ರಾಜ್ಯಕ್ಕೆ ಅಪಾಯಕಾರಿ XBB.1.5 ತಳಿ ; ಆತಂಕದಲ್ಲಿ ಜನತೆ

Must Read

ಉತ್ಸವದಲ್ಲಿ ತಲ್ಲೀನರಾದ ಸಚಿವರು

ಬೀದರ: ಕೊರೋನಾಗಿಂತಲೂ ಹತ್ತು ಪಟ್ಟು ಅಪಾಯಕಾರಿಯಾಗಿರುವ XBB.1.5 ತಳಿಯ ವೈರಸ್ ರಾಜ್ಯವನ್ನು ಪ್ರವೇಶಿಸಿದ್ದು ಎಲ್ಲೆಡೆ ಆತಂಕ ಮನೆ ಮಾಡಿದೆ.

ಇಂಥ ಪರಿಸ್ಥಿತಿಯಲ್ಲಿ ಬೀದರ್ ಉತ್ಸವ ನೆಪದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಕೆಂದ್ರ ಸಚಿವ ಭಗವಂತ ಖೂಬಾ ಅವರು ಸಿರಿಧಾನ್ಯ ಓಟಕ್ಕೆ ಚಾಲನೆ ನೀಡಿದರು.

ರಾಜ್ಯದಲ್ಲಿ ಒಂದು XBB.1.5 ಹೊಸ ಕೋವಿಡ್ ತಳಿ ಪತ್ತೆಯಾಗಿದ್ದು ದೇಶಾದ್ಯಂತ ಐದು ಪ್ರಕರಣ ವರದಿಯಾಗಿವೆ ಆದರೆ ಸಾವಿರಾರು ಜನರು ಮಾಸ್ಕ ಹಾಕದೇ ಸಿರಿಧಾನ್ಯ ಓಟದಲ್ಲಿ ಬಾಗಿಯಾಗಿ ಅಂಬೇಡ್ಕರ್ ವತ್ತದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಸಿರಿಧಾನ್ಯ ಓಟ ನಡೆಯಿತು. ಶಾಲೆ ಮಕ್ಕಳು ಭಾಗಿಯಾದರು ಮತ್ತು ಡೊಳ್ಳು ಕುಣಿತಗಳು ನಡೆದವು.

ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಸಚಿವರಾದಿಯಾಗಿ ಎಲ್ಲರೂ ಬೀದರ ಉತ್ಸವ, ಸಿರಿಧಾನ್ಯ ಓಟದಂಥ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೆ ಏನಾದರೂ ಹೆಚ್ಚುಕಡಿಮೆಯಾದರೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಏಳುತ್ತದೆ.

ಇನ್ನು ಬರುವ ಜನವರಿ ೯ ರಂದು ನಡೆಯಲಿರುವ ಬೀದರ್ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗೆ ಜಿಲ್ಲಾಡಳಿತ ಆಹ್ವಾನ ನೀಡಿದೆ.

ಅಲ್ಲದೆ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ಅನುರಾಧ ಭಟ್ ಸೇರಿದಂತೆ ಹಲವು ಖ್ಯಾತ ಗಾಯಕರನ್ನು ಉತ್ಸವಕ್ಕೆ ಆಹ್ವಾನಿಸಲಾಗಿದೆ.

ಜನವರಿ ೭,೮,೯ ರಂದು ಬೀದರ್ ನಲ್ಲಿ ಅದ್ದೂರಿ ಬೀದರ್ ಉತ್ಸವ ಕಾರ್ಯಕ್ರಮ ೮ ವರ್ಷದ ಬಳಿಕ ನಡೆಯಲಿದೆ.

ಆಶಿಶ್ ಕೌರ್, ಕುಮಾರ್ ಸಾನು, ಮಂಗಲಿ ಸೇರಿದಂತೆ ಬಾಲಿವುಡ್‌ ನ ಖ್ಯಾತ ಗಾಯಕರು, ನಟರಾದ ಶಿವರಾಜಕುಮಾರ, ಸುದೀಪ್, ಧನಂಜಯ ಅವರೂ  ಬೀದರ್ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group