ಮನುಷ್ಯ ನಿದ್ರಿಸಿದಾಗ ಆತ ಶರೀರ ಮಾತ್ರ ವಿಶ್ರಾಂತಿ ಸ್ಥಿತಿಯಲ್ಲಿ ಇರುವುದಿಲ್ಲ ಆತನ ಮನಸ್ಸು ಕೂಡ ವಿಶ್ರಾಂತಿ ಸ್ಥಿತಿಯಲ್ಲಿ ಇರಬೇಕಾಗುತ್ತದೆ ಆಗಲೇ ಆ ನಿದ್ರೆಗೆ ಅರ್ಥ ಸಿಗುತ್ತದೆ. ಆದರೆ ಮನಸ್ಸು ಏನನ್ನೋ ಯೋಚನೆ ಮಾಡುತ್ತಾ ಇದ್ದರೆ ಶರೀರಕ್ಕೂ ಕೂಡ ವಿಶ್ರಾಂತಿ ದೊರೆಯುವುದಿಲ್ಲ. ಇನ್ನು ನಿದ್ರಿಸಿದಾಗ ಕೆಲವರಿಗೆ ಕೆಲವೊಂದು ಸನ್ನಿವೇಶಗಳು ಕಣ್ಮುಂದೆ ಬರುತ್ತದೆ ಇನ್ನು ಕೆಲವರು ಮಲಗುವಾಗ ಯೋಚನೆ ಮಾಡಿ ಮಲಗಿದ ವಿಚಾರದ ಮೇಲೆ ಕನಸುಗಳು ಕೂಡ ಬರುತ್ತದೆ.
ಆದರೆ ಕೆಲವೊಂದು ವಿಚಾರಗಳು ಮನುಷ್ಯನಿಗೆ ಮನುಷ್ಯನ ಕನಸಿನಲ್ಲಿ ಸುಮ್ಮನೆ ಬರುವುದಿಲ್ಲ, ಅದು ಶುಭ ಅಶುಭದ ಸಂಕೇತ ಆಗಿರುತ್ತದೆ. ಅದೇ ರೀತಿ ಕೆಲವೊಂದು ಪ್ರಾಣಿ ಪಕ್ಷಿಗಳು ಕೆಲವೊಂದು ವಸ್ತುಗಳು ಕನಸಿನಲ್ಲಿ ಬಂದರೆ ಅದು ಶುಭ ಮತ್ತು ಅಶುಭ ಸೂಚನೆ ನೀಡುತ್ತಾ ಇರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಂಡು ಅಶುಭ ಸಂಕೇತವಾಗಿದ್ದರೆ ಅದಕ್ಕೆ ತಕ್ಕ ಪರಿಹಾರಗಳನ್ನು ಪಾಲಿಸುವುದರಿಂದ, ಮುಂದಿನ ದಿವಸಗಳಲ್ಲಿ ಯಾವ ತೊಂದರೆಗಳು ಕೂಡ ಆಗುವುದಿಲ್ಲ.
ಇವತ್ತಿನ ಮಾಹಿತಿಯಲ್ಲಿ ಕನಸಿನಲ್ಲಿ ಬರುವ ಕೆಲವೊಂದು ವಿಚಾರಗಳು ಹೇಗೆ ಅಶುಭ ಮತ್ತು ಶುಭಾ ಎಂಬುದನ್ನು ತಿಳಿದುಕೊಳ್ಳೋಣ, ಸಂಪೂರ್ಣವಾಗಿ ಈ ಲೇಖನವನ್ನು ತಿಳಿಯಿರಿ. ಮೊದಲು ಕನಸಿನಲ್ಲಿ ಯಾವ ಕೆಲವೊಂದು ಪ್ರಾಣಿಗಳು ಪಕ್ಷಿಗಳು ಅಥವ ವಸ್ತುಗಳು ಬಂದರೆ ಅಶುಭ ಎಂಬುದನ್ನು ತಿಳಿದುಕೊಳ್ಳೋಣ. ಕನಸಿನಲ್ಲಿ ಏನಾದರೂ ಯಮರಾಜನ ವಾಹನವಾದ ಎಮ್ಮೆ ಕಾಣಿಸಿಕೊಂಡರೆ,
ಇದು ಅಪಮೃತ್ಯುವಿನ ಸಂಕೇತ ಆಗಿರುತ್ತದೆ, ಹಾಗೂ ಇದೇ ಸಮಯದಲ್ಲಿ ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ನಿಮ್ಮ ಮೇಲೆ ಇರುವಂತಹ ದೋಷ ಆ ವ್ಯಕ್ತಿಗೆ ತಿರುಗಿ ಅವರು ಕೆಲವೊಂದು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಅಥವಾ ಅಪಮೃತ್ಯು ಕೂಡ ಅವರಿಗೆ ಒದಗಿ ಬರಬಹುದು.
ಎರಡನೆಯದಾಗಿ ಗರ್ಭಿಣಿ ಹೆಣ್ಣು ಮಕ್ಕಳು ಅಂದರೆ ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರಿಗೆ ನಿದ್ರೆಯಲ್ಲಿ ಮಾಂಸದ ಉಂಡೆ ಅಥವಾ ನದಿ ಹರಿಯುವುದು ಮಕ್ಕಳು ಕಾಣಿಸಿಕೊಳ್ಳುವುದು, ಇಂತಹ ಕೆಲವೊಂದು ಕನಸುಗಳು ಬಂದರೆ ಗರ್ಭಾವಸ್ಥೆಯಲ್ಲಿ ಇರುವ ಮಗುವಿಗೆ ದೋಷ ಉಂಟಾಗಿದೆ ಅಥವಾ ಗರ್ಭಸ್ರಾವ ಆಗುವ ಮುನ್ಸೂಚನೆ ಇಂತಹ ಕನಸುಗಳು ನೀಡುತ್ತಾ ಇರುತ್ತದೆ. ಆದ್ದರಿಂದ ಅಂತಹ ಸಮಯದಲ್ಲಿ ಮನೆ ದೇವರ ಮೊರೆ ಹೋಗಿ, ಮನೆ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡು ಬರುವುದರಿಂದ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಂಡಂತಾಗುತ್ತದೆ.
ಅಷ್ಟೇ ಅಲ್ಲ ಗರ್ಭಿಣಿ ಸ್ತ್ರೀಯರು ಸಂತಾನಗೋಪಾಲ ಸ್ವಾಮಿಯ ಮೊರೆ ಹೋಗಿ ಇವರ ಯಂತ್ರವನ್ನು ಸೊಂಟದಲ್ಲಿ ಕಟ್ಟಿಕೊಳ್ಳುವುದರಿಂದ ಕೂಡ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಯಾವ ದೋಷ ಉಂಟಾಗುವುದಿಲ್ಲ. ಕನಸಿನಲ್ಲಿ ಏನಾದರೂ ರುದ್ರದೇವರು ಕಾಣಿಸಿಕೊಂಡರೆ, ಇದೂ ಕೂಡ ಅಶುಭದ ಸಂಕೇತ ಆಗಿರುತ್ತದೆ. ನಿಮ್ಮ ಮೇಲೆ ವಾಮಾಚಾರ ಆಗಿರುವ ಮುನ್ಸೂಚನೆ ಈ ಕನಸು ನಿಮಗೆ ನೀಡುತ್ತಾ ಇರುತ್ತದೆ.
ಇನ್ನು ಶುಭದ ಸಂಕೇತ ಏನು ಅಂದರೆ ಮುತ್ತೈದೆಯರು ಕನಸಿನಲ್ಲಿ ಬಂದರೆ ಅಥವಾ ದೇವಸ್ಥಾನ ಕನಸಿನಲ್ಲಿ ಕಾಣಿಸಿಕೊಂಡರೆ ದೇವಸ್ಥಾನದ ಗೋಪುರ ಕನಸಿನಲ್ಲಿ ಕಾಣಿಸಿಕೊಂಡರೆ ಇದು ಶುಭದ ಸಂಕೇತವಾಗಿರುತ್ತದೆ. ನೀವೇನಾದರೂ ಹರಕೆ ಅನ್ನು ಮಾಡಿಕೊಂಡು ಅದನ್ನು ಮರೆತಿದ್ದಾರೆ ನಿಮ್ಮ ಕನಸಿನಲ್ಲಿ ದೇವಿ ಕಾಣಿಸಿಕೊಳ್ಳುತ್ತಾಳೆ. ಆಗ ನೀವು ಮಾಡಿಕೊಂಡಿರುವ ಹರಕೆಯನ್ನು ತೀರಿಸುವ ಪ್ರಯತ್ನ ಮಾಡಿ ಇಲ್ಲವಾದಲ್ಲಿ ತೊಂದರೆಗಳು ಎದುರಾಗಬಹುದು. ಶುಭದ ಸಂಕೇತ ಆಗಿರುವ ಹೂವು ತೆಂಗು ಹಣ್ಣು ಕುದುರೆ ಆನೆ ನವಿಲು ಇಂತಹ ಪ್ರಾಣಿಗಳು ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಶುಭದ ಸಂಕೇತವಾಗಿ ಇರುತ್ತದೆ.