Creditಜೂನ್ 9 ವಿಶೇಷ ದಿನದ ಬಗ್ಗೆ ಗೂಗಲ್ scroll ಮಾಡಿದಾಗ ತಿಳಿದುಬಂದಿದ್ದು ಇವತ್ತು ‘ National sex day ಎಂದು !
ಆದರೆ ಮುಂದೆ ಓದಿದಾಗ ಅಲ್ಲಿರುವ ವಿವರಣೆಯೇ ಬೇರೆ. ಅದನ್ನು ಬಿಡಿ, ಸೆಕ್ಸ್ ಅಥವಾ ಲೈಂಗಿಕತೆಯ ಬಗ್ಗೆ ನಮ್ಮ ಭಾರತೀಯ ವಿಚಾರಧಾರೆಯ ಅಡಿಯಲ್ಲೇ ನಾವು ಚಿಂತಿಸೋಣ.
ಲೈಂಗಿಕತೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಪದ್ಧತಿ. ದೇಹಕ್ಕೆ ಅನ್ನ ನೀರು ಗಾಳಿ ಅಗತ್ಯವಿದ್ದಂತೆ ಲೈಂಗಿಕತೆ ಕೂಡ ಅಗತ್ಯ. ಗಂಡು ಹೆಣ್ಣು ಪರಸ್ಪರ ಒಪ್ಪಿಗೆಯಿಂದ, ಪ್ರೀತಿಯಿಂದ ಒಂದಾಗುವ ಪ್ರಕ್ರಿಯೆ ಉತ್ತಮ ಲೈಂಗಿಕ ಸಂಬಂಧ ಎನಿಸಿಕೊಳ್ಳುತ್ತದೆ.
ಸೆಕ್ಸ್ ಬಗ್ಗೆ ನಮ್ಮ ಪ್ರಾಚೀನ ಶಿಲ್ಪಕಲೆಗಳಲ್ಲಿಯೂ ನಮ್ಮ ಪೂರ್ವಿಕರು ಕೆತ್ತಿ ಅದರ ಪ್ರಾಮುಖ್ಯತೆ ಸಾರಿದ್ದಾರೆ. ಆದರೆ ಲೈಂಗಿಕತೆ ಬಗ್ಗೆ ಪಾಶ್ಚಾತ್ಯರ ದೃಷ್ಟಿಕೋನವೇ ಬೇರೆ. ಭಾರತೀಯರಷ್ಟು ವಿಶಾಲ ಹೃದ್ಯ ದೃಷ್ಟಿಕೋನವನ್ನು ಅಲ್ಲಿ ಕಾಣಲು ಸಾಧ್ಯವಿಲ್ಲ.
ಜೂನ್ 9 ಅಂದರೆ 6-9 ಅಂಕಿಗಳನ್ನೇ ಹೀಗೇ ಜೋಡಿಸಿ ಗಂಡು ಹೆಣ್ಣಿನ Oral sex ಬಗ್ಗೆ ಹೆಚ್ಚು ಪ್ರದರ್ಶನ ನೀಡುತ್ತಾರೆ ಪಾಶ್ಚಾತ್ಯರು. ನಮ್ಮ ಶಿಲ್ಪಿಗಳು ಖಜುರಾಹೋ ಅಲ್ಲದೆ ಅನೇಕ ಪ್ರಾಚೀನ ದೇವಾಲಯಗಳ ಶಿಲ್ಪಗಳ ಮೇಲೆ ಲೈಂಗಿಕ ಹಾವಭಾವಗಳನ್ನು ಕೆತ್ತನೆ ಮಾಡಿ ಸಮರಸದ ಲೈಂಗಿಕತೆಯ ಮಹತ್ವ ಸಾರಿದ್ದಾರೆ.
ಸುರಕ್ಷಿತ ಲೈಂಗಿಕತೆ, ಪರಸ್ಪರ ಒಮ್ಮತದ ಲೈಂಗಿಕತೆ ಹಾಗೂ ಅರ್ಹ ವಿವಾಹಿತ ಜೋಡಿಯ ಲೈಂಗಿಕತೆ ಜೀವನದಲ್ಲಿ ಸಾಮರಸ್ಯ, ಪ್ರೀತಿ ಮೂಡಿಸುತ್ತದೆ. ದೇಹ, ಮನಸುಗಳನ್ನು ಆರೋಗ್ಯಕರವನ್ನಾಗಿ ಇಡುತ್ತದೆ. ಸಾಮಾಜಿಕ ಆರೋಗ್ಯಕ್ಕೂ ಇದು ಕೊಡುಗೆ ನೀಡುತ್ತದೆ.
ಇಂದು ನಿಮ್ಮ ಪ್ರೀತಿ ಪಾತ್ರ ಸಂಗಾತಿಯೊಂದಿಗೆ ಸೆಕ್ಸ್ ಮಾಡಿ. National sex day ಅಂಗವಾಗಿ ಏನಾದರೂ ಕಾಣಿಕೆ ನೀಡಿ ಅದು ಎಂದೂ ಮರೆಯದಂತಿರಬೇಕು !!
ತುಂಬಾ ಅರ್ಥ ಪೂರ್ಣ ಮಾಹಿತಿ.ಸೆಕ್ಸ ಅದ್ರೆ ಅಸಹ್ಯ ಅಂದು ಕೊಳ್ಳುವ ದೇಶದ ಜನ ಸಂಖ್ಯೆ 130 ಕೋಟಿ