊಂಡಿವೆ ಅಲ್ಲದೆ ಕಳೆದ ಸರಕಾರದಲ್ಲಿ ದಿ.ಎಂ.ಸಿ.ಮನಗೂಳಿಯವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಆಲಮೇಲದಲ್ಲಿ ಮಂಜೂರಾಗಿ ನೆನೆಗುದಿಗೆ ಬಿದ್ದ ಕಾರ್ಯವನ್ನು ಸಿಎಂ ಅವರಿಗೆ ಮನವೊಲಿಸಿ ಆ ಕಾಲೇಜಿಗೆ ಮರು ಮಂಜೂರಾತಿ ಪಡೆಸಿಕೊಂಡು ಒಳ್ಳೆ ಕೆಲಸಕ್ಕೆ ದಾಪುಗಾಲು ಹಾಕಿದ್ದಾರೆ ಎಂದು ಸೊನ್ನ ದಾಸೋಹ ವಿರಕ್ತಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಎಚ್.ಜಿ.ಹೈಸ್ಕೂಲ ಮೈದಾನದಲ್ಲಿ ಯೋಗೋತ್ಸವ ಸಮಿತಿ ೨೧ ದಿನಗಳ ಕಾಲ ಹಮ್ಮಿಕೊಂಡ ಯೋಗ ಶಿಬಿರದ ಮುಕ್ತಾಯ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಆಲಮೇಲದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ೮೦ ಎಕರೆ ಜಾಗದಲ್ಲಿ ಕೆರೆ ನಿರ್ಮಾಣ ಕಾರ್ಯ ಹಮ್ಮಿಕೊಂಡಿದ್ದು ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಕ್ಷೇತ್ರದ ಆರೋಗ್ಯದ ದೃಷ್ಠಿಯಿಂದ ಶಾಸಕ ಅಶೋಕ ಮನಗೂಳಿಯವರು ಯಾವಾಗಲೂ ಲವಲವಿಕೆಯಿಂದ ಇರುವ ಹಾಗೆ ೨೧ ದಿನಗಳ ವರೆಗೆ ಯೋಗ ಶಿಬಿರವನ್ನು ಆಯೋಜಿಸಿ ಆರೋಗ್ಯವಂತ ಬದುಕು ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.

- Advertisement -

ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ಹಿಮಾಲಯದಲ್ಲಿ ಪರಿಣಿತಿ ಪಡೆದ ಯೋಗ ಪಟು ನಿರಂಜನ ಗುರುಗಳು ೨೧ ದಿನಗಳ ಕಾಲ ನಡೆಸಿದ ಯೋಗವನ್ನು ನಿತ್ಯ ಪಾಲಿಸುತ್ತ ಯಾವಾಗಲೂ ಲವಲವಿಕೆಯಿಂದ ಇರಬೇಕು ಎಂದರೆ ಯೋಗೋತ್ಸವ ಸಮಿತಿ ೨೧ ದಿನಗಳ ಕಾಲ ಹಮ್ಮಿಕೊಂಡ ಯೋಗವನ್ನು ನಿತ್ಯ ಚಾಚು ತಪ್ಪದೇ ಆಲಿಸಿದ್ದಾದರೆ ಆರೋಗ್ಯದಲ್ಲಿ ಸುದಾರಣೆ ಕಾಣಲು ಸಾಧ್ಯ ಎಂದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಮಾನಸಿಕವಾಗಿ ಆರೋಗ್ಯದಿಂದ ಇರಬೇಕು ಎನ್ನುವ ಸಿಂದಗಿ ಕ್ಷೇತ್ರದ ಜನರಿಗೆ ಉತ್ತಮವಾದ ಆರೋಗ್ಯ ಹಿತ ದೃಷ್ಟಿಯಿಂದ ಹಿಮಾಲಯದಲ್ಲಿ ಸುಮಾರು ೬ ವರ್ಷಗಳ ಕಾಲ ಯೋಗಾಭ್ಯಾಸ ಮಾಡಿದ ಶ್ರೀ ನಿರಂಜನ ಶ್ರೀಗಳು ಯೋಗ ಮತ್ತು ಧ್ಯಾನ, ಪ್ರವಚನ ನೀಡಿ ಮಾರ್ಗದರ್ಶನ ನೀಡಿದ್ದಾರೆ. ಇಲ್ಲಿಗೆ ನಿಲ್ಲುವುದಿಲ್ಲ ಸಮಾಜದ ಸುದರಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಅದಕ್ಕೆ ಎಲ್ಲರ ಸಹಕಾರ ನೀಡಬೇಕು ಅಲ್ಲದೆ ನಿರಂಜನ ಗುರುಗಳು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ಶಿಬಿರಕ್ಕೆ ಆಗಮಿಸಬೇಕು ಎಂದು ವಿನಂತಿಸಿದರು.

ನಿರಂಜನ ಗುರುಗಳು, ಊರಿನ ಹಿರೇಮಠದ ಶಿವಾನಂದ ಶಿವಾಚಾರ್ಯರು, ಭೀಮಾಶಂಕರ ಮಠದ ದತ್ತ ಯೋಗೇಶ ಸ್ವಾಮಿಜಿ ಮಾತನಾಡಿದರು.

- Advertisement -

ಯೋಗೋತ್ಸವ ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ವೇದಿಕೆ ಮೇಲಿದ್ದರು. ಈ ಸಂದರ್ಭದಲ್ಲಿ ೨೧ ದಿನಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಎಂ.ಬಿ.ಅಲ್ದಿ, ತಬಲಾ ಸಾಥ ನೀಡಿದ ಭೀಮಸುತ್ ಸಿದ್ದರಾಮ ಬ್ಯಾಕೋಡ, ಪ್ರಸಾದ ಸೇವೆ ಸಲ್ಲಿಸಿದ ಎಂ.ಎಂ.ಮುಂಡೆವಾಡಿ ಬಳಗಕ್ಕೆ, ಎಚ್.ಜಿ.ಕಾಲೇಜಿನ ಸಿಬ್ಬಂದಿಗೆ, ಯೋಗೋತ್ಸವ ಸಮಿತಿ ಸದಸ್ಯರಿಗೆ ಗೌರವಿಸಲಾಯಿತು.
ಪ್ರೋ. ಸಿದ್ದಲಿಂಗ ಕಿಣಗಿ ನಿರೂಪಿಸಿದರು. ದೈಹಿಕ ನಿರ್ದೇಶಕ ರವಿ ಗೋಲಾ ಪ್ರಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group