ಬೀದರ – ಆನ್ ಲೈನ್ ಗೇಮ್ ಹುಚ್ಚಿಗೆ ಬಿದ್ದು ರೂ. ೧೫ ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಯುವಕನೊಬ್ಬ ಜಿಗುಪ್ಸೆಗೊಂಡು ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡಾದಲ್ಲಿ ನಡೆದಿದೆ
ಮೂಲತಃ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಯುವಕ ಬಿ. ಫಾರ್ಮಸಿ ಪದವೀಧರನಾಗಿದ್ದು ಕೆಲ ತಿಂಗಳಿಂದ ಆನ್ ಲೈನ್ ಗೇಮ ಹುಚ್ಚಿಗೆ ಬಿದ್ದಿದ್ದನೆನ್ನಲಾಗಿದೆ.
ವಿಜಯಕುಮಾರ ಜಗನ್ನಾಥ ಹೊಳ್ಳೆ (೨೫) ಎಂಬ ಯುವಕ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಕಾಲ ಸಾವನ್ನಪ್ಪಿದ್ದಾನೆ
ಲಕ್ಷಾಂತರ ಸಾಲ ಮಾಡಿ ಆನ್ಲೈನ್ ನಲ್ಲಿ ಕಳೆದುಕೊಂಡಿದ್ದ ಯುವಕ. ಈಗಾಗಲೆ 10 ಲಕ್ಷ ಸಾಲ ತೀರಿಸಿದ್ದ ಕುಟುಂಬಸ್ಥರು. ಮತ್ತೆ 5 ಲಕ್ಷ ಸಾಲ ಮಾಡಿಕೊಂಡಿದ್ದ ವಿಜಯಕುಮಾರ್. ಮತ್ತೆ ಸಾಲದ ವಿಷಯ ಮನೆಯಲ್ಲಿ ಗೊತ್ತಾದರೆ ತೊಂದರೆ ಆಗುತ್ತದೆ ಎಂದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಗಂಭೀರ ಗಾಯಗೊಂಡ ಯುವಕನನ್ನು ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.
ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ