ಸಿಂದಗಿ: ನವಭಾರತ ನಿರ್ಮಾಣ ಮಾಡಲು ಯುವಕರು ಮುಂದಾಗಬೇಕು ಈ ದೇಶ ಕಟ್ಟಲು ಬೇಕಾದ ಶಕ್ತಿಯೆಂದರೆ ಅದು ಯುವಶಕ್ತಿ ಎಂದು ಅಂಕಣಕಾರ ಮಂಜುನಾಥ ಜುನಗೊಂಡ ಹೇಳಿದರು.
ಪಟ್ಟಣದ ಪಿ.ಇ.ಎಸ್ ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಕಲಾ ಹಾಗೂ ವಾಣಿಜ್ಯ ಮಹಾವಿದಾಲಯದಲ್ಲಿ ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯುವಕರಾದವರು ಮತ್ತೊಬ್ಬರ ಕುರಿತು ಮಾತನಾಡದೆ ತಮ್ಮನ್ನು ತಾವು ಅರಿತುಕೊಂಡು ಮುನ್ನಡೆಯಬೇಕು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಪಿ.ಇ.ಎಸ್ ಸಂಸ್ಥೆಯ ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ ಉದ್ಘಾಟಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಉಪನ್ಯಾಸಕ ಕೆ.ಎಚ್. ಸೋಮಾಪೂರ ಹಿರಿಯ ಉಪನ್ಯಾಸಕ ಪಿ.ಎಂ. ಮಡಿವಾಳರ, ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಜಿ.ಎಸ್. ಕಡಣಿ, ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಬಿ. ಗೋಡಕರ ಉಪಸ್ಥಿತರಿದ್ದರು.
ಮಲ್ಲು ಹೊಸಮನಿ ನಿರೂಪಿಸಿದರು. ಕು. ಭಾಗ್ಯಶ್ರೀ ಹೆರೂರ ಸ್ವಾಗತಿಸಿದರು. ಎಚ್.ಎ. ಇಳಗೇರ ವಂದಿಸಿದರು.