spot_img
spot_img

ಸೇವಾ ಮನೋಭಾವನೆ ಸಹಕಾರಿ ಕ್ಷೇತ್ರದ ಆತ್ಮ- ಸತೀಶ ಕಡಾಡಿ

Must Read

spot_img
- Advertisement -

ಮೂಡಲಗಿ: ಸಹಕಾರಿ ಸಂಘಗಳು ಲಾಭದ ಅಪೇಕ್ಷೆ ಮತ್ತು ವ್ಯವಹಾರಿಕ ದೃಷ್ಟಿಕೋನಕ್ಕಿಂತ ಮುಖ್ಯವಾಗಿ ಸೇವಾ ಮನೋಭಾವವನ್ನು ಬೆಳಸಿಕೊಂಡಾಗ ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿ ಆಗಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ ಅರ್ಬನ್ ಕೋ ಆಪರೇಟಿವ್ ಸೊಸಾಯಿಟಿ ಲಿ, ಮೂಡಲಗಿ ಇದರ 4ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಸತೀಶ ಕಡಾಡಿ ಅವರು, ನಮ್ಮ ದೇಶದಲ್ಲಿ ಅನೇಕ ಹಿರಿಯರು ತಮ್ಮ ಸೇವಾ ಮನೋಭಾವದ ಗುಣದಿಂದಾಗಿ ಸಹಕಾರ ಚಳವಳಿಯನ್ನು ಒಂದು ಸಾಮಾಜಿಕ ಬದಲಾವಣೆಯ ಚಳವಳಿಯನ್ನಾಗಿ ಬದಲಾಯಿಸಿದ್ದಾರೆ. ಮನೋಭಾವವನ್ನು ಸಹಕಾರಿ ಕ್ಷೇತ್ರದ ಆತ್ಮವನ್ನಾಗಿ ನಿರ್ಧರಿಸಿದರ ಫಲವಾಗಿಯೇ ಇವತ್ತು ಸಹಕಾರಿ ಕ್ಷೇತ್ರ ಇಷ್ಟು ಪ್ರಬಲ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿದೆ ಮತ್ತು ಅದರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.

ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಸುತ್ತಿರುವ ಸಹಕಾರಿ ಸಂಘಗಳ ಪಾತ್ರ ಬಹಳ ಪ್ರಮುಖವಾಗಿದೆ. ಒಟ್ಟಾರೆ ನಮ್ಮ ದೇಶದಲ್ಲಿ ಸಹಕಾರಿ ಸಂಘಗಳಲ್ಲಿನ ಪ್ರಾಮಾಣಿಕ ಮತ್ತು ದಕ್ಷ ಆಡಳಿತ ವ್ಯವಸ್ಥೆ, ಜಗತ್ತಿಗೆ ಮಾದರಿಯಾಗುವ ರೀತಿಯಲ್ಲಿದೆ ಇದು ನಮ್ಮ ದೇಶದ ಮಣ್ಣಿನಲ್ಲಿರುವ ನಾಯಕತ್ವ ಗುಣವನ್ನು ಪ್ರತಿಬಿಂಬಿಸುತ್ತದೆ ಎಂದರು.

- Advertisement -

ಹೊಸ ಯರಗುದ್ರಿ ಈರಾಲಿಂಗೇಶ್ವರ ಮಠದ ಪೂಜ್ಯರಾದ ಸಿದ್ದಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಭೀಮಪ್ಪ ಗಡಾದ, ಮೊಹನಗೌಡ ನಾಡಗೌಡ, ಶಿವಬಸು ಹಂದಿಗುದ, ಚೆನ್ನಪ್ಪ ಅಥಣಿ, ಶ್ರೀಶೈಲ ಪೂಜೇರಿ, ಗಂಗಾಧರ ಹಿರೇಮಠ, ಬಸಯ್ಯ ಮಠಪತಿ, ಲಕ್ಷ್ಮಣ ಉಟಗಿ, ಬಸವರಾಜ ಕಾಲಶೆಟ್ಟಿ, ಮಹಾಲಿಂಗ ಬಡಿಗೇರ ಸೇರಿದಂತೆ ಗ್ರಾಮದ ಹಿರಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group