ಸಿಂದಗಿಯಲ್ಲಿ ೧೫ ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ

0
100

ಸಿಂದಗಿ; ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನದಲ್ಲಿ ಭಾಗವಹಿಸಲು ಯುವಕರನ್ನು ಉತ್ತೇಜಿಸಲು ಜನವರಿ ೨೫ ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಇಂದಿನ ಯುವಕರು ಜಾಗೃತೆಯಿಂದ ಮತ ಚಲಾಯಿಸಬೇಕುಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ ಕೆ. ಮೊಗೇರ ಹೇಳಿದರು.

ಪಟ್ಟಣದ ಆರ್. ಡಿ ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕ ಆಡಳಿತ ವತಿಯಿಂದ “೧೫ ನೇ ರಾಷ್ಟೀಯ ಮತದಾರರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು.

ವಕೀಲರಾದ ಎ. ಎಮ್. ಅಂಗಡಿ. ಎನ್. ಬಿ. ಪೂಜಾರಿ ಅವರು ರಾಷ್ಟ್ರೀಯ ಯುವ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ. ವಹಿಸಿದ್ದರು.

ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ ಗುಂದಗಿ, ಪ್ರಾಚಾರ್ಯ ಭೀಮಗೌಡ ಸಿಂಗನಳ್ಳಿ, ಸಹಾಯಕ ಸರಕಾರಿ ವಕೀಲರಾದ ಆನಂದ. ರಾಠೋಡ, ಅಪರ ಸರಕಾರಿ ವಕೀಲರಾದ ಬಿ. ಜಿ. ನೆಲ್ಲಗಿ, ವಕೀಲರಾದ ಎಸ್. ಎಮ್. ಪಾಟೀಲ, ಎಸ್. ಕೆ. ಪೂಜಾರಿ, ಎಸ್. ಬಿ. ಖಾನಾಪೂರ. ಇದ್ದರು.