ಜನರ ತರಾಟೆ; ಕಕ್ಕಾಬಿಕ್ಕಿಯಾದ ಶಾಸಕ ಅನಿಲ ಬೆನಕೆ

Must Read

ಬೆಳಗಾವಿ – ಚುನಾವಣೆಯ ಸಮಯದಲ್ಲಿ ಮತದಾರರನ್ನು ತಂದೆ ತಾಯಿ ಎಂದು ಸಂಬೋಧಿಸುತ್ತ ಕೈಕಾಲು ಹಿಡಿದು ಚುನಾವಣೆಯಲ್ಲಿ ಆರಿಸಿ ಬರುವ ನಾಯಕರು ಆಮೇಲೆ ಕ್ಷೇತ್ರದ ಕಡೆಗೆ ತಿರುಗಿಯೂ ನೋಡದ ಉದಾಹರಣೆಗಳು ಇವೆ. ಹೀಗೆಯೇ ಒಬ್ಬ ನಾಯಕರನ್ನು ಕ್ಷೇತ್ರದ ಮತದಾರರು ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆಯವರು ಬಸವನ ಕುಡಚಿ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ಹೋದಾಗ ಮೊದಲಿನಿಂದಲೂ ಅಸಮಾಧಾನಗೊಂಡಿದ್ದ ಗ್ರಾಮದ ಜನರು ಗ್ರಾಮದ ಅಭಿವೃದ್ಧಿ ಕುರಿತಂತೆ ತರಹೇವಾರಿ ಪ್ರಶ್ನೆ ಕೇಳಿ ಶಾಸಕರು ಕಕ್ಕಾಬಿಕ್ಕಿಯಾಗುವಂತೆ ಮಾಡಿದರು. 

ಈ ಮೊದಲು ಜನತೆ ಶಾಸಕರಿಗೆ ಸಮಸ್ಯೆಗಳ ಬಗ್ಗೆ ಕರೆ ಮಾಡಿದಾಗ ಶಾಸಕರು ಸರಿಯಾಗಿ ಸ್ಪಂದಿಸಿಲ್ಲವೆಂಬುದನ್ನು ಪ್ರಸ್ತಾಪಿಸಿದ ಜನರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಜನತೆಯ ಆಕ್ರೋಶವನ್ನು ಎದುರಿಸಲಾಗದೆ ಶಾಸಕ ಬೆನಕೆಯವರು ಅಲ್ಲಿಂದ ಕಾಲ್ಕಿತ್ತರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group