ಸಿಂದಗಿ: ಕಾನೂನುಗಳು ಆಲದ ಮರ ಇದ್ದ ಹಾಗೆ ಕಾರಣ ಯುವಕರಿಗೆ ಕಾಯ್ದೆಗಳ ಅರಿವು ಮತ್ತು ಮಾಹಿತಿ ಹಕ್ಕುಗಳಿಂದ ಭಾರತದ ಭವ್ಯ ಸಂಸ್ಕೃತಿಯ ಸ್ಥಾಪನೆ ಅವಶ್ಯವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡಮನಿ ಹೇಳಿದರು.
ಪಟ್ಟಣದ ತಾ.ಶಿ.ಪ್ರ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎನ್.ಎಸ್.ಎಸ್, ಆಯ್.ಕ್ಯೂ.ಎ.ಸಿ, ಎನ್.ಸಿ.ಸಿ ಮತ್ತು ಯುಥ್ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಯುವಸಪ್ತಾಹ ಆಚರಣೆ ಕಾನೂನು ಅರಿವು ಹಾಗೂ ಮಾಹಿತಿ ಹಕ್ಕು, ಯುವ ವಿದ್ಯಾರ್ಥಿಗಳು ಹಕ್ಕು ಮತ್ತು ಕಾನೂನಿನ ಅಡಿಯಲ್ಲಿ ಭಾವಿ ಭವಿಷ್ಯತ್ತಿನ ಜೀವನವನ್ನು ರೂಪಿಸಿಕೊಳ್ಳಬೇಕಲ್ಲದೆ ಮಾನವ ಹುಟ್ಟಿನಿಂದಲೇ ಕಾನೂನಿನ ಚೌಕಟಿನಲ್ಲಿಯೇ ಬೆಳೆಯುತ್ತಾನೆ. ಕಾನೂನಿನ ತಿಳಿವಳಿಕೆ ಅವಶ್ಯವಾಗಿದೆ. ದೀನದಲಿತರಿಗೆ, ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಮಹಿಳೆಯರಿಗೆ ತಾಲುಕಾ ಕಾನೂನು ಸೇವಾ ಪ್ರಾಧಿಕಾರ ಇದ್ದು ಅದರ ಲಾಭವನ್ನು ಪಡೆದುಕೊಳ್ಳಬೇಕಾಗಿ ಕೋರಿಕೆ. ಯುವಕರು ದೇಶದ ಶಕ್ತಿ ಕಾರಣ ಕಾನೂನಿನ ತಿಳಿವಳಿಕೆಯು ಜವಾಬ್ದಾರಿಯ ಬದುಕು ಆಗಬೇಕು ನಿಮ್ಮ ಜೀವನ ನಿಂತ ನೀರು ಆಗಿರದೇ ಹರಿಯುವ ನೀರು ಆಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ಬಿ. ಸಿಂದಗಿ ಮಾತನಾಡಿ, ಕಾನೂನಿನ ಅರಿವು ಮತ್ತು ನೆರವು ಹಾಗೂ ಸುರಕ್ಷತಾ ಕ್ರಮಗಳು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ನಡವಳಿಕೆಗಳ ಕಾಯ್ದೆ ಪ್ರಜಾಪ್ರಭುತ್ವದ ಹಿತರಕ್ಷಣೆಗಾಗಿ ಬಂದ ವ್ಯವಸ್ಥೆಯ ಕಾಯ್ದೆ ಸಾಮಾಜಿಕ ಬದಲಾವಣೆಯಾದಂತೆ ಕಾನೂನುಗಳು ಬದಲಾವಣೆ ಆಗಬೇಕು ಪ್ರತಿಯೊಬ್ಬ ಯುವಜನಾಂಗಕ್ಕೆ ಅವಶ್ಯವಾಗಿ ಕಾನೂನಿನ ಅರಿವು ಜ್ಞಾನ ತಿಳಿವಳಿಕೆ ಬೇಕು ಜೊತೆಗೆ ರಸ್ತೆ ಸುರಕ್ಷತಾ ಕಾಯ್ದೆಗಳ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಡಾ. ಅರವಿಂದ ಮನಗೂಳಿ, ಪ್ರೊ. ಎಸ್.ಎಸ್. ಪಾಟೀಲ, ಪ್ರೊ. ಎಸ್.ಕೆ.ಹೂಗಾರ, ಪ್ರೊ. ಎಮ್.ಜಿ. ಬಿರಾದಾರ, ಪ್ರೊ. ಬಿ.ಡಿ. ಮಾಸ್ತಿ, ಪ್ರೊ. ಬಿ.ಜಿ.ಕಾಂಬಳೆ ಪ್ರೊ. ಆರ್.ಎಸ್. ಮೇತ್ರಿ, ಎಸ್.ಎ. ಜಾಗೀರದಾರ ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಪ್ರೊ. ಬಿ.ಜಿ. ಮಠರಿಂದ ಸ್ವಾಗತ ಮತ್ತು ಪರಿಚಯಿಸಿದರು. ಪ್ರೊ. ಬಿ.ಎಸ್. ಗುರುಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಮಹಾವಿದ್ಯಾಲಯದ ವಿದ್ಯಾರ್ಥಿ ಸಂಗಮೇಶ ಪಾಟೀಲ ವಂದಿಸಿದರು.