Homeಸುದ್ದಿಗಳುಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ರಕ್ತದಾನ ಮಾಡಿದ ಇಳಕಲ್ ಯುವಕರು

ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ರಕ್ತದಾನ ಮಾಡಿದ ಇಳಕಲ್ ಯುವಕರು

ಇಳಕಲ್ : ರಾಷ್ಟ್ರಕೂಟ ರೆಡ್ಡಿ ಪರಿವಾರ ಹುನಗುಂದ ಇಳಕಲ್ ತಾಲೂಕ ಸಮಿತಿ ವತಿಯಿಂದ ಇಳಕಲ್ ನಗರದ ಎಪಿಎಂಸಿ ಆವರಣದಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ದೇವಸ್ಥಾನದಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಸಂಭ್ರಮದಿಂದ ನಡೆಯಿತು. ಜಯಂತಿಯ ಅಂಗವಾಗಿ ವಿಜಯ ಮಹಾಂತ ರಕ್ತ ಕೇಂದ್ರ ಇಳಕಲ್, ರಾಮನಗೌಡ ಆಸ್ಪತ್ರೆ ರಕ್ತ ಕೇಂದ್ರ ಮುಧೋಳ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಬೆಳಗ್ಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಮೂರ್ತಿಗೆ ಅಭಿಷೇಕ ಪೂಜಾ ಕಾರ್ಯಕ್ರಮಗಳು ನಡೆದವು. ತಾಲೂಕಿನ ವಿವಿಧ ಗ್ರಾಮದಿಂದ ಆಗಮಿಸಿದ ಸದ್ಭಕ್ತರು ಹೇಮರೆಡ್ಡಿ ಹಾಗೂ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಜಯಂತಿಯ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಬೆಳಗ್ಗೆ 9:00 ರಿಂದ ಸ್ವಯಂ ಪ್ರೇರಿತವಾಗಿ ಸಮಾಜ ಬಾಂಧವರು ಹಾಗೂ ಸರ್ವ ಸಮಾಜದವರು ರಕ್ತದಾನ ಮಾಡಿದರು. 76 ಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ವಿಶೇಷವಾಗಿ ಜಯಂತ್ಯುತ್ಸವವನ್ನು ಆಚರಿಸಿದರು.

ಜಯಂತ್ಯುತ್ಸವ ಸಮಾರಂಭದಲ್ಲಿ ಗುರುಹಿರಿಯರು ಯುವ ಮಿತ್ರರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ವಿಚಾರಧಾರೆಗಳನ್ನು ಯುವ ಮಿತ್ರರಿಗೆ ತಿಳಿ ಹೇಳಿದರು.

ಜಯಂತ್ಯುತ್ಸವದ ಕಾರ್ಯಕ್ರಮದ ಅಂಗವಾಗಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ಎಲ್ಲ ಯುವ ಮಿತ್ರರಿಗೆ, ರೆಡ್ಡಿ ಸಮಾಜದ ಹಾಗೂ ಸರ್ವ ಸಮಾಜದ ಗುರು ಹಿರಿಯರಿಗೆ ರಾಷ್ಟ್ರಕೂಟ ರೆಡ್ಡಿ ಪರಿವಾರದ
ಯುವ ಬಳಗವು ಧನ್ಯವಾದಗಳನ್ನು ತಿಳಿಸಿತು

RELATED ARTICLES

Most Popular

error: Content is protected !!
Join WhatsApp Group