ಸಿಂದಗಿ; ಭಾರತೀಯ ಇತಿಹಾಸ ಪರಂಪರೆಯಲ್ಲಿ ಭಕ್ತಿಗೆ ಬಹಳ ಮಹತ್ವವಾದ ಸ್ಥಾನವಿದೆ. ಭಕ್ತಿ ಜ್ಞಾನದಿಂದ ಕೂಡಿರಬೇಕು. ಭಕ್ತಿ ಶಕ್ತಿಯಾಗಲು ಅನನ್ಯ ಭಕ್ತಿ ಶ್ರದ್ಧೆಯ ಅವಶ್ಯಕತೆ ಇದೆ ಯುವಕರಲ್ಲಿ ಹುಮ್ಮಸ್ಸು,ತೇಜಸ್ಸು, ರಾಷ್ಟ್ರೀಯ ಭಾವೈಕ್ಯತೆ, ಜಾತ್ಯತೀತತೆ ಭಾವನೆಯನ್ನು ಹೊಂದಿ ಸದೃಢ ರಾಷ್ಟ್ರವನ್ನು ಕಟ್ಟಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ. ಅರವಿಂದ ಎಮ್. ಮನಗೂಳಿ ಕರೆ ನೀಡಿದರು.
ತಾ.ಶಿ.ಪ್ರ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎನ್.ಎಸ್.ಎಸ್, ಆಯ್.ಕ್ಯೂ.ಎ.ಸಿ, ಎನ್.ಸಿ.ಸಿ ಮತ್ತು ಯುಥ್ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರವರ 159ನೇ ಜನ್ಮ ದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಯುವ ಸಪ್ತಾಹ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶಕ್ಕೆ ಸದೃಢ ಯುವಕರ ಅವಶ್ಯಕತೆ ಇದೆ. ಭಾರತ ಮಹಾನ್ ವ್ಯಕ್ತಿಗಳ ಕಂಡ ನಾಡು ಅವರ ತತ್ವ ಆದರ್ಶಗಳು ಸಿದ್ದಾಂತಗಳನ್ನು ಇಂದಿನ ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಸಿದ್ಧರಾಗಬೇಕು. ಇಂದು ಧರ್ಮ ರಾಜಕೀಯದ ಅಸ್ತ್ರವಾಗಿದೆ. ಆದ್ದರಿಂದ ದೇಶದ ಅಖಂಡತೆಗೆ ಸಾರ್ವಭೌಮತ್ವಕ್ಕೆ ಮಾರಕವಾಗಿದೆ.ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಸಹಿಷ್ಣುತೆ ಜಾತ್ಯತೀತತೆಯಿಂದ ಕೂಡಿದ ರಾಷ್ಟ್ರವನ್ನು ಕಟ್ಟಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎ.ಬಿ.ಸಿಂದಗಿ ಮಾತನಾಡಿ, ಸಮಾಜದಲ್ಲಿನ ಮೌಡ್ಯಗಳನ್ನು ತೊಲಗಿಸಿ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆಯನ್ನು ಒದಗಿಸಿ ಕೊಟ್ಟು ಉತ್ತಮ ಸಮಾಜ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರ ಆದರ್ಶಗಳು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಯುವ ಸಪ್ತಾಹ ಅಂಗವಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಎನ್.ಎಸ್.ಎಸ್ ಸಂಯೋಜನ ಅಧಿಕಾರಿ ಪ್ರೊ. ಬಿ.ಜಿ. ಮಠ ಸ್ವಾಗತಿಸಿದರು. ಪ್ರೊ. ಬಸವರಾಜ ಗುರುಶೆಟ್ಟಿ ಪರಿಚಯಿಸಿದರು. ಪ್ರೊ. ರಾಹುಲ ಕಾಂಬಳೆ ನಿರೂಪಿಸಿದರು. ಆಯ್.ಕ್ಯೂ.ಎ.ಸಿ ಸಂಯೋಜಕ ಪ್ರೊ. ಎಸ್.ಕೆ. ಹೂಗಾರ ವಂದಿಸಿದರು.