ಕರವೇ ಯಿಂದ ಪೂಜೆ

0
399
ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಚಿತ್ರನಟ ಪುನೀತರಾಜಕುಮಾರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಿಂದಗಿ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಸತೀಶ ಕವಲಗಿ, ಉತ್ತರವಲಯಾಧ್ಯಕ್ಷ ಸಂತೋಷ ಮಣಿಗೇರಿ, ತಾಲೂಕಾಧ್ಯಕ್ಷ ಸದ್ದಾಮ ಆಲಗೂರ ನೇತೃತ್ವದಲ್ಲಿ ತಾಯಿ ಭುವನೇಶ್ವರಿ ವೃತ್ತದಲ್ಲಿ ಪೂಜೆ ಸಲ್ಲಿಸಿ ಚಿತ್ರನಟ ಪುನೀತಕುಮಾರ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಸಜೀವಕುಮಾರ ದಾಸರ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌಧರಿ, ಪರಸು ನಾಟೀಕಾರ, ಕರವೇ ತಾಲೂಕಾ ಕಾರ್ಯಾಧ್ಯಕ್ಷ ನಿತ್ಯಾನಂದ ಕಟ್ಟಿಮನಿ, ಮಡು ದೊಡಮನಿ, ಬೀರು ಕನ್ನೂರ, ಮಶ್ಯಾಕ ಹಡಗಿನಾಳ, ಶಾಅರೂಕ ರಾಂಪೂರ, ವಿಶ್ವಾರಾಧ್ಯ ಕೊಟಾರಗಸ್ತಿ, ಮಹ್ಮದ ಹಡಗಿನಾಳ, ಅಲೋಕ ರೂಡಗಿ, ಸುರಜ್ ಸಿಂದಗಿ, ಮಹಿಬೂಬ ನಾಗಾವಿ, ನಿಂಗು ಕೊಕಟನೂರ, ಸಿದ್ದು ಹಿರೇಮಠ ಸೇರಿದಂತೆ ಹಲವರಿದ್ದರು.