spot_img
spot_img

ನಾಗನೂರದಲ್ಲಿ 18 ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಖೋ-ಖೋ ಟೂರ್ನಿ

Must Read

spot_img
- Advertisement -

ಹೊನಲು ಬೆಳಕಿನ ಖೋಖೋ ಪಂದ್ಯಾವಳಿಗಳಿಗೆ 3 ಅಂಕಣ(ಮೈದಾನ) ಸಜ್ಜು.

ಮಹಿಳೆ-ಪುರುಷರು ಕುಳಿತು ವೀಕ್ಷಿಸಲು ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ

ಮೂಡಲಗಿ: ತಾಲೂಕಿನ ನಾಗನೂರಿನಲ್ಲಿ ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಖೋ ಖೋ ಅಸೋಸಿಯೇಶನ್ ಮತ್ತು ನಾಗನೂರ ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ 18 ವರ್ಷದೊಳಗಿನ ಬಾಲಕ/ ಬಾಲಕಿಯರ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗಳು ನಾಗನೂರಿನ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಶಾಲಾ ಮೈದಾನದಲ್ಲಿ ಮೇ 7 ರಿಂದ 9 ರವರಗೆ ಅದ್ದೂರಿಯಾಗಿ ನಡೆಯಲಿದೆ.

- Advertisement -

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಾಲಕರ 30 ಹಾಗೂ ಬಾಲಕಿಯರ 16 ತಂಡಗಳು ಪಾಲ್ಗೊಳ್ಳಲಿವೆ. 5 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸುವಂತೆ ಆಸನದ ವ್ಯವಸ್ಥೆ ಮಾಡಲಾಗಿದ್ದು ಎಲ್ಲ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ .ರಾಜ್ಯ ಖೋ ಖೋ ಅಸೋಸಿಯೇಷನ್‍ನ ವತಿಯಿಂದ 60 ಜನ ನಿರ್ಣಾಯಕರು ಪಂದ್ಯ ನಡೆಸಿಕೊಡಲಿದ್ದಾರೆ. ಆಗಮಿಸುವ ಎಲ್ಲ ಕ್ರೀಡಾಪಟುಗಳಿಗೆ ಹಾಗೂ ನಿರ್ಣಾಯಕರಿಗೆ ಊಟ, ಶುದ್ಧ ಕುಡಿಯುವ ನೀರು, ವಸತಿ ಸೌಲಭ್ಯವನ್ನು ಸಂಘಟಕರು ಕಲ್ಪಿಸಲಿದ್ದಾರೆ.

ವಿಜೇತ ತಂಡಗಳಿಗೆ ಬಹುಮಾನ:

ನಾಗನೂರ ಪಟ್ಟಣ ದಲ್ಲಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಗಳು ನಡೆಯಲಿದ್ದು , ವಿಜೇತ ಪುರುಷರ ತಂಡಗಳಿಗೆ ಪ್ರಥಮ ಬಹುಮಾನ 30,000 ರೂ , ದ್ವಿತೀಯ, 25,000ರೂ, ತೃತೀಯ,20,000 ರೂ , ಚತುರ್ಥ,15,000 ರೂ, ಹಾಗೂ ಮಹಿಳಾ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ, 25,000, ರೂ ದ್ವಿತೀಯ 20,000, ರೂ ತೃತೀಯ 15,000 ರೂ , ಚತುರ್ಥ 10,000 ರೂ , ಸೇರಿದಂತೆ ಪುರುಷ ಹಾಗೂ ಮಹಿಳಾ ವಿಜೇತ ತಂಡಗಳಿಗೆ ಬಹುಮಾನದ ಜೊತೆಗೆ ಟ್ರೋಫಿಗಳನ್ನು ನೀಡಲಿದ್ದಾರೆ ಮತ್ತು ವೈಯಕ್ತಿಕ ಆಕರ್ಷಕ ಬಹುಮಾನಗಳಾಗಿ ಟ್ರೋಫಿಗಳನ್ನು ನೀಡಲಿದ್ದಾರೆ.

ರವಿವಾರ 8 ರಂದು ಉದ್ಘಾಟನಾ ಸಮಾರಂಭ: 

ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಗಳು ಮೇ.7 ರಂದು 8 ಗಂಟೆಗೆ ಪಂದ್ಯಾವಳಿಗಳು ನೇರವಾಗಿ ನಡೆಯಲಿದ್ದು , ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ರವಿವಾರ 8 ರಂದು ನಡೆಯಲಿದೆ.

- Advertisement -

ಸಮಾರಂಭದಲ್ಲಿ ಹುಕ್ಕೇರಿ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು, ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಉಪಾಧ್ಯಕ್ಷ ಮತ್ತು ಚಂದರಗಿ ಕ್ರೀಡಾ ಶಾಲೆಯ ಅಧ್ಯಕ್ಷ ಹಾಗೂ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸನಗೌಡ ರಾ ಪಾಟೀಲ ಅಧ್ಯಕ್ಷತೆ ವಹಿಸುವರು .ಕೆ ಎಂ ಎಫ್ ಅಧ್ಯಕ್ಷರು ಹಾಗೂ ಅರಬಾವಿ ಜನಪ್ರಿಯ ಶಾಸಕ ಬಾಲಚಂದ್ರ ಲ ಜಾರಕಿಹೊಳಿ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ದೆಹಲಿಯ ಖೋ-ಖೋ ಫೆಡರೇಷನ್ ಆಫ್ ಇಂಡಿಯಾ ಕಾರ್ಯದರ್ಶಿ ಎಂ.ಎಸ್.ತ್ಯಾಗಿ, ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಆರ್ ಎಂ ಪಾಟೀಲ, ಬೆಂಗಳೂರು ಖೋ ಖೋ ಅಸೋಸಿಯೇಶನ್ ನ ಅಧ್ಯಕ್ಷ ಹಾಗೂ ಕೆ.ಕೆ.ಎಫ್ ಆಯ ಉಪಾಧ್ಯಕ್ಷ ಲೋಕೇಶ್ವರ, ಬೆಂಗಳೂರು ಖೋ-ಖೋ ಅಸೋಸಿಯೇಶನ್ ಚೇರ್ಮನ್ನ ಹಾಗೂ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಕೆ ಪಿ ಪುರುಷೋತ್ತಮ್, ಬೆಂಗಳೂರು ಖೋ-ಖೋ ಅಸೋಸಿಯೇಶನ್ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ. ಆರ್, ಬೆಳಗಾವಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಂದನಾ ಶಿಂಧೆ ಆಗಮಿಸುವರು ಎಂದು ಬೆಳಗಾವಿ ಜಿಲ್ಲಾ ಖೋ ಖೋ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಗಜಾನನ ಯರಗಣವಿ ಹಾಗೂ ಕಾರ್ಯದರ್ಶಿ ಈರಣ್ಣ ಬಿ ಹಳಿಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಫೆ. 8ರಂದು ಸಿಲಿಕಾನ್ ಸಿಟಿಯಲ್ಲಿ ಕುಂದಾಪುರದ ಯಶಸ್ವಿ ಕಲಾ ವೃಂದ (ಕೊಮೆ, ತೆಕ್ಕಟ್ಟೆ) ಸಂಸ್ಥೆ ಗೆ 25 ರ ಸಂಭ್ರಮ !

ಫೆಬ್ರವರಿ, 8 ರಂದು ರಾಜ್ಯ ರಾಜಧಾನಿಯಲ್ಲಿ ಯಶಸ್ವೀ ಕಲೋಲ್ಲಾಸ  ಕರಾವಳಿ ಭಾಗದ ಪ್ರತಿಷ್ಠಿತ ಸಂಸ್ಥೆ ಬೆಳ್ಳಿ ಹಬ್ಬದ ಸಡಗರವನ್ನು ೧೦೮ನೇ ಕಾರ್ಯಕ್ರಮವನ್ನು ರಾಜಧಾನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group