spot_img
spot_img

ಮಕ್ಕಳ ಕಲಿಕಾ ಕೊರತೆ ತುಂಬಲು ಶಿಕ್ಷಣ ಇಲಾಖೆಯ ವಿಶಿಷ್ಟವಾದ ಕಲಿಕಾ ಚೇತರಿಕೆ – ಶ್ರೀಶೈಲ ಕರೀಕಟ್ಟಿ

Must Read

spot_img
- Advertisement -

ಸವದತ್ತಿಃ “ಮಕ್ಕಳ ಕಲಿಕಾ ಕೊರತೆ ತುಂಬಲು ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ವಿಶಿಷ್ಟವಾದ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಗೊಳಿಸಿದೆ.

ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಹೇಳಿದರು.ಪಟ್ಟಣದ ಗುರ್ಲಹೊಸೂರಿನಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲೂಕಿನ ಶಿಕ್ಷಕರಿಗೆ ಆಯೋಜಿಲಾಸದ ಕಲಿಕಾ ಚೇತರಿಕೆ ಉಪಕ್ರಮ” ತರಬೇತಿ ಕಾರ್ಯಾಗಾರಕ್ಕೆ ಆಕಸ್ಮಿಕ ಭೇಟಿ ನೀಡಿ ಮಾತನಾಡಿದ ಅವರು, ೨೦೨೨-೨೩ ನೇ ಸಾಲಿಗೆ “ಕಲಿಕಾ ಚೇತರಿಕೆ ವರ್ಷ” ರಾಜ್ಯಾದ್ಯಂತ ಏಕರೂಪದ ಶೈಕ್ಷಣಿಕ ಪ್ರಕ್ರಿಯೆ ಜಾರಿಯಾಗುತ್ತಿದೆ. ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳಿಗೆ ಶಿಕ್ಷಕರ ಬೆಂಬಲ ಅಗತ್ಯವಿದೆ.” ಎಂದರು.

- Advertisement -

“ಭಾಗೀದಾರರಿಗೆ ಸೂಕ್ತವಾದ ಮಾಹಿತಿ ನೀಡುವುದು, ತರಬೇತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು, ಸಂಪನ್ಮೂಲಗಳ ಸರಿಯಾದ ಬಳಕೆ, ಕಲಿಕೆಗೆ ಅಗತ್ಯವಿರುವ ಇತರೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಒಟ್ಟಿನಲ್ಲಿ ಮಕ್ಕಳು ಕಳೆದ ಎರಡು ವರ್ಷಗಳಲ್ಲಿ ಕಳೆದುಕೊಂಡಿರುವ ಕಲಿಕೆಯನ್ನು ಮರು ಪಡೆದುಕೊಳ್ಳಲು ಶಿಕ್ಷಕರು ಕಾಯಾ-ವಾಚಾ-ಮನಸಾ ಪ್ರಯತ್ನಿಸಬೇಕು.ಇದು ಇಲಾಖೆ ನೀಡಿದ ವಿಶಿಷ್ಟ ಕಾರ್ಯಕ್ರಮ ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿ ತರಬೇತಿ ಪಡೆದು ಮಕ್ಕಳಿಗೆ ತಲುಪಿಸಿರಿ” ಎಂದು ಕರೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಅವರು ಮಾತನಾಡಿ, “ಕೊರೋನಾದಿಂದ ಕಳೆದ ಎರಡು ವರ್ಷಗಳಲ್ಲಿ ಮಕ್ಕಳಿಗೆ ಆಗಿರುವ ಕಲಿಕಾ ನಷ್ಟವನ್ನು ತುಂಬಿಕೊಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಈ ತರಬೇತಿಯ ಸದುಪಯೋಗ ಪಡೆದುಕೊಂಡು ಮಕ್ಕಳ ಕಲಿಕೆಗೆ ಹಾಗೂ ಕಲಿಕಾ ನಷ್ಟ ತುಂಬಿ ಕೊಡಲು ಸಂಪೂರ್ಣ ಪ್ರಯತ್ನಮಾಡಬೇಕು” ಎಂದರು.

ಈ ಸಂದರ್ಭದಲ್ಲಿ ಬಿ.ಐ,ಇ.ಆರ್.ಟಿ ಗಳಾದ ಸಿ.ವ್ಹಿ.ಬಾರ್ಕಿ, ವೈ.ಬಿ.ಕಡಕೋಳ, ಬಿ.ಆರ್.ಪಿ ಗಳಾದ ವ್ಹಿ.ಸಿ.ಹಿರೇಮಠ. ರಾಜು ಭಜಂತ್ರಿ. ರತ್ನಾ ಸೇತಸನದಿ. ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಐ.ಚಿನಗುಡಿ, ಸಿ.ಆರ್.ಪಿಗಳಾದ ಎಚ್.ಎಲ್.ನದಾಫ್. ರಾಮಚಂದ್ರಪ್ಪ, ಎನ್.ಜಿ.ತೊಪ್ಪಲದೆ.ಎಂ.ಐ.ಮಡಿವಾಳರ. ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಎಂ.ಕೆ.ಪಾಟೀಲ, ಆರ್.ಎನ್.ಅಬ್ಬಾರ, ಎನ್.ಬಿ.ಪೆಂಟೇದ. ಶ್ರೀಮತಿ ಪಿ.ವ್ಹಿ.ಹತ್ತಿಕಟಗಿ. ಬಿ.ಆರ್.ಪಿ.ಗಳು, ಬಿ.ಆಯ್.ಇ.ಆರ್.ಟಿ ಗಳು, ಸಿ.ಆರ್.ಪಿ ಯವರು ಹಾಗೂ ತಾಲೂಕಿನ ವಿವಿಧ ಸಂಪನ್ಮೂಲ ಕೇಂದ್ರಗಳಿಂದ ಆಗಮಿಸಿದ್ದ ಶಿಕ್ಷಕ/ಶಿಕ್ಷಕಿಯರು ಭಾಗವಹಿಸಿದರು.

- Advertisement -
- Advertisement -

Latest News

 ದಿ. 9 ರಂದು ಕಪ್ಪತಗುಡ್ಡದಲ್ಲಿ 9 ನೇ “ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ”

ಗದಗ - ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರಿಗೆ,...
- Advertisement -

More Articles Like This

- Advertisement -
close
error: Content is protected !!
Join WhatsApp Group