ಸಿಂದಗಿ: ತಾಲೂಕಿನ ಗೋಲಗೇರಿ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ,ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರ ಸ್ವರಚಿತ ‘ತುಂಟ ಮಕ್ಕಳು’ ಮಕ್ಕಳ ಕವನ ಸಂಕಲನ ಕೃತಿಯು ಆಗಸ್ಟ್ 27 ರಂದು ಲೋಕಾರ್ಪಣೆಗೊಳ್ಳಲಿದೆ.
ಸ್ಥಳೀಯ ಶ್ರೀ ಗೊಲ್ಲಾಳೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯುವ ಈ ಸಮಾರಂಭವನ್ನು ಸಿಂದಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಠ್ಠಲ ವೈ. ದೇವಣಗಾಂವಿ ಅವರು ಉದ್ಘಾಟಿಸಲಿದ್ದಾರೆ. ಸ್ಥಳೀಯ ವಿರಕ್ತಮಠದ ಶ್ರೀ ಮ.ನಿ.ಪ್ರ.ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಭಂಡಾರಿದೇವಿ ಶಕ್ತಿಪೀಠದ ಶ್ರೀ ಮ.ನಿ.ಪ್ರ.ಮುನೀಂದ್ರದೇವ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಶ್ರೀ ಗೊಲ್ಲಾಳೇಶ್ವರ ಶಿಕ್ಷಣ ಪ್ರಸಾರ ಸಮಿತಿ ಕಾರ್ಯದರ್ಶಿಗಳಾದ ಆರ್.ಬಿ.ಬಿರಾದಾರ ಅವರ ಅಧ್ಯಕ್ಷತೆಯಲ್ಲಿ ಜರುಗುವ ಈ ಸಮಾರಂಭದಲ್ಲಿ ಖ್ಯಾತ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಖ್ಯಾತ ಮಕ್ಕಳ ಸಾಹಿತಿ ಫ.ಗು.ಸಿದ್ದಾಪುರ ಅವರು ಕೃತಿಯನ್ನು ಪರಿಚಯಿಸಲಿದ್ದಾರೆ.
ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿಯವರು ಶುಭನುಡಿ ಹಾರೈಸಲಿದ್ದಾರೆ.
ಶ್ರೀ ಗೊಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಹೊಳೆಪ್ಪ ಶರಣರು ದೇವರಮನಿ, ಶ್ರೀ ಸಿದ್ಧರಾಮಶರಣರು ದೇವರಮನಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ಎಸ್.ಪಾಟೀಲ,ಉಪಾಧ್ಯಕ್ಷರಾದ ಪಿ.ಎಸ್.ಪಾಟೀಲ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ಎಸ್.ಎಸ್.ಕತ್ನಳ್ಳಿ, ಪ್ರಾಚಾರ್ಯರಾದ ಎಸ್.ಎಂ.ಬನ್ನಿ,ಸಿಂದಗಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆನಂದ ಭೂಸನೂರ,ಸಿಂದಗಿ ತಾಲ್ಲೂಕು ಕ.ಸಾ.ಪ ಅಧ್ಯಕ್ಷರಾದ ಎಸ್.ಬಿ.ಚೌಧರಿ, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಶಿಕ್ಷಕ ಸಾಹಿತಿ ಬಸವರಾಜ ರಾ ಅಗಸರ, ಶಿಕ್ಷಕರ ಸಂಘದ ನಿರ್ದೇಶಕರಾದ ಜಿ.ಎನ್.ಪಾಟೀಲ, ಗೋಲಗೇರಿ ಸಿ.ಆರ್.ಪಿ.ರಾಜಶೇಖರ ಬಿರಾದಾರ,ಸ್ಥಳೀಯ ಕೆ.ಜಿ.ಎಸ್ ಶಾಲೆಯ ಮುಖ್ಯ ಶಿಕ್ಷಕರಾದ ಆರ್.ಜಿ.ಬನಸಿ, ಎಂ.ಪಿ.ಎಸ್.ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಬಿ.ಎಸ್.ಗೋಣಿ, ಪತ್ರಕರ್ತರಾದ ಎ.ಡಿ.ಕೋರವಾರ, ಮಲ್ಲಿಕಾರ್ಜುನ ಕೆಂಭಾವಿ ಅವರು ಮುಖ್ಯ ಅತಿಥಿಗಳಾಗಿ ಹಾಗೂ
ನಿರೂಪಣೆ: ಶಿವಶಂಕರ ಪೂಜಾರಿ
ಸ್ವಾಗತ: ಸಂಜೀವ್ ಯಂಕಂಚಿ
ವಂದನಾರ್ಪಣೆ: ಮಲ್ಲಿಕಾರ್ಜುನ ಎನ್.ಕರ್ನಾಳ
ನಿರ್ವಹಣೆ: ಮಹೇಶ್ ಬಿರಾದಾರ ಹಾಗೂ ನಜೀರ್ ಕೋರಬು
ಭಾಗವಹಿಸಲಿದ್ದಾರೆ ಎಂದು ಜ್ಞಾನಜ್ಯೋತಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ವ್ಯಂಗ್ಯ ಚಿತ್ರಕಾರ ಶಿಕ್ಷಕ ಸಾಹಿತಿ ಶರಣು ಚಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.