ಗುರ್ಲಾಪೂರ- ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವಲ್ಲಿ ಗಾಣಸಿರಿ ನಗರದ ಯುವಕರು ಮುಂದಾಗಬೇಕು ಎಂದು ಗ್ರಾಮದ ಹಿರಿಯರಾದ ಶ್ರೀಶೈಲ ನೇಮಗೌಡರ ಹೇಳಿದರು.
ಗುರ್ಲಾಪೂರದ ಗಾಣಸಿರಿ ನಗರದಲ್ಲಿ ಜೈ ಹನುಮಾನ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ದಿ.೨೬ ರಂದು ಮೀರಾ ಮೆಲೊಡಿ ಆರ್ಕೆಸ್ಡ್ರಾ ಸೌಂಡ ಸಿಸ್ಟಮ್ ಸಸಾಲಟ್ಟಿ ಇವರು ನಡೆಸುವ ಕಾರ್ಯಕ್ರಮದ ಅತಿಥಿಗಳಾಗಿ ಆಗಮಸಿ ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಬಸಯ್ಯಾ ಮಠಪತಿ ವಹಿಸಿದ್ದರು ಅಧ್ಯಕ್ಷತೆಯನ್ನು ರಾಮಪ್ಪ ಬ ನೇಮಗೌಡ್ರ ವಹಿಸಿದರು, ಈ ಸಂದರ್ಭದಲ್ಲಿ ಅನ್ನದಾನ ಮಾಡಿದ ಭಕ್ತರಾದ ಭೀಮಪ್ಪ ನಿಡೋಣಿ ಇವರನ್ನು ಜಾತ್ರಾ ಮಹೋತ್ಸವದ ಸದಸ್ಯರು ಸತ್ಕರಿಸಿದರು.
ಈ ಸಂದರ್ಭದಲ್ಲಿ ರಾಮಪ್ಪ ಹಳ್ಳೂರ, ಮಹಾದೇವ ರಂಗಾಪೂರ, ಎಸ್ ಟಿ ಗಾಣಿಗೇರ, ಪಾವಡಿ ಗಾಣಿಗೇರ ನಿಂಗಪ್ಪ ಗಾಣಿಗೇರ, ಸದಾಶಿವ ಗಾಣಿಗೇರ, ರೇವಪ್ಪ ಸತ್ತಿಗೇರಿ ಅಪ್ಪಯ್ಯ ನೇಮಗೌಡರ, ಲಕ್ಷ್ಮಣ ಗಾಣಿಗೇರ, ಸದಾಶಿವ ಸುಣಧೋಳಿ, ಸಿದ್ದು ಗಡ್ಡೆಕಾರ, ರಮೇಶ ನೇಮಗೌಡರ, ರೇವಪ್ಪ ನೇಮಗೌಡರ, ಮಲಕಾರಿ ಕಾಳಪ್ಪಗೋಳ, ಮಂಜುನಾಥ ನೇಮಗೌಡರ, ಶಿವಬಸು ಮಿರ್ಜಿ ಹಾಗು ಗಾಣಸಿರಿ ನಗರದ ಯುವಕರು ಆಗಮಸಿದ್ದರು.
ಪ್ರಾರಂಭದಲ್ಲಿ ಆನಂದ ನೇಮಗೌಡರ ಹಾಗೂ ಮಹಾದೇವ ಕುಲಗೋಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಸ್ವಾಗತ ಸದಾನಂದ ನೇಮಗೌಡರ ನೆರೆವೇರಿಸಿದರು.ನಿರೂಪಣೆ ಹನಮಂತ ಗಾಣಿಗೇರ ನೆರೆವೇರಿಸಿದರು. ನಂತರ ಮೀರಾ ಮೆಲೊಡಿ ಆರ್ಕೆಸ್ಟ್ರಾ ಸೌಂಡ ಸಿಸ್ಟಮ್ ಸಸಾಲಟ್ಟಿ ಇವರು ಕಾರ್ಯಕ್ರಮವನ್ನು ಅತಿ ಅದ್ದೂರಿಯಾಗಿ ನಡೆಸಿಕೊಟ್ಟರು.