ಸಮ್ಮೇದ ಶಿಖರಜಿ ಮತ್ತು ಪಾಲಿಟಾನ ಕ್ಷೇತ್ರ ರಕ್ಷಣೆಗಾಗಿ ಮೂಡಲಗಿ ಜೈನ ಸಮುದಾಯದಿಂದ ಪ್ರತಿಭಟನೆ

Must Read

ಮೂಡಲಗಿ: ಗುಜರಾತ ರಾಜ್ಯದ ಪಾಲಿಟಾನ ಮತ್ತು ಜಾರ್ಖಂಡ ರಾಜ್ಯದಲ್ಲಿನ ಸಮ್ಮೇದ ಶಿಖರಜಿ ಕ್ಷೇತ್ರವನ್ನು ಸರಕಾರ ಪ್ರವಾಸೋದ್ಯಮ ತಾಣ ಎಂದು ಹೊರಡಿಸಿರುವ  ಅಧಿ ಸೂಚನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಜೈನ ಸಮುದಾಯದವರು ಮೂಡಲಗಿ ಪಟ್ಟಣದಲ್ಲಿ ಬುಧವಾರದಂದು  ಪ್ರತಿಭಟನಾ ರ್ಯಾಲಿ ನಡೆಸಿ ಮೂಡಲಗಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಜೈನ ಮಂದಿರದಲ್ಲಿ ಜಮಾವಣೆಗೊಂಡ ಜೈನ ಸಮುದಾಯದ ಬಾಂಧವರು  ಜೈನ ಮಂದಿರದಿಂದ ಕಾಲೇಜ ರಸ್ತೆಯ ಮೂಲಕ ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೆಮ್ಮ ದೇವಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಸಂಗಪ್ಪಣ್ಣ ವೃತ್ತದ ಮೂಲಕ ಕಲ್ಮೇಶ್ವರ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.

ಕಲ್ಮೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರಕಾರ ವಿರುದ್ದ ಘೋಷಣೆ ಕೂಗಿ ಕೇಂದ್ರ ಮತ್ತು ಆಯಾ ರಾಜ್ಯ ಸಕಾರಗಳು ಸಮ್ಮೇದ ಶಿಖರಜಿ ಮತ್ತು ಪಾಲಿಟಾನ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಜೈನ ಸಮಾಜಕ್ಕೆ ಇರುವ ಒಂದೇ ಒಂದು ತೀರ್ಥ ಕ್ಷೇತ್ರ ಇರುವ ಕ್ಷೇತ್ರದಲ್ಲಿ 24 ತೀರ್ಥಂಕರರಲ್ಲಿ 20 ತೀರ್ಥಂಕರರು ಮೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ, ಈ ಕ್ಷೇತ್ರ ಜೈನರಿಗೆ ಪೂಜ್ಯನೀಯ  ಮತ್ತು ಪವಿತ್ರ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪ್ರವಾಸೀ  ಕ್ಷೇತ್ರ ಎಂದು ಮಾಡುವುದರಿಂದ ಜೈನ್ ಸಮುದಾಯಕ್ಕೆ ಧಕ್ಕೆ ಉಂಟಾಗುತ್ತದೆ. ಸರಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ಸರಕಾರ ಹಿಂದೆ ಪಡೆಯಬೇಕೆಂದು ಸರಕಾರವನ್ನು ಆಗ್ರಹಿಸಿದ ಅವರು   ಜಾರಕಿಹೊಳಿ ಕುಟುಂಬ ಜೈನ ಸಮುದಾಯದವರ ಜೊತೆ ಸದಾಕಾಲ ಬೆನ್ನೆಲುಬಾಗಿ ಇರುತ್ತವೆ ಎಂದರು.   

ಪ್ರತಿಭಟನೆಯಲ್ಲಿ ಜೈನ ಸಮುದಾಯದ ಮುಖಂಡರಾದ ಉದಯಕುಮಾರ ಜೋಕಿ, ಶೀತಲ ಡೊಂಗರೆ, ಲಕ್ಷ್ಮಣ ಸಪ್ತಸಾಗರ, ಭರತೇಶ ಉಪಾಧ್ಯೆ, ವರ್ಧಮಾನ ಬೋಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಆದೇಶವನ್ನು ರದ್ದುಗೊಳಿಸಬೇಕು ಇಲ್ಲದಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಸರಕಾರಕ್ಕೆ ಎಚ್ಚರಿಕ್ಕೆ ನೀಡಿದರು.

ಪ್ರತಿಭಟನೆಯಲ್ಲಿ ಜೈನ ಸಮಾಜ ಮುಖಂಡರಾದ ಡಾ.ಬಿ.ಎಸ್.ಬಾಬಣ್ಣವರ, ನೇಮಣ್ಣಾ ಬೇವಿನಕಟ್ಟಿ, ಪಾಯಗೂಂಡ ಪಾಟೀಲ, ಭರಮಪ್ಪಾ, ಬಾಗೇವಾಡಿ, ಎಸ್.ಆರ್.ಉಪ್ಪಿನ, ಪಾರೀಶ ಹುಕ್ಕೇರಿ, ಅಣ್ಣಪ್ಪ ಅಕ್ಕನ್ನವರ, ಮಾನಿಕ ಬೋಳಿ, ಮಲ್ಲಪ್ಪಾ ಛಬ್ಭಿ, ವರ್ಧಮಾನ ಅಡಕೆ, ಮಲ್ಲಪ್ಪಾ ಉಂದ್ರಿ, ಜಂಬು ಚಿಕ್ಕೋಡಿ, ಭರತೇಶ ಉಪ್ಪಿನ್, ಸಾವಂತ ಹೊಸಮನಿ, ಜಯಪಾಲ ಪಟ್ಟಣಶೆಟ್ಟಿ, ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಅಬ್ದುಲ್ ಮಿರ್ಜಾನಾಯಿಕ  ಹಾಗೂ ಮೂಡಲಗಿ, ಪಟಗುಂದಿ, ಹಳ್ಳೂರ, ಭೈರನಟ್ಟಿ, ನಾಗನೂರ,  ಹುಣಶ್ಯಾಳ ಪಿ.ವಾಯ್ ಗ್ರಾಮ ಸೇರಿದಂತೆ ಮೂಡಲಗಿ-ಗೋಕಾಕ ತಾಲೂಕಿನ ವಿವಿಧ ಗ್ರಾಮಗಳ ಜೈನ ಸಮಾಜದ ಬಾಂಧವರು ಭಾಗವಹಿಸಿದರು.

Latest News

ಸಿಂಡಿಕೇಟ್ ಸದಸ್ಯ ಜಗದೀಶ ಭೈರಮಟ್ಟಿಯವರಿಗೆ ಸನ್ಮಾನ

ಬಾಗಲಕೋಟೆ : ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘ ವಜ್ರಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇದ್ದು ಸಂಸ್ಥೆಗೆ ಹಿರಿಮೆಯ ಗರಿ ಹೆಮ್ಮೆ ಎಂಬಂತೆ ಶ್ರೀ ಪರಪ್ಪ ಸಂಗಪ್ಪ...

More Articles Like This

error: Content is protected !!
Join WhatsApp Group