ಮೂಡಲಗಿ: ಮೂಡಲಗಿ ಧರ್ಮಾಜಿ ಪೋಳ ಹಾಗೂ ಧರ್ಮಟ್ಟಿ ಗ್ರಾಮದ ಸಂತೋಷ ರಾಜು ಹೊಸಮನಿ ನವದೆಹಲಿಯ ದಿ ಇನ್ಸಸ್ಟಿಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆ ನಡೆಸುವ ಚಾರ್ಟರ್ಡ್ ಅಕೌಂಟಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೂಡಲಗಿ ತಾಲ್ಲೂಕಿಗೆ ಹೆಸರು ತಂದಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ಸ್ಥಳೀಯ ಎಂಇಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಮ್ ಪದವಿ ಮುಗಿಸಿದ್ದಾರೆ.
ಧರ್ಮಾಜಿ ಪೋಳ ತಂದೆ ಶಿವರುದ್ರಪ್ಪ ಕೃಷಿಕರಾಗಿದ್ದಾರೆ. ಗೋಕಾಕದ ಚಾರ್ಟ್‌ರ್ಡ್ ಅಕೌಂಟೆಂಟ್ ಪ್ರದೀಪ ಇಂಡಿ ಮತ್ತು ಸೈದಪ್ಪ ಗದಾಡಿ ಅವರ ಮಾರ್ಗದರ್ಶನ ಪಡೆದಿರುವರು.
ಸಂತೋಷ ಹೊಸಮನಿಯ ತಂದೆ ರಾಜು ಸಹ ಕೃಷಿಕರಾಗಿದ್ದು ಸತತ ನಾಲ್ಕು ವರ್ಷಗಳಿಂದ ಸಿ.ಎ.ಗಾಗಿ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು. ಗೋಕಾಕದ ಚಾರ್ಟ್‌ಡ್ ಅಕೌಂಟಂಟ್ ಸತೀಶ ನಾಡಗೌಡರ ಅವರು ಮಾರ್ಗದರ್ಶನ ನೀಡಿರುವರು.
ವಿದ್ಯಾರ್ಥಿಗಳನ್ನು ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಅಭಿನಂದಿಸಿರುವರು.