ಸವದತ್ತಿ: ಮುನವಳ್ಳಿ ಯ ಹಿರಿಯ ಸಾಹಿತಿಗಳು ನಿವೃತ್ತ ಡಿ. ವೈ. ಎಸ್.ಪಿ ಗಳು 77 ವರ್ಷದ ಹಿರಿಯ ಸಾಹಿತಿಗಳಾದ ಪಾಂಡುರಂಗ ಯಲಿಗಾರ ಅವರನ್ನು ಇದೇ ಜನವರಿ 17 ರಂದು ಮುನವಳ್ಳಿ ಯಲ್ಲಿ ಜರುಗಲಿರುವ ಸವದತ್ತಿ ತಾಲೂಕು 7ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು ಇಂದು ಸಂಜೆ ಬೆಳಗಾವಿ ಯ ಅವರ ನಿವಾಸದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು.
ಸವದತ್ತಿ ತಾಲೂಕಾ ಕ. ಸಾ.ಪ. ಅಧ್ಯಕ್ಷರಾದ ಡಾ.ವೈ ಎಂ.ಯಾಕೊಳ್ಳಿ,ಜಿಲ್ಲಾ ಕ.ಸಾ.ಪ ಕಾರ್ಯದರ್ಶಿ ಗಳಾದ ಎಂ. ವೈ ಮೆಣಸಿನಕಾಯಿ, ಹಿರಿಯರಾದ ಬಿ.ವಿ.ಬಿ ನರಗುಂದ, ನಿಕಟಪೂರ್ವ ಅಧ್ಯಕ್ಷರಾದ ಸಿ.ಬಿ.ದೊಡಗೌಡರ ಕೋಶಾಧ್ಯಕ್ಷರಾದ ಜಿ.ವೈ ಕರಮಲ್ಲಪ್ಪನವರ, ಕಾರ್ಯದರ್ಶಿಗಳಾದ ವೈ. ಬಿ. ಕಡಕೋಳ , ಬೆಳಗಾವಿ ತಾಲೂಕಾ ಕ.ಸಾ.ಪ ಅಧ್ಯಕ್ಷರಾದ ಸುರೇಶ ಹಂಜಿ, ಬೆಳಗಾವಿ ಸಾಹಿತಿಗಳಾದ ಹಾಗೂ ಎಂ. ಎನ್. ಆರ್. ಎಸ್. ಬಿ. ಈಡಿ ಕಾಲೇಜಿನ ಪ್ರಾಚಾರ್ಯರಾದ ಡಾ. ನಿರ್ಮಲಾ ಬಟ್ಟಲ, ನಿವೃತ್ತ ಪ್ರಾಧ್ಯಾಪಕರಾದ ದಳವಾಯಿ, ಪಿ.ಬಿ.ಯಲಿಗಾರ ಅವರ ಬಂಧುಗಳು ಹಾಜರಿದ್ದರು.
ಯಲಿಗಾರ ಅವರು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಜೊತೆಗೆ ಕವಿಯಾಗಿ ಉಪನ್ಯಾಸಗಳನ್ನು ನೀಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ವ್ಯಕ್ತಿತ್ವವನ್ನು ಹೊಂದಿರುವ ಎಲೆಮರೆಯ ಕಾಯಿಯಂತೆ ಬದುಕನ್ನು ನಡೆಸುತ್ತಿರುವ ಇವರು 1989 ರಲ್ಲಿ “ನಿನ್ನೆ ನಾಳೆಯ ನಡುವೆ” ಕವನ ಸಂಕಲನ.
1996 ರಲ್ಲಿ “ಹಕ್ಕಿ ಗೂಡಿನ ಗರಿಕೆ” ಕವನ ಸಂಕಲನ. 2018 ರಲ್ಲಿ ಮೂರನೆಯ ಕವನ ಸಂಕಲನ “ರಾಗರತಿ” ಹೀಗೆ ಮೂರು ಕವನ ಸಂಕಲನಗಳಲ್ಲದೇ “ನೀನೇ” ಎಂಬ ಗೀತೆಗಳ ಆಡಿಯೋ ಕೂಡ ಪ್ರಸಿದ್ದ ಗಾಯಕ ಗಾಯಕಿಯವರ ಸುಮಧುರ ಕಂಠದಲ್ಲಿ ಮೂಡಿ ಬಂದಿದೆ.
ಕೋರೋನಾ ಕಾಲಘಟ್ಟದಲ್ಲಿ 30 ವಾರಗಳ ಕಾಲ ವಿವಿಧ ಕವಿಗಳ ಕವಿತಾ ವಾಚನ ಮತ್ತು ವಿಮರ್ಶೆ 8 ಕಂತುಗಳಲ್ಲಿ ರಾಮಾಯಣದ ಕುರಿತು ವೆಬಿನಾರ್ ಉಪನ್ಯಾಸ.
ಮಾಡುವ ಮೂಲಕ ಹಳಗನ್ನಡ ಹೊಸಗನ್ನಡ ಬಾಂಧವ್ಯ ಬೆಸೆಯುವ ಮೂಲಕ ಉಪನ್ಯಾಸ ನೀಡಿರುವರು. ಫೇಸ್ಬುಕ್ ನಲ್ಲಿ ತಮ್ಮ ಕವನ ವಾಚನ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡಿರುವ ಇವರು ಅಖಿಲ ಭಾರತೀಯ 84 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಕವನ ವಾಚನ ಮಾಡಿರುವರು.
ಇವರ ಸಾಹಿತ್ಯ ಗಮನಿಸಿ ಸವದತ್ತಿ ತಾಲೂಕು 7 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಇಂದು ಆಮಂತ್ರಣವನ್ನು ನೀಡಲಾಯಿತು