ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯತೆ ಕಲಿಸಬೇಕು – ಡಿಡಿಪಿಐ ಹಂಚಾಟೆ

Must Read

ಮೂಡಲಗಿ: ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯತೆಯ ಅಂಶಗಳನ್ನು ಕಲಿಸಿ ದೇಶದ ಶ್ರೇಷ್ಠ ಪ್ರಜೆಗಳನ್ನಾಗಿಸಬೇಕು’ ಎಂದು ಚಿಕ್ಕೋಡಿಯ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಹೇಳಿದರು.

ಇಲ್ಲಿಯ ಚೈತನ್ಯ ಆಶ್ರಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ‘ಚೈತನ್ಯ ಬೆಳ್ಳಿ ಹಬ್ಬ-2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಪಾಲಕರು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಓದುವ ಅವಕಾಶವನ್ನು ಮಾಡಿಕೊಡಬೇಕು ಎಂದರು.

ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹವನ್ನು ನೀಡಿ ಅವರ ಭವಿಷ್ಯದ ಮಾರ್ಗದರ್ಶಕರಾಗಬೇಕು ಎಂದರು.

ಚೈತನ್ಯ ಶಿಕ್ಷಣ ಸಂಸ್ಥೆಯು ಕಳೆದ ಎರಡುವರೆ ದಶಕದಿಂದ ಗ್ರಾಮೀಣ ಬಡ ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಅನುಪಮ ಸೇವೆ ಸಲ್ಲಿಸಿದ್ದು ಶ್ಲಾಘನೀಯವಾಗಿದೆ. ಸಂಸ್ಥೆಯ ಸಂಸ್ಥಾಪಕ ದಿ. ಸಿದ್ದಣ್ಣ ಹೊರಟ್ಟಿ ಅವರ ಕಾರ್ಯವನ್ನು ಸಮಾಜವು ಸದಾ ನೆನೆಯುವಂತಾಗಿದೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್.ಎಂ. ಕಮದಾಳ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಆರ್.ಎಸ್. ಹೊರಟ್ಟಿ ಅಧ್ಯಕ್ಷತೆವಹಿಸಿದ್ದರು.

ಆಡಳಿತಾಧಿಕಾರಿ ಎ.ಎಲ್. ಶಿಂಧಿಹಟ್ಟಿ, ಚೈತನ್ಯ ಗ್ರುಪ್ಸ್ ಅಧ್ಯಕ್ಷ ಟಿ.ಬಿ. ಕೆಂಚರಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಬಿ.ವೈ. ಪಾಟೀಲ, ವೈ.ಬಿ. ಪಾಟೀಲ, ವಿಜಯ ಎಸ್. ಹೊರಟ್ಟಿ, ಮುಖ್ಯ ಶಿಕ್ಷಕರಾದ ಸಂದ್ಯಾ ಪಾಟೀಲ, ಕೆ.ಎಸ್. ಹುಬ್ಬಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚೈತನ್ಯ ಶಾಲೆಯಲ್ಲಿ ಕಲಿತು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ 10 ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ತರಬೇತಿ ನೀಡಿದ ಶಿಕ್ಷಕರನ್ನು ಸನ್ಮಾನಿಸಿದರು.

ರಮೇಶ ಬಿರಾದಾರ ಮತ್ತು ಗೋಪಾಲ ನಿರೂಪಿಸಿದರು.

- Advertisement -
- Advertisement -

Latest News

ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮೂಡಲಗಿ : ಹುಬ್ಬಳಿಯ ಬಣಗಾರ ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಶೈಕ್ಷಣಿಕ ವರ್ಷ 2024- 25 ನೇ ಸಾಲಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group