spot_img
spot_img

ಯುವಜನತೆ ರಾಷ್ಟ್ರ ಸೇವೆಗೆ ಕಂಕಣಬದ್ಧರಾಗಿರಬೇಕು: ಪ್ರೊ. ಶೆಟ್ಟೆಪ್ಪ ಪಂಡ್ರೋಳಿ

Must Read

spot_img
- Advertisement -

ಮೂಡಲಗಿ: ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಯುವಶಕ್ತಿ ಭಾಗಿಯಾಗುವ ಮೂಲಕ ಸ್ವಯಂ ವಿಕಸನದ ಜೊತೆಗೆ ರಾಷ್ಟ್ರ- ಸಮಾಜದ ವಿಕಾಸ ಸಾಧ್ಯವಾಗುತ್ತದೆ. ರಾಷ್ಟ್ರದ ಸೇವೆಗೆ ನಾವು ಕಂಕಣಬದ್ಧರೆಂಬ ಭಾವನೆ ಮೂಡಿಸುತ್ತದೆ ಎಂದು ಗೋಕಾಕ‌ದ ಜೆ.ಎಸ್.ಎಸ್. ಕಾಲೇಜಿನ ಅಧ್ಯಾಪಕ ಶೆಟ್ಟೆಪ್ಪ ಪಂಡ್ರೋಳಿ ನುಡಿದರು.

ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ರಾಜಾಪೂರದಲ್ಲಿ ಹಮ್ಮಿಕೊಂಡಿರುವ ೨೦೨೩-೨೪ನೇ ಸಾಲೀನ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನ ರವಿವಾರ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವ್ಯಕ್ತಿತ್ವ ವಿಕಸದ ಎನ್ನುವುದು ನಿತ್ಯ ನಡೆಯುವಂತಹ ಪ್ರಕ್ರಿಯೆ ಶಿಕ್ಷಣ, ಕ್ರೀಡೆ, ಸಂಗೀತ, ನಾಟಕ ಹೀಗೆ  ಪ್ರತಿ ಕ್ಷೇತ್ರದ ಚಟುವಟಿಕೆಯಲ್ಲಿ ನಿತ್ಯ ಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಸಾಗಬೇಕು ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

- Advertisement -

ಆಂಗ್ಲಭಾಷಾ ಉಪನ್ಯಾಸಕ ಬಿ.ಸಿ. ಮಾಳಿ ಮಾತನಾಡಿ, ಎನ್ನೆಸ್ಸೆಸ್ ಹೊಸ ಹೊಸ ಜವಾಬ್ದಾರಿಗಳ ಅರಿವು ಮೂಡಿಸುತ್ತದೆ. ರಾಷ್ಟ್ರೀಯ ಭಾವೈಕ್ಯತೆ ಬೇಳೆಸಿಕೊಂಡು ಮಾದರಿ ವ್ಯಕ್ತಿಗಳಾಗಿ ರೂಪಗೊಳ್ಳಲು ಈ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ್ ಸದ್ಯರಾದ ಶ್ರೀಮತಿ ಸಂಗೀತಾ ರಾ. ಹರಿಜನ ಅಧ್ಯಕ್ಷತೆ ವಹಿಸಿದ್ದರು.

ಕುಮಾರಿ ವೀಣಾ  ಕಂಕಣವಾಡಿ ನಿರೂಪಿಸಿದರು. ಪ್ರೇಮಾ ಪೂಜೇರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕೀರ್ತಿ ಗದಾಡಿ ಸ್ವಾಗತಿಸಿದರು. ನಿಂಗವ್ವ ಹೊಸೂರ ವಂದಿಸಿದರು.

- Advertisement -
- Advertisement -

Latest News

ಜಾನುವಾರುಗಳಿಗೆ ಉಚಿತ ತಪಾಸಣಾ ಶಿಬಿರ

ಶ್ರೀಮತಿ ಸೋಮವ ಚನ್ನಬಸಪ್ಪ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಕೆ ಕೊಪ್ಪ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ವತಿಯಿಂದ ಜಾನುವಾರುಗಳಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group