spot_img
spot_img

Benefits Of Carrot In Kannada | ಕ್ಯಾರೆಟ್ ತಿಂದರೆ ದೇಹಕ್ಕೆ ಆಗುವ ಲಾಭಗಳು

Must Read

- Advertisement -

Benefits Of Carrot In Kannada

ಈ ಪೋಸ್ಟ್ನಲ್ಲಿ ನಾವು ಕ್ಯಾರೆಟ್ ತಿನ್ನುವುದರಿಂದ ಉತ್ತಮ ಪ್ರಯೋಜನಗಳನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬ ಮನುಷ್ಯನು ಸಹ ಎಂದಿನಂತೆ ಊಟ, ತಿಂಡಿ ಮಾಡುತ್ತಾನೆ. ಆದರೆ ಊಟ ಮಾಡಿದ ನಂತರ ಕೆಲವು ಪದಾರ್ಥಗಳನ್ನು ಸೇವಿಸಿದರೆ ನಮ್ಮ ಆರೋಗ್ಯಕ್ಕೆ ತುಂಬಾ ಲಾಭಗಳಿವೆ ಎಂದು ಹೇಳಬಹುದು. ಹೌದು ಹಾಗಾದರೆ ಬನ್ನಿ ಆ ಪದಾರ್ಥಗಳು ಯಾವುವು ಎಂದು ತಿಳಿಯೋಣ. ಮತ್ತು ಅದರಿಂದ ಆರೋಗ್ಯಕ್ಕೆ ಯಾವ ರೀತಿ ಉಪಯೋಗಗಳು ಇವೆಯೆಂದು ತಿಳಿದುಕೊಳ್ಳೋಣ.

ದಿನನಿತ್ಯ ನೀವು ಊಟ ಮಾಡಿದ ನಂತರ ಒಂದು ಹಸಿ ಕ್ಯಾರೆಟನ್ನು ತಿನ್ನಬೇಕು. ಹೀಗೆ ತಿಂದರೆ ನಿಮ್ಮ ಹಲ್ಲು ಗಳನ್ನು ಸುರಕ್ಷಿತವಾಗಿಡುತ್ತದೆ. ಊಟ ಮಾಡಿದ ನಂತರ ಕ್ಯಾರೆಟ್ ತಿಂದರೆ ಬಾಯಿಂದ ಬರುವ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಬಾಯಿಯಲ್ಲಿ ಉಂಟಾಗುವ ಹಾನಿಕಾರಕ ಜೀವಾಣುಗಳನ್ನು ನಾಶಮಾಡುತ್ತದೆ. ಹಾಗೆ ಇದರಿಂದ ಹಲ್ಲುಗಳು ಸ್ವಚ್ಛವಾಗಿದ್ದು ಒಸಡುಗಳಲ್ಲಿ ರಕ್ತಸ್ರಾವ ಆಗುವುದನ್ನು ತಡೆಯುತ್ತದೆ. ಮತ್ತು ತಿಂದ ಆಹಾರವನ್ನು ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ.

ಹಾಗೆಯೇ ನಿಯಮಿತ ಕ್ಯಾರೆಟ್ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್ ಇ,ಕ್ಯಾರೋಟಿನ್ ಅಂಶಗಳು ಹೇರಳವಾಗಿರುತ್ತದೆ. ಹೀಗಾಗಿ ಪ್ರತಿನಿತ್ಯ ಇದನ್ನು ತೆಗೆದುಕೊಂಡರೆ ವಾಚಕ ಗಳಲ್ಲಿ ಆಗುವ ಹಲವಾರು ಕಾಯಿಲೆಗಳನ್ನು ಮುಖ್ಯ ಮಾಡಿಕೊಳ್ಳಬಹುದು. ಗ್ಯಾಸ್ಟಿಕ್ ಅಸಿಡಿಟಿ ಅಜೀರ್ಣ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

- Advertisement -

ಹಾಗೆಯೇ ತುರಿದ ಕ್ಯಾರೆಟನ್ನು ಹೆಸರು ಬೇಳೆ ಕೋಸಂಬರಿ ಜೊತೆಗೆ ಸೇರಿಸಿ ತಿಂದರೆ ದೇಹ ಉಷ್ಣವಾಗಿದ್ದರೆ ತಂಪು ಮಾಡುತ್ತದೆ ಮತ್ತು ಕಣ್ಣಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗಿದೆ. ಹಾಗೆ ಮಲಬದ್ಧತೆ ಇರುವವರು ಇದನ್ನು ತಿಂದರೆ ಬೇಗನೆ ನಿವಾರಿಸಿಕೊಳ್ಳಬಹುದು. ಹಾಗಾಗಿ ನಿಯಮಿತವಾಗಿ ಕ್ಯಾರೆಟ್ ಕೋಸಂಬರಿ ಯನ್ನು ಸೇವಿಸಬೇಕು.

ಇನ್ನು ತುರಿದ ಕ್ಯಾರೆಟ್ ಗೆ ಸ್ವಲ್ಪ ನಿಂಬೆ ರಸ ಮತ್ತು ಸ್ವಲ್ಪ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಸೇವಿಸಿದರೆ ನರಮಂಡಲ, ಪಿತ್ತಕೋಶ, ಶ್ವಾಸಕೋಶ, ಹಾಗೂ ಹೃದಯದ ಕಾಯಿಲೆಗಳನ್ನು ನಿವಾರಿಸುವುದರಲ್ಲಿ ತುಂಬಾ ಸಹಾಯವನ್ನು ಮಾಡುತ್ತದೆ. ಹಾಗೆ ಇದನ್ನು ಪ್ರತಿನಿತ್ಯ ತಿಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇನ್ನು ಕ್ಯಾರೆಟ್ ಬಳಸಿ ಸಿಹಿ ಅಲ್ವಾ ಮಾಡಿಕೊಂಡು ತಿಂದರೆ ಪುರುಷರಲ್ಲಿ ವೀರ್ಯಾಣು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

Other Benefits Of Carrot- ಕ್ಯಾರೆಟ್ ಲಾಭಗಳು

  • ವಯಸ್ಸಾದಿಕೆಯನ್ನು ನಿಲ್ಲಿಸುವಲ್ಲಿ ಪ್ರಯೋಜನಕಾರಿ
  • ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಪ್ರಯೋಜನಕಾರಿ
  • ರಕ್ತದೊತ್ತಡವನ್ನು ಸಾಮಾನ್ಯವಾಗಿಸಲು ಪ್ರಯೋಜನಕಾರಿ
    ಪಿತ್ತಜನಕಾಂಗದ ರಕ್ಷಣೆಯಲ್ಲಿ ಪ್ರಯೋಜನಕಾರಿ
  • ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಕೂದಲು ಉದ್ದ ಮತ್ತು ದಪ್ಪವಾಗಲು ಸಹಾಯ ಮಾಡುತ್ತದೆ.
  • ಕೂದಲಿನ ಅಕಾಲಿಕ ಬೂದುಬಣ್ಣವನ್ನು ತಡೆಯುತ್ತದೆ
    ಗಾಯಗಳನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿ
  • ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿ
  • ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿ

Benefits Of Eating Black Carrot In Kannada

Benefits of carrot
Benefits of carrot

ಕಪ್ಪು ಕ್ಯಾರೆಟ್ ಅನ್ನು ಫೈಬರ್ ಮತ್ತು ಪೊಟ್ಯಾಸಿಯಮ್ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ಅನಾರೋಗ್ಯ ಪೀಡಿತರಿಗೆ ಓಡಿಹೋಗಲು ಸಹಾಯ ಮಾಡುತ್ತದೆ. ಕಪ್ಪು ಕ್ಯಾರೆಟ್ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

- Advertisement -
  • ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಯೋಜನಕಾರಿ
  • ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿ
  • ಸಂಧಿವಾತಕ್ಕೆ ಪ್ರಯೋಜನಕಾರಿ
  • ಹೃದ್ರೋಗ ತಡೆಗಟ್ಟುವಲ್ಲಿ ಪ್ರಯೋಜನಕಾರಿ
  • ಮೆದುಳನ್ನು ಆರೋಗ್ಯವಾಗಿಡಲು ಪ್ರಯೋಜನಕಾರಿ
  • ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪ್ರಯೋಜನಕಾರಿ

 

 

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group