spot_img
spot_img

ಈ ನಾಡು ನುಡಿ ನೆಲ ಜಲ ಕನ್ನಡ ಬಾಷೆ ಉಳಿಸಿ ಬೆಳೆಸೋಣ- ಆನಂದ ಮಾಮನಿ

Must Read

- Advertisement -

ಸವದತ್ತಿ: “ಈ ನಾಡು ನುಡಿ ನೆಲ ಜಲ ಕನ್ನಡ ಬಾಷೆ ಉಳಿಸಿ ಬೆಳೆಸೋಣ . ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ರಕ್ಷಿಸೋಣ. ಮೊದಲು ಎಲ್ಲರೂ ಮನೆ ಮನೆಗಳಲ್ಲಿ ಕನ್ನಡ ಭಾಷೆಯನ್ನು ಮನೆಯಿಂದಲೇ ಬೆಳೆಸಬೇಕು. ಮನೆಯಲ್ಲಿ ನಾವು ಸಾಮಾನ್ಯವಾಗಿ ಮಾತನಾಡುವಾಗಲೇ ಆಂಗ್ಲ ಭಾಷೆಯನ್ನು ಬಳಸದೇ ಕನ್ನಡವನ್ನು ಮಾತನಾಡಬೇಕು ಕನ್ನಡ ಭಾಷೆ ಬಹಳ ಶ್ರೀಮಂತವಾದ ಭಾಷೆ ಗೌರವದ ಭಾಷೆಯಂದರೆ ಕನ್ನಡ ಭಾಷೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಯವರು ಹೇಳಿದರು

ಅವರು ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ತಾಲೂಕಾ ಆಡಳಿತ ವತಿಯಿಂದ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ ಮತ್ತು ಕನ್ನಡ ಭಾಷೆ ಉಳಿವಿಗಾಗಿ ನಾಡಿನ ಸಾಹಿತಿಗಳಿಗೆ ಸಮಾಜ ಸೇವಕರಿಗೆ ಗೌರವಿಸಿ ಸನ್ಮಾನಿಸುತ್ತಿದೆ. ಮತ್ತು ನಮ್ಮ ತಾಲೂಕಿನವರೇ ನಮ್ಮವರೆ ಆದ ಡಾಕ್ಟರ ಎಸ್ ಆರ್ ರಾಮನಗೌಡರ ರವರು ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅವರಿಗೆ ಅಭಿನಂದಿಸುವೆ” ಎಂದರು.

- Advertisement -

ಉಪನ್ಯಾಸಕರಾಗಿ ಮಾತನಾಡಿದ ಯ. ರು. ಪಾಟೀಲ “ಕನ್ನಡದವರೇ ಕನ್ನಡ ಭಾಷೆಯನ್ನು ಸರಿಯಾಗಿ ಬಳಸುವ ಜೊತೆಗೆ ಸರಕಾರಿ ಕಛೇರಿಗಳಲ್ಲಿಯೂ ಕೂಡಾ ಕನ್ನಡ ಭಾಷೆಯನ್ನು ಬಳಸುವ ಮೂಲಕ ಮನೆಗಳಲ್ಲಿ ಕನ್ನಡ ಭಾಷೆಯನ್ನು ಬೆಳೆಸಬೇಕು. ಈ ಮನೋಭಾವ ಎಲ್ಲರಲ್ಲಿಯೂ ಬರಬೇಕು” ಎಂದರು.

ಸಮಾರಂಭದ ಪ್ರಾರಂಭದಲ್ಲಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ ಎನ್ ಕಂಭೋಗಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಮತ್ತು ರಾಜ್ಯೋತ್ಸವ ನಿಮಿತ್ತ ಜರುಗಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ತಾಲೂಕಾ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

- Advertisement -

ವೇದಿಕೆಯಲ್ಲಿ ಪುರಸಭೆ ಅದ್ಯಕ್ಷ ರಾಜಶೇಖರ ಕಾರದಗಿ, ಉಪಾದ್ಯಕ್ಷ ದೀಪಕ ಜಾನವೆಕರ,ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ಎಪಿಎಮಸಿ ಅಧ್ಯಕ್ಷ ಸಿ ಜಿ ಸವದತ್ತಿ, ಕರ್ನಾಟಕ ರಾಜ್ಯೋತ್ಸವ ಸಮಿತಿಯ ಅದ್ಯಕ್ಷರು ಹಾಗೂ ತಹಶಿಲ್ದಾರರಾದ ಪ್ರಶಾಂತ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ ಎನ್ ಕಂಭೋಗಿ, ಸಿಪಿಐ ಮಂಜುನಾಥ ನಡುವಿನಮನಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ, ಲೊಕೋಪಯೊಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರಾದ ಎಚ್ ಎ ಕದ್ರಾಪೂರಕರ, ತಾಲೂಕಾ ವೈದ್ಯಾಧಿಕಾರಿ ಡಾ ಮಹೇಶ ಚಿತ್ತರಗಿ, ಪಿಎಸಐ ಶಿವಾನಂದ ಗುಡುಗನಟ್ಟಿ, ಶಿಕ್ಷಕ ಸಂಘದ ಅದ್ಯಕ್ಷ ಎಚ ಆರ ಪೆಟ್ಲೂರ, ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ ಮೂಗಬಸವ ಮತ್ತು ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಆರೋಗ್ಯ ಸೇವೆಯಲ್ಲಿ ಪ್ರಾಮಾಣಿಕತೆ-ಕಳಕಳಿ ಬಹು ಮುಖ್ಯ – ಶ್ರೀ ಶಿವಾನಂದ ಗುರೂಜಿ

ರಮೇಶ್ ಪಿ.ಎಂ. ರವರಿಗೆ ಸನ್ಮಾನ ಬೆಳಗಾವಿ: ಪೂರ್ವಜನ್ಮದ ಪುಣ್ಯವಿದ್ದವರಿಗೆ ಮಾತ್ರ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡುವ ಭಾಗ್ಯ ಲಭಿಸಿರುತ್ತದೆ. ಅನೇಕ ಜನ ಹಲವಾರು ರೋಗಗಳಿಂದ ಬಳಲುತ್ತಾ ಜೀವನದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group