spot_img
spot_img

Do you have a habit of eating while studying? ಓದುವಾಗ ತಿನ್ನುವ ಅಭ್ಯಾಸವಿದೆಯೇ?

Must Read

- Advertisement -

ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್‍ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ  ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು.

ಕಿವಿಗೆ ಇಯರ್ ಫೋನ್ ಹಾಕಿಕೊಂಡೋ ಇಲ್ಲವೇ ಸಂಗೀತ ಆಲಿಸುತ್ತ ಓದುವುದು.ಒಂದು ಕೈಯಲ್ಲಿ ಹಬೆಯಾಡುವ ಚಹ/ಕಾಫಿ ಕಪ್ ಹಿಡಿದು ಗುಟುಕರಿಸುತ್ತ,ಇನ್ನೊಂದು ಕೈಯಲ್ಲಿ ಪುಸ್ತಕ ಹಿಡಿದು ಓದುವುದು. ಇವೆಲ್ಲವೂ ಹಲವು ಓದುವ ನಮೂನೆಗಳು. ಕೆಲವರು ಏನಾದರೂ ತಿನ್ನುವುದಿದ್ದರೂ ಅದನ್ನು ಒಂದು ಕೈಯಲ್ಲಿ ತಿನ್ನುತ್ತ ಓದುತ್ತಾರೆ, ಅದರಲ್ಲಿ ನೀವೂ ಒಬ್ಬರಾಗಿರಬಹುದು. ಹೌದು, ಒಂದು ಸಮಯಕ್ಕೆ ಒಂದೇ ಒಂದು ಕೆಲಸ ಮಾಡಿದರೆ ಸಮಯದ ಅತ್ಯಧಿಕ ಉಪಯೋಗ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವರ ಅಂಬೋಣ.

ನಮಗೂ ಮಕ್ಕಳ ಹೇಳಿಕೆ  ಒಮ್ಮೊಮ್ಮೆ ಸರಿ ಅನಿಸುತ್ತದೆ. ಹೀಗಾಗಿ ನಾವೂ ಮನೆಯಲ್ಲಿ ಅವರು ಓದುವ ಸ್ಥಳದಲ್ಲೇ ತಿಂಡಿ ಊಟದ ತಟ್ಟೆಗಳನ್ನು ಒಯ್ದು ಕೊಡುತ್ತೇವೆ. ಓದಿಗೆ ಹೆಚ್ಚು ಸಮಯ ನೀಡಬಹುದು ಹೆಚ್ಚು ಅಂಕ ಪಡೆಯಲು ಸಹಾಯವಾಗುವುದು ಎನ್ನುವ ವಿಚಾರದಿಂದ ಪಾಲಕರೂ ಇದಕ್ಕೆ ಸಹಮತ ನೀಡುತ್ತಾರೆ.

- Advertisement -

ಪುಸ್ತಕದ ಓದಿನ ಜೊತೆಗೆ ದಿನ ನಿತ್ಯದ ಆಗು ಹೋಗುಗಳನ್ನು ದಿನ ಪತ್ರಿಕೆಯಲ್ಲಿ ನಿಯತಕಾಲಿಕೆಗಳಲ್ಲಿ ಓದಿ ತಿಳಿಯಲೇಬೇಕು ಎಂಬ ಕಟ್ಟಾ ನಿಯಮ ಕೆಲ ಪಾಲಕರದು. ಅದು ಒಳ್ಳೆಯ ನಿಯಮ. ಆದರೆ ಪಠ್ಯ ಪುಸ್ತಕ ಓದುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ಇನ್ನು ಈ ಓದಿಗೆ ಎಲ್ಲಿ ಸಮಯ ಒದಗಿಸುವುದು? ಎಂಬ ಸಮಸ್ಯೆ ಉದ್ಭವಿಸುತ್ತದೆ. ಅಂದಿನಿಂದ ಮಕ್ಕಳಿಗೆ ಊಟ ತಿಂಡಿಯ ಜೊತೆ ಪತ್ರಿಕೆಗಳನ್ನೂ ನೀಡಲಾಗುತ್ತದೆ. ಮೊದ ಮೊದಲು ಇರುಸು ಮುರುಸು ಎನಿಸಿದರೂ ಬರು ಬರುತ್ತ ಮಕ್ಕಳಿಗೆ ಅದು ರೂಢಿಯಾಗಿ ಬಿಡುತ್ತದೆ. 

ಪರಿಣಾಮಗಳು:

  • ತಾವೇನು ತಿನ್ನುತ್ತಿದ್ದಾರೆ ಅದರ ರುಚಿ ಹೇಗಿದೆ ಎನ್ನುವುದರ ಅರಿವು ಅವರಿಗೆ ಆಗುವುದೇ ಇಲ್ಲ.
  • ಹೋಗಲಿ ಓದಿದ್ದಾರೂ ಸಂಪೂರ್ಣವಾಗಿ ತಲೆಗೆ ಹತ್ತಿತಾ ಕೇಳಿ ನೋಡಿ ಅದೂ ಇಲ್ಲ.
  • ಎರಡೂ ಕೆಲಸಗಳು ಅರ್ಧಂಬರ್ಧ ಯಾವುದಕ್ಕೂ ಉತ್ತಮ ಗಮನ ನೀಡಲು ಸಾಧ್ಯವಾಗುವುದಿಲ್ಲ.
  • ತಿಂದ ರುಚಿಯನ್ನೂ ಆಸ್ವಾದಿಸಲು ಆಗಲಿಲ್ಲ. ಪತ್ರಿಕೆಯನ್ನೂ ಚೆನ್ನಾಗಿ ಓದಲಾಗಲಿಲ್ಲ.
  • ಇದರರ್ಥ ಸಮಯ ಉಳಿಸಲು ಎರಡು ಕೆಲಸ ಒಮ್ಮೆಲೇ ಮಾಡಿದಂತೆನಿಸಿದರೂ ಎರಡರಲ್ಲಿ ಒಂದು   ಕೆಲಸಕ್ಕೂ ನ್ಯಾಯ ಸಲ್ಲಿಸಿದಂತಾಗುವುದಿಲ್ಲ.
  • ಚಿಪ್ಸ್ ಚಕ್ಕುಲಿ ಕುರುಕಲು ತಿಂಡಿ ತಿನ್ನುತ್ತ ಓದುವುದನ್ನು ರೂಡಿಸಿಕೊಂಡರೆ ಅಪಾಯ ಖಚಿತ. ಏಕೆಂದರೆ ತಿನ್ನುವ ಪ್ರಮಾಣಕ್ಕಿಂತ ಹೆಚ್ಚು ತಿಂದು ಮೈಯಲ್ಲಿ ಬೊಜ್ಜು ಶೇಖರಣೆ ಆಗುತ್ತದೆ. ಬೊಜ್ಜು ಬೇರೆ ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ.
  • ತಿನ್ನಲು ಹಟ ಮಾಡುವ ಮಕ್ಕಳಿಗೆ ಕೆಲ ಪಾಲಕರು ಟಿವಿಯಲ್ಲಿ ಬರುವ ಧಾರಾವಾಹಿ ನೋಡುತ್ತ, ಇಲ್ಲವೇ ಕೈಯಲ್ಲಿ ಮೊಬೈಲ್ ಕೊಟ್ಟು ಗೇಮ್ಸ್ ಆಡುತ್ತ ಆಹಾರ ಸೇವಿಸುವುದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಇದರಿಂದ ಆಹಾರದ ರುಚಿ ತಿಂದ ಪ್ರಮಾಣ ಗೊತ್ತಾಗುವುದೇ ಇಲ್ಲ. ಇನ್ನೂ ಮುಂದುವರೆದು ಕೆಲ ಬೆಳೆದ ಮಕ್ಕಳು ವಾಟ್ಸಪ್ ಫೇಸ್ ಬುಕ್ ನಲ್ಲಿ ಜಾಲಾಡುತ್ತ ಸ್ನೇಹಿತರೊಂದಿಗೆ ಮಾತನಾಡುತ್ತ ಊಟ ಮಾಡುತ್ತಾರೆ. ಈ ಕೆಟ್ಟ ಚಟದಿಂದ ಮುಂದೊಂದು ದಿನ ಅನಾರೋಗ್ಯ ಅನುಭವಿಸುವುದು ಖಚಿತ.

ಎಷ್ಟೋ ಜನರು ಎರಡೆರಡು ಕೆಲಸಗಳನ್ನು ಮಾಡುವವರನ್ನು ನೋಡಿದ್ದೇವೆ. ಅವರಿಗಿಲ್ಲದ ಸಮಸ್ಯೆ ನಮಗೇಕೆ ಎಂಬ ಪ್ರಶ್ನೆ ತಲೆಯಲ್ಲಿ ಹೊಳೆಯ ಬಹುದು. ಹಾಗೆ ಎರಡು ಕೆಲಸದಲ್ಲಿ ತೊಡಗಿಕೊಳ್ಳುವವರು ಮುದ್ದಾಂ ಆಗಿ ಮೈ ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸುವಂತೆ ಮೊದಲಿನಿಂದ ರೂಡಿಸಿಕೊಂಡಿರುತ್ತಾರೆ. ಅಡುಗೆ ಮನೆಯಲ್ಲಿ ತಾಯಂದಿರು ರೊಟ್ಟಿ ಮಾಡುತ್ತ ಹಾಲನ್ನೂ ಕಾಯಿಸುತ್ತಾರೆ. ರೊಟ್ಟಿಯನ್ನೂ ಹೊತ್ತಿಸುವುದಿಲ್ಲ. ಹಾಲನ್ನು ಉಕ್ಕಿಸುವುದಿಲ್ಲ. ಎರಡೂ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತಾರೆ. ಇದಕ್ಕೆ ಕಾರಣ ಅವರು ಮಾಡುವ ಎರಡೂ ಕೆಲಸಗಳಿಗೆ ಏಕಾಗ್ರತೆಯನ್ನು ಸಮನಾಗಿ ಹಂಚುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಒಂದು ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಮಯವಿಲ್ಲ ಎಂದು ನೆಪ ಹೇಳುವವರು ಇಂಥದನ್ನು ರೂಢಿಸಿಕೊಳ್ಳಲು ಹೋದರೆ   ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಡುಕು ಉಂಟಾಗುತ್ತದೆ.ಎಂಬ ಅಂಶವನ್ನು  ಇತ್ತೀಚಿನ ಅಧ್ಯಯನದ ಸಮೀಕ್ಷೆಗಳು ತಿಳಿಸಿವೆ.

ಪರಿಹಾರಗಳು:

  • ಒಂದು ಸಮಯಕ್ಕೆ ಒಂದೇ ಕೆಲಸ ಮಾಡಿ
  • ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮ
  • ಏಕಾಗ್ರತೆಯನ್ನು ಸಾಧಿಸುವ ಕಲೆಗಳನ್ನು ಕರಗಿಸಿಕೊಳ್ಳಿ.
  • ಸಮಯ ನಿರ್ವಹಣೆಗೆ ಒತ್ತು ನೀಡಿ.
  • ಹಿಂದಿನ ದಿನವೇ ನಾಳೆಯ ಕೆಲಸದ ಯೋಜನೆಗಳು ಮತ್ತು ಅದರ ಕುರಿತು ಸಮಯ ಹಂಚಿಕೆ ಮಾಡಿಕೊಳ್ಳಿ.
  • ಜ್ಞಾನ ಮತ್ತು ಕೌಶಲ್ಯಗಳ ವೃದ್ಧಿಗೆ ನಿರ್ಧಿಷ್ಟ ಸಮಯ ನೀಡಿ. ಅವುಗಳ ಜೊತೆ ಬೇರೆ ಕೆಸ ಬೆರೆಸಬೇಡಿ.
  • ಓದುವಾಗ ತಿನ್ನುವ ಕುಡಿಯುವ ಚಟವನ್ನು ಬಿಟ್ಟು ಬದಲಾವಣೆಗೆ ತೆರೆದುಕೊಳ್ಳಿ.
  • ಓದುವ ಕೌಶಲವನ್ನು ವೃದ್ಧಿಸಿಕೊಳ್ಳಿ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಿ.
  • ಓದಿನ ವಿಷಯದಲ್ಲಿ ಪಾಲಕರು ಪೋಷಕರು ಗುರುಗಳು ಹೇಳಿದ ಸಲಹೆಗಳನ್ನು ಅಳವಡಿಸಿಕೊಳ್ಳಿ

- Advertisement -

ಜಯಶ್ರೀ.ಜೆ.ಅಬ್ಬಿಗೇರಿ    9449234142

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group