ಇಂದಿನ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಹದಿಹರೆಯದಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವರು ಕಷ್ಟಪಡುತ್ತಿದ್ದಾರೆ. ಆದರೆ ಚಿಂತೆ ಬೇಡ! ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ನೈಸರ್ಗಿಕ ಮಾರ್ಗಗಳಿವೆ.
ರಾಸಾಯನಿಕ ಉತ್ಪನ್ನಗಳಿಗೆ ಗುಡ್‌ಬೈ!
ಕೂದಲಿಗೆ ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆ ಕುಂಠಿತಗೊಳ್ಳಬಹುದು....
ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್‍ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು.
ಕಿವಿಗೆ ಇಯರ್ ಫೋನ್ ಹಾಕಿಕೊಂಡೋ ಇಲ್ಲವೇ ಸಂಗೀತ ಆಲಿಸುತ್ತ ಓದುವುದು.ಒಂದು ಕೈಯಲ್ಲಿ ಹಬೆಯಾಡುವ ಚಹ/ಕಾಫಿ ಕಪ್ ಹಿಡಿದು ಗುಟುಕರಿಸುತ್ತ,ಇನ್ನೊಂದು ಕೈಯಲ್ಲಿ ಪುಸ್ತಕ ಹಿಡಿದು ಓದುವುದು. ಇವೆಲ್ಲವೂ...
ಹಲಸು ಎಂದಾಕ್ಷಣ ನೆನಪಿಗೆ ಬರುವುದು ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣು, ಇದರ ಕಾಯಿ ಹಣ್ಣು ಬೀಜ ಗಳಲ್ಲಿ ತರಹೆವಾರು ಖಾದ್ಯ ಮಾಡಿ ತಿನ್ನುತ್ತೇವೆ.ಪಲ್ಯ, ಗೊಜ್ಜು, ಸಾಂಬಾರು,ಕಾಯಿರಸ, ಮಜ್ಜಿಗೆ ಹುಳಿ, ಬೋಂಡಾ, ಗೋಬಿ, ಹೋಳಿಗೆ, ಜಾಮ್, ಸುಟ್ಟೆವು, ಕಡುಬು,ಹಪ್ಪಳ, ಚಕ್ಕುಲಿ, ಒಂದೇ ಎರಡೇ.
ಸಾಮಾನ್ಯವಾಗಿ ಮೇ ಜೂನ್ ಜುಲೈ ಹೆಚ್ಚಾಗಿ ಕಾಣಿಸಿರುವ ಅಪರೂಪಕ್ಕೆ ಬೇರೆ ಸಮಯದಲ್ಲೂ ಸಿಗುವ...
ನಮ್ಮ ವಾಡಿಕೆಯಲ್ಲಿ ನೀಲಿ ಸೊಪ್ಪು ಎನ್ನುವುದಕ್ಕಿಂತ ಇಂಡಿಗೋ ಎಂದರೆ ಜನರಿಗೆ ಬೇಗನೆ ಅರ್ಥವಾಗುತ್ತದೆ.
ಇದನ್ನು ಸಾಧಾರಣವಾಗಿ ಕೂದಲಿನ ಬಣ್ಣ ಬರಿಸಲು ಹಿಂದೆ ಶಾಯಿ ಎಂದರೆ ಇಂಕ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಈಗ ಇವೆರಡಕ್ಕೂ ಕೆಮಿಕಲ್ ಪ್ರವೇಶ ಆಗಿದೆ.
ಈಗಲೂ ನಾವು ಮನಸ್ಸು ಮಾಡಿದರೆ ಕೆಮಿಕಲ್ ಮುಕ್ತವಾಗಿ ಕೂದಲನ್ನು ಕಪ್ಪಾಗಿಸಬಹುದು.
ಇದಕ್ಕೆ ಪ್ರಮುಖ ಪಾತ್ರ ನೀಲಿ ಸೊಪ್ಪು ವಹಿಸುತ್ತದೆ ಬಣ್ಣ ಹಸಿರಾಗಿದ್ದರು...
ಮೆಂತ್ಯ ಬಲ್ಲದವರಿಲ್ಲ. ಸಾಂಬಾರ ಪದಾರ್ಥಗಳಲ್ಲಿ ಮುಖ್ಯವಾದ ಸಾಂಬಾರು ದಿನಸುಗಳಲ್ಲಿ ಒಂದು ಮೆಂತ್ಯ. ಸ್ವಲ್ಪ ಕಹಿ ಗುಣವನ್ನು ಹೊಂದಿದ್ದರು ರುಚಿಯನ್ನು ಕೊಡಬಲ್ಲದು. ಇದರಲ್ಲಿ ಔಷಧೀಯ ಗುಣಗಳು ಇದೆ ನಮ್ಮ ಪೂರ್ವಿಕರು ಆಹಾರವನ್ನು ಔಷಧಿಯನ್ನಾಗಿ ಉಪಯೋಗಿಸುತ್ತಿದ್ದರು. ಈಗ ವಿಪರ್ಯಾಸ ಏನೆಂದರೆ ಕೆಲವು ಮನೆಗಳಲ್ಲಿ ಔಷಧಿಯೇ ಆಹಾರವಾಗಿದೆ.
ಮೆಂತ್ಯವನ್ನು ನೆನೆಸಿ ಅರೆದು ಸ್ವಲ್ಪ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚುವುದರಿಂದ...
ಫೆಬ್ರವರಿ ,ಮಾರ್ಚ್, ಎಪ್ರಿಲ್ ತಿಂಗಳು ಗಳಲ್ಲಿ ಸಿಕ್ಕುವ ಹಣ್ಣು ತಿನ್ನಲು ಯೋಗ್ಯ. ಒಂದು ಜಾತಿಯ ನೇರಳೆ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯುವುದು ಮೇ,ಜೂನ್ ತಿಂಗಳಲ್ಲಿ ಇದು ಗಂಟಲು ನೋವು ಉಂಟುಮಾಡುತ್ತದೆ. ನಮ್ಮಲ್ಲಿ ಇದನ್ನು ಗಂಟಲಗಳಲೆ ಅಂತ ಕರೀತಾರೆ.
ಎಲೆ, ಚಕ್ಕೆ, ಬೀಜ, ಹಣ್ಣು ಗಳಲ್ಲಿ ಔಷಧಿ ಗುಣ ತುಂಬಾ ಇದೆ.
ಪಕ್ವಗೊಂಡ ಹಣ್ಣನ್ನು ಸ್ವಚ್ಚ ಮಾಡಿ ನೆರಳಲ್ಲಿ...
ಯುಗಾದಿ ಎಂದರೆ ಮಾವು ಬೇವುಗಳ ಸಮಾಗಮ ಮಾವು ಚಿಗುರಿ ಬಿಟ್ಟು ನಳನಳಿಸುತ್ತಿದೆ ಬೇವು ಹೂ ಬಿಟ್ಟು ಪರಿಮಳ ಸೂಸುತ್ತಿರುತ್ತದೆ. ಎರಡು ವನಸ್ಪತಿಗಳ ಸಂಗಮ. ಮಾವು ಸೌಭಾಗ್ಯ ಸಂಕೇತ ಬೇವು ಆರೋಗ್ಯದ ಸಂಕೇತ. ಇವೆರಡನ್ನು ಮಿಲನ ಮಾಡಿ ಯುಗದ ಆದಿಗೆ ಉಪಯೋಗಿಸಲು ಸೂಚಿಸಿದ ಹಿರಿಯರಿಗೆ ಒಂದು ಸಲಾಂ. ಹಬ್ಬದ ದಿನ ಸಂಭ್ರಮಿಸಿದ ತೋರಣ ವನ್ನು ಔಷಧಿಯಾಗಿಯೂ...
Holi 2023 Tips: ಬಣ್ಣಗಳ ಹಬ್ಬವಾದ ಹೋಳಿಯನ್ನು ಬಹಳ ಕಾತುರದಿಂದ ನಿರೀಕ್ಷಿಸಲಾಗುತ್ತಿದೆ. ಬಣ್ಣಗಳು, ಗುಲಾಲ್ ಮತ್ತು ಅಬೀರ್ ಹೋಳಿಗೆ ಸಂಬಂಧಿಸಿವೆ. ಆದರೆ ಬಣ್ಣಗಳೊಂದಿಗೆ ಆಟವಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಕಣ್ಣು ಮತ್ತು ಚರ್ಮಕ್ಕೆ ಹಾನಿಯಾಗಬಹುದು.
ಹಬ್ಬದ ಮೋಜು ಮಸ್ತಿಯಾಗದಂತೆ, ಸಂತಸ ಅಖಂಡವಾಗಿ ಉಳಿಯಲು ಒಂದಷ್ಟು ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಕೆಲವು ಸಲಹೆಗಳಿಗೆ ಗಮನ ಕೊಡುವ ಮೂಲಕ, ನೀವು...
ಅತ್ತಿ(ಔದುಂಬರ) ಹೆಚ್ಚಿನವರು ಹೋಮದಲ್ಲಿ ಮಾತ್ರ ಉಪಯೋಗಿಸುವ ಒಳ್ಳೆಯ ಔಷಧೀಯ ಗುಣವುಳ್ಳ ಸಸ್ಯ.
ಇದರ ಬೇರು ಕಾಂಡ ಎಲೆ ಹಣ್ಣು ಕಾಯಿ ಎಲ್ಲವೂ ಔಷಧೀಯ ಗುಣ ಹೊಂದಿದೆ.
ಸೂರ್ಯಾಸ್ತದ ನಂತರ ಬೇರು ಕಡಿದರೆ ಮಾತ್ರ ನೀರು ಬರುತ್ತದೆ. ಉಳಿದಂತೆ ಇದರಲ್ಲಿ ಹಾಲು ಬರುತ್ತದೆ. ಇದು ಈ ಮರದ ವಿಶೇಷ.
ಹೀಗೆ ಕಡಿದ ನೀರನ್ನು ಸಂಗ್ರಹಿಸಿ ಶುಧ್ಧೀಕರಣ ಮಾಡಿ...
ನವಗ್ರಹದಲ್ಲಿ ಶನಿಯ ಪ್ರತೀಕವಾದ ಉದ್ದ ಸ್ವಭಾವದಲ್ಲೂ ಮಂದ. ಜೀರ್ಣಕಾರಿಯಲ್ಲದ ಆಹಾರ ಆದರೂ ಅನೇಕ ಔಷಧೀಯ ಗುಣವನ್ನು ಹೊಂದಿದೆ. ಸಸ್ಯಾಹಾರಿ ಗಳಿಗೆ ಮಾಂಸಾಹಾರದ ಶಕ್ತಿಯನ್ನು ಕೊಡುವ ಉದ್ದು ಅನೇಕರಲ್ಲಿ ತಾಮಸಿಕ ಆಹಾರ ಎನ್ನುವ ಅಭಿಪ್ರಾಯ ಇದೆ.
ಉದ್ದಿನ ಹಿಟ್ಟಿನ ಜೊತೆಯಲ್ಲಿ ರೇಷ್ಮೆ ವಸ್ತ್ರದ ಭಸ್ಮವನ್ನು ಸೇರಿಸಿ ನೀರಿನಲ್ಲಿ ಮಿಶ್ರ ಮಾಡಿ ನೆತ್ತಿಗೆ ಲೇಪಿಸುವುದರಿಂದ ಮೂಗಿನಲ್ಲಿ ರಕ್ತಸ್ರಾವ...