ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಬಗ್ಗೆ ಸಾಕಷ್ಟು ಮಾಹಿತಿ ಹೇಳಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇವೆ ಅದೇ ರೀತಿ ಸರಳ ಪೂಜೆಯಿಂದ ಹನುಮನ ಆಶೀರ್ವಾದವನ್ನು ಅನುಗ್ರಹವನ್ನು ಪಡೆಯಬಹುದು ಅಷ್ಟೇ ಅಲ್ಲ ಹನುಮನ ಭಕ್ತರು ಹನುಮನನ್ನು ಮನದಲ್ಲಿಯೇ ನೆನೆದರೆ ಸಾಕು ಸಾಕ್ಷಾತ್ ಆಂಜನೇಯಸ್ವಾಮಿಯೆ ಕೈಹಿಡಿದು ಸಮಸ್ಯೆಗಳನ್ನು ಪರಿಹಾರ ಮಾಡಿ ದಂತೆ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ.
ಈ ಅನುಭವ ಈಗಾಗಲೇ ಸಾಕಷ್ಟು ಹನುಮನ ಭಕ್ತರಿಗೆ ತಿಳಿದಿರುತ್ತದೆ. ಅದೇ ರೀತಿಯಲ್ಲಿ ಇಂತಹ ಪವಾಡಗಳನ್ನು ಕೂಡ ಅವರ ಜೀವನದಲ್ಲಿ ಅನುಭವ ಮಾಡಿರುತ್ತಾರೆ. ಆದರೆ ಇವತ್ತಿನ ಮಾಹಿತಿ ತಿಳಿಸುವ ಈ ವಿಚಾರವನ್ನು ನೀವು ಕೂಡ ತಿಳಿದರೆ, ಆಂಜನೇಯ ಸ್ವಾಮಿ ನಿಜಕ್ಕೂ ಚಿರಂಜೀವಿ ಅಂತ ನೀವೇ ಹೇಳ್ತೀರಾ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಈ ಅಚ್ಚರಿ ಸುಮಾರು ಮೂವತ್ತು ವರುಷಗಳಿಂದಲೂ ಕೂಡ ಈ ಅಚ್ಚರಿ ಇಲ್ಲಿ ನಡೆಯುತ್ತಲೇ ಇದೆ, ಇವರನ್ನು ಮಂಕಿ ಮ್ಯಾನ್ ಅಂತ ಕೂಡ ಕರೆಯುತ್ತಾರೆ. ಇನ್ನು ಇವರ ನಿಜವಾದ ಹೆಸರು ಚಂದ್ರ ಒರಸ್ ಎಂದು, ಯಾಕೆ ಇವರನ್ನು ಹೀಗೆ ಕರೆಯುತ್ತಾರೆ ಅಂದರೆ ಇವರು ಜನಿಸಿದಾಗಲೇ ಇವರ ದೇಹದಲ್ಲಿ ಬಾಲವೊಂದಿತ್ತು. ಜನಿಸಿದಾಗಲೇ ಈ ರೀತಿ ಹುಟ್ಟಿದ ಈ ಬಾಲಕನನ್ನು ಕಂಡು ಇಡೀ ಊರು ಅಚ್ಚರಿ ಪಟ್ಟಿತು ಹಾಗೂ ತಾಯಿ ಕೂಡ ಆಂಜನೇಯ ಭಕ್ತರಾಗಿದ್ದ ಕಾರಣ ಈ ರೀತಿ ಮಗು ಜನಿಸಿದೆ ಎಂದು ಕೆಲವರು ಮಾತನಾಡಿದರು.
ಅಷ್ಟೇ ಅಲ್ಲ ಅದೃಷ್ಟ ಎಂಬಂತೆ ಈ ಮಗು ಜನಿಸಿರುವುದು ರಾಮನವಮಿ ದಿವಸ ದಂದು ರಾಮಭಕ್ತ ಹನುಮಂತನೆ ಜನಿಸಿರುವುದಾಗಿ ತಾಯಿ ಖುಷಿ ಪಡುತ್ತಾರೆ. ಆದರೆ ತಂದೆಗೆ ಈ ವಿಚಾರವಾಗಿ ಅಸಮಾಧಾನ ಆಗುತ್ತದೆ ಹಾಗೂ ಶಾಪದಿಂದ ಈ ಮಗು ಜನಿಸಿದೆ ಎಂದು ಕೂಡ ಚಂದ್ರ ಅವರ ತಂದೆ ಭಾವಿಸುತ್ತಾರೆ.
ಚಂದ್ರ ಅವರಿಗೆ ಇರುವ ಈ ಬಾಲವನ್ನು ತೆಗೆಸುವುದಾಗಿ ಇವರ ತಂದೆ ಇಚ್ಛಿಸುತ್ತಾರೆ, ಹಾಗೆ ವೈದ್ಯರು ಈ ಬಾಲವನ್ನು ಮುಟ್ಟುತ್ತಿದ್ದ ಹಾಗೆ ಅವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಅಂದಿನಿಂದ ಚಂದ್ರ ಅವರು ಯಾವತ್ತಿಗೂ ಸಹ ಯಾರಿಗೂ ತಮ್ಮ ಬಾಲವನ್ನು ಸ್ಪರ್ಶ ಮಾಡಲು ಬಿಟ್ಟಿಲ್ಲ. ಇದರ ಜೊತೆಗೆ ಇವರ ಬಾಲ್ಯದಲ್ಲಿ ವಿಚಿತ್ರ ಶಕ್ತಿಯೊಂದು ಅಡಗಿತ್ತೋ ಈ ಬಾಲದಿಂದ ಅನೇಕ ಜನರ ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿರುವ ನಿದರ್ಶನಗಳು ಕೂಡ ಉಂಟು.
ಈ ರೀತಿ ಸುಮಾರು ಮೂವತ್ತು ವರುಷಗಳಿಂದಲೂ ಕೂಡ ಅಚ್ಚರಿ ಎಂಬಂತೆ ಚಂದ್ರ ಅವರ ದೇಹದಲ್ಲಿ ಇರುವ ಈ ಬಾಲ ಅನೇಕ ಅಚ್ಚರಿಯನ್ನು ಮೂಡಿಸಿದೆ ಅಷ್ಟೇ ಅಲ್ಲ ಸುಮಾರು ಎರಡೂವರೆ ಅಡಿ ಉದ್ದದ ಈ ಬಾಲದಿಂದ ಎಷ್ಟೋ ಮಂದಿ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದಾರೆ ಹಾಗೆ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡಿದ್ದಾರೆ. ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಂಡಿದ್ದಾರೆ ಅನಾರೋಗ್ಯಸ್ಥರು ಆರೋಗ್ಯವನ್ನು ಪಡೆದುಕೊಂಡಿದ್ದಾರೆ .
ಎಂದು ಕೂಡ ಹೇಳಲಾಗಿದೆ ಇದನ್ನೆಲ್ಲ ಕಂಡರೆ ಸಾಕ್ಷಾತ್ ಆಂಜನೇಯಸ್ವಾಮಿಯ ಅನುಗ್ರಹದಿಂದಾಗಿ ಜನಿಸಿರುವ ಮಗು ಇದಾಗಿದೆ ಎಂದು ಇಲ್ಲಿಯ ಜನರು ಭಾವಿಸಿದ್ದಾರೆ. ಅಷ್ಟಕ್ಕೂ ಚಂದ್ರರವರು ಪಶ್ಚಿಮ ಬಂಗಾಳಕ್ಕೆ ಸೇರಿರುವ ಜಲಪಾಯಗಡಿ ಎಂಬ ಊರಿಗೆ ಸೇರಿದವರಾಗಿದ್ದಾರೆ. ಇನ್ನೂ ಈ ವಾರದ ವಿಶೇಷತೆಯೇನು ಅಂದರೆ ಯಾರು ಈ ಬಾಲದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂಥವರು ಜೀವನದಲ್ಲಿ ಕಷ್ಟ ಎದುರಿಸುತ್ತಾರೆ ಹಾಗೂ ಅನಾರೋಗ್ಯ ಸ್ಥರಾಗುತ್ತಾರೆ ಎಂಬ ಉದಾಹರಣೆಗಳು ಕೂಡ ಇಲ್ಲಿ ಕಾಣಬಹುದಾಗಿದೆ.