ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆ

Must Read

ಹೂಲಿಕಟ್ಟಿ – ಕಿತ್ತೂರ ತಾಲೂಕಿನ  ಕೆ ಪಿ ಎಂ ಸರಕಾರಿ ಪ್ರೌಢ ಶಾಲೆ ಹೂಲಿಕಟ್ಟಿ ಇಲ್ಲಿ ಮಾತೆ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆ ಆಯೋಜನೆಗೊಂಡಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ರಾದ ಜಿ ಎಚ್ ನಾಯಕ ವಹಿಸಿ ಮಾತನಾಡಿದರು.

ಮಹಿಳೆಯಾಗಿ ಕ್ರಾಂತಿಕಾರಿ ಬದಲಾವಣೆಯ ಹರಿಕಾರ ರಾಗಿ ಶಿಕ್ಷಣದ ಕ್ರಾಂತಿ ಮಾಡಿ ಇಂದು ಶಾಲೆಗಳಲ್ಲಿ ಮಹಿಳೆಯರು ಹೆಚ್ಚು ಕಲಿಕೆಯಲ್ಲಿ ತೊಡಗಿರುವುದು ಅವರ ಜಾಗೃತಿಯೇ ಕಾರಣ ಎಂದು ನುಡಿದರು.

ಶ್ರೀಮತಿ ಸುರೇಖಾ ಬಾಲನ್ನವರ ಮಾತನಾಡುತ್ತ, ಮಹಿಳೆ, ಅಕ್ಷರದ ಅವ್ವ ಎಂದೇ ಖ್ಯಾತನಾಮ ಳಾಗಿ ಇಂದು ಮಹಿಳಾ ಶಿಕ್ಷಣದ ಮೇಲೆ ಬೆಳಕು ಚೆಲ್ಲಿದ ವೀರ ಅಕ್ಷರ ಕ್ರಾಂತಿಯ ವನಿತೆ ಯಾಗಿದ್ದಾಳೆ ಎಂದು ಮಾತನಾಡಿದರು.

ರಾಜ್ಯಪರಿಷತ್ ಸದಸ್ಯರಾದ  ಡಾ ಶೇಖರ ಹಲಸಗಿ , ಮಾತನಾಡಿ ಜನ್ಮ ದಿನಾಚರಣೆ ನೆನಪಿನಲ್ಲಿ ಅವರ ಆದರ್ಶ ಗಳನ್ನು ಮುದ್ದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಎಂದು ಕಿವಿಮಾತನ್ನು ಹೇಳಿದರು. 

ಕಾರ್ಯಕ್ರಮದಲ್ಲಿ  ಶ್ರೀಮತಿ ಎಸ್ ಕೆ ಕದಂ, ಶ್ರೀಮತಿ ಎಲ್ ಎನ್ ಕಣಬರ್ಗಿ, ಶ್ರೀಮತಿ ಅಂಬಿಕಾ ಹಂಚಿನಮನಿ,  ಬಿ ಎಸ್ ಪಾಟೀಲ ಸಿ ಬಿ ತುರುಮರಿ, ಶ್ರೀಮತಿ ಎ. ಬಿ ಅಡಕಿ 250  ಕ್ಕೊ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಕುಮಾರಿ ಪೂರ್ಣಿಮಾ ಲೋಕುರ, ನಿರ್ವಹಿಸಿದರು, ಸ್ವಾಗತ ಮೋನಿಕಾ ತಳವಾರ, ವಂದನಾರ್ಪಣೆಯನ್ನು ಮುಕ್ತಾ ಸಂಪಗಾವಿ ಮಾಡಿದರು.

ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಭಾವಚಿತ್ರ ಪೂಜೆ ಹಾಗೂ ಸಾವಿತ್ರಿಬಾಯಿ ಪುಲೆಯವರ ಮೇಲೆ ರಚಿತಾ ಗೀತೆಯನ್ನು ಹಾಡಿ ಚಾಲನೆ ನೀಡಿ ಕಾರ್ಯಕ್ರಮ ಯಶಸ್ವಿಗೊಂಡಿತು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group