spot_img
spot_img

‘ಯುವಕರು ಸ್ವಾವಲಂಬಿಯಾಗಿ ಬದುಕಬೇಕು’ – ದುರ್ಯೋಧನ ಐಹೊಳೆ

Must Read

- Advertisement -

ಮೂಡಲಗಿ: ‘ಯುವಕರು ಸ್ವಯಂ ಉದ್ಯೋಗಗಳನ್ನು ಮಾಡುವ ಮೂಲಕ ಸ್ವಾವಲಂಬಿಯಾಗಿ ಬದುಕುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಹೆಸರು ತಂದುಕೊಳ್ಳಬೇಕು’ ಎಂದು ರಾಯಬಾಗ ಶಾಸಕ ಹಾಗೂ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಆಗಿರುವ ದುರ್ಯೋಧನ ಐಹೊಳೆ ಅವರು ಹೇಳಿದರು.

ಇಲ್ಲಿಯ ಕಾಲೇಜು ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್‍ ಅನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರವು ಸಮಾಜದಲ್ಲಿಯ ವಿವಿಧ ಜನಾಂಗಗಳನ್ನು ವಿಂಗಡಿಸಿ ಪ್ರತ್ಯೇಕ ನಿಗಮಗಳನ್ನಾಗಿಸಿ ಆಯಾ ಜನಾಂಗಗಳ ಅಭಿವೃದ್ಧಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಲಿದೆ. ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಲ್ಲಿ ಮಾದಿಗ, ಡೋರ ಮತ್ತು ಸಮಗಾರ ಜನಾಂಗಗಳು ಸೇರಿವೆ. ಇದರ ಅಧ್ಯಕ್ಷನಾದ ನಾವು ನಿಗಮದ ಅಡಿಯಲ್ಲಿ ಸಾಕಷ್ಟು ಜನರಿಗೆ ಉದ್ಯೋಗಕ್ಕೆ ಅವಕಾಶ ನೀಡಿರುವ ತೃಪ್ತಿ ಇದೆ ಎಂದರು.

- Advertisement -

ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಚನ್ನಯ್ಯನವರ, ರಾಯಬಾಗ ತಾಲ್ಲೂಕು ಬಿಜೆಪಿ ಮುಖಂಡ ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪುರ, ಪ್ರಕಾಶ ಅಂಗಡಿ, ಮುರಗೇಶ ಶಿವಪೂಜೆ, ರಾಜಕುಮಾರ ರಾಟೋಡ, ವಿನೋದ, ಪುರಸಭೆ ಸದಸ್ಯರಾದ ಜಯಾನಂದ ಪಾಟೀಲ, ಅಬ್ದುಲ್‍ಗಫಾರ ಡಾಂಗೆ, ಅನ್ವರ ನದಾಫ, ಆನಂದ ಟಪಾಲ, ಪ್ರಕಾಶ ಮುಗಳಖೋಡ, ಎನ್.ಟಿ. ಪಿರೋಜಿ, ವೆಂಕಟೇಶ ಸೋನವಾಲಕರ, ಅಜೀಜ್ ಡಾಂಗೆ, ಮಾಲೀಕರಾದ ವಿಠ್ಠಲ ಹೊಸಾಳಿ ಮತ್ತು ಲಕ್ಷ್ಮಣ ಹೊಸಾಳಿ ಇದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group