ಬೀದರ – ಅಕ್ರಮ ಸಂಬಂಧದ ಶಂಕೆಯಿಂದ ಯುವಕನೊಬ್ಬನ ಕೈ-ಕಾಲು ಕಟ್ಟಿ ಇಬ್ಬರು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು ಈ ವಿಡಿಯೋ ವೈರಲ್ ಆಗಿದ್ದಲ್ಲದೆ ನೋಡಿದವರಲ್ಲಿ ಭಯ ಸೃಷ್ಟಿಸಿದೆ.
ಬೀದರ್ ಜಿಲ್ಲೆ ಔರಾದ್ ತಾಲೂಕಿನ ನಾಗನಪಲ್ಲಿ ಗ್ರಾಮದಲ್ಲಿ ಯುವಕನ ಮೇಲೆ ಹಲ್ಲೆ. ಅ.21ನೇ ತಾರೀಖು ಯುವಕನನ್ನ ಜೆಜೆಎಮ್ ನಲ್ಲಿಗೆ ಕಟ್ಟಿ ದೊಣ್ಣೆಯಿಂದ ಹಲ್ಲೆ ನಡೆಸಿದ ಮಹಿಳೆಯ ತಂದೆ ಹಾಗೂ ಸಹೋದರ ಮನಸೋ ಇಚ್ಛೆ ಥಳಿಸಿದ್ದು ಸ್ಥಳಕ್ಕೆ ಚಿಂತಾಕಿ ಪೊಲೀಸರು ಭೇಟಿ ನೀಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದರಾದರೂ ಯುವಕ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆ ಗೌಣಗಾಂವ್ ಗ್ರಾಮದ ವಿಷ್ಣು (27) ಮೃತ ಯುವಕ.
ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಆರೋಪ ಹಿನ್ನೆಲೆ, ಯುವಕನ ಕೊಲೆ. ಬಡಿಗೆಗಳಿಂದ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮೃತ ವಿಷ್ಣು ಒಂದು ವರ್ಷದಿಂದ ನಾಗನಪಲ್ಲಿ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನಂತೆ.
ಯುವಕ ಅ.21ನೇ ತಾರೀಖು ತನ್ನ ಇಬ್ಬರು ಸ್ನೇಹಿತರೊಂದಿಗೆ ಮಹಿಳೆಯ ಮನೆಗೆ
ಬಂದ ವೇಳೆ ಕುಟುಂಬಸ್ಥರಿಂದ ಹಲ್ಲೆಯಾಗಿದೆ. ಹಲ್ಲೆ ನಂತರ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಥಳಿಸಿರುವುದಾಗಿ ಮೃತ ವಿಷ್ಣು ತಾಯಿ ಲಕ್ಷ್ಮೀಯಿಂದ ದೂರು ನೀಡಲಾಗಿದೆ.
ಇತ್ತ ಹಲ್ಲೆ ನಡೆಸಿದ ಕುಟುಂಬಸ್ಥರಿಂದಲೂ ಚಿಂತಾಕಿ ಠಾಣೆಯಲ್ಲಿ ಪ್ರತಿದೂರು. ಅಕ್ರಮ ಸಂಬಂಧ ಶಂಕೆ ಇರುವ ಮಹಿಳೆ ಪೂಜಾ ಎಂಬಾಕೆಯಿಂದ ಪ್ರತಿದೂರು ದಾಖಲು. ಹಲ್ಲೆ ನಡಿಸಿದ ಇಬ್ಬರು ಆರೋಪಿಗಳಾದ ಅಶೋಕ ಮತ್ತು ಗಜಾನನ ಎಂಬುವವರನ್ನು ಬಂಧಿಸಿರುವ ಚಿಂತಾಕಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

