ಡಬಲ್ ಇಂಜಿನ್ ಸರ್ಕಾರ ಇದ್ದರೆ ಡಬಲ್ ಲಾಭ; ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರಲು ಮೋದಿ ಮನವಿ

Must Read

ಬೀದರ: ಈ ಬಾರಿ ಜನರ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ಇದು ಕೇವಲ ಐದು ವರ್ಷದ ಸರ್ಕಾರ ಆಯ್ಕೆ ಮಾಡುವ ಚುನಾವಣೆಯಲ್ಲ. ಕರ್ನಾಟಕವನ್ನು ನಂಬರ್​ ಒನ್ ಮಾಡುವ ಚುನಾವಣೆ ಇದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಜಗದ್ಗುರು ಬಸವೇಶ್ವರ, ಶಿವಶರಣರ ನಾಡಿಗೆ ನನ್ನ ನಮನಗಳು ಎಂದು ಬೀದರ್​ನ ಹುಮನಾಬಾದ್​ನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ನನ್ನ ಚುನಾವಣೆಯ ಪ್ರಚಾರ ಬಸವಣ್ಣನವರ ನಾಡಿನಿಂದ ಆರಂಭವಾಗಿದೆ.

ಇಷ್ಟೊಂದು ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರರಿಗೆ ನಮಸ್ಕಾರ ಎಂದರು.

ಯಾರಿಂದಲೂ ತಡೆಯೋದಕ್ಕೆ ಆಗೋದಿಲ್ಲ:

ಕರ್ನಾಟಕದ ಜನತೆ ಅಭಿವೃದ್ಧಿಯ ಕರ್ನಾಟಕವನ್ನು ನೋಡುತ್ತೀರಿ. ನಿಮ್ಮ ಅಭಿವೃದ್ಧಿಯ‌ ಕನಸನ್ನು ಬಿಜೆಪಿ ನನಸು ಮಾಡುತ್ತದೆ. ಕರ್ನಾಟಕ ನಂಬರ್ ಒನ್ ರಾಜ್ಯ ಮಾಡಬೇಕು ಅಂದ್ರೆ ಡಬಲ್ ಇಂಜಿನ್ ಸರ್ಕಾರ ಇರಬೇಕು. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಅಭಿವೃದ್ಧಿ ಗ್ಯಾರಂಟಿ. ಕರ್ನಾಟಕವನ್ನು ನಂಬರ್ ಒನ್ ಆಗೋದನ್ನು ಯಾರಿಂದಲೂ ತಡೆಯೋದಕ್ಕೆ ಆಗೋದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕಕ್ಕೆ 30 ಸಾವಿರ ಕೋಟಿ ಕೇಂದ್ರದಿಂದ ಅನುದಾನ ಬರ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 90 ಸಾವಿರ ಕೋಟಿ ಬರ್ತಿದೆ. ಅನುದಾನ ಮೂರು ಪಟ್ಟು ಹೆಚ್ಚಾಗಿದೆ. ಡಬಲ್‌ ಇಂಜಿನ್ ಸರ್ಕಾರದಿಂದ ಡಬಲ್ ಸ್ಪೀಡ್​ ಕೆಲಸ ಆಗ್ತಿದೆ. ಕರ್ನಾಟಕದಲ್ಲಿ ಡಬಲ್ ಇಂಜಿನ್​​ ಸರ್ಕಾರ ಇಲ್ಲದೆ ಇದ್ದಾಗ ಅಭಿವೃದ್ಧಿ ಮರಿಚೀಕೆ ಆಗಿತ್ತು ಎಂದು ಪ್ರಧಾನಿ ಹೇಳಿದರು.

ಬಡವರ ಕಷ್ಟದಲ್ಲೂ ರಾಜಕೀಯ:

ಕಿಸಾನ್ ಸಮ್ಮಾನ್​ ನಿಧಿಯಿಂದ ಸಣ್ಣ ಸಣ್ಣ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ. ಕೇಂದ್ರ ಸರ್ಕಾರ ಪ್ರತಿಯೊಬ್ಬ ರೈತರಿಗೆ ಆರು ಸಾವಿರ ಹಾಗೂ ರಾಜ್ಯ ಸರ್ಕಾರ ನಾಲ್ಕು ಸಾವಿರ ಸೇರಿ ಒಟ್ಟು ಹತ್ತು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಭೋಲೆ ಬಾಲೆ ಸರ್ಕಾರ ಆಗಿದೆ. ಕಾಂಗ್ರೆಸ್ ಚುನಾವಣೆ ಸಂಧರ್ಭದಲ್ಲಿ ರೈತರ ಸಾಲಮನ್ನಾದ ನಾಟಕ ಆಡ್ತಿತ್ತು. ಯಾವ ರೈತರಿಗೆ ಸಾಲದ ಅವಶ್ಯಕತೆ ಇರ್ತಿತ್ತು, ಅವರಿಗೆ ಸಾಲ ಸಿಗುತ್ತಿರಲಿಲ್ಲ. ಕಾಂಗ್ರೆಸ್​ನಲ್ಲಿ ಕೆಲಸ ಮಾಡುವ ಕಾರ್ಯಕರ್ತರೇ ರೈತರ ಹೆಸರಲ್ಲಿ ಸಾಲ ತಗೆದುಕೊಳ್ಳತ್ತಿದ್ದರು.

ಸಾಲಮನ್ನಾದ ಹೆಸರಲ್ಲಿ ತಮ್ಮವರ ಸಾಲವನ್ನ ಮನ್ನಾ ಮಾಡ್ತಿದ್ದರು. ಆದರೆ, ನಮ್ಮ ಸರ್ಕಾರ ಕಬ್ಬಿನ ರೈತರ ಸಲುವಾಗಿ ವಿಶೇಷ ಯೋಜನೆ ನೀಡಿದೆ. ನಮ್ಮ ಸರ್ಕಾರ ಸಿರಿ ಧಾನ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲುಪಿಸಿದ್ದೇವೆ. ಬಡವರ ಕಷ್ಟವನ್ನು ಕಾಂಗ್ರೆಸ್​ನವರು ಯಾವತ್ತೂ ಅರ್ಥ ಮಾಡಿಕೊಂಡಿಲ್ಲ. ಕಾಂಗ್ರೆಸ್ ಬಡವರ ಕಷ್ಟದಲ್ಲೂ ರಾಜಕೀಯ ಮಾಡಿಕೊಂಡು ಬಂದಿದೆ. ಆದರೆ ಬಿಜೆಪಿ‌ ಬಡವರಿಗಾಗಿ 30 ಸಾವಿರ ಕೋಟಿ ಮನೆ ನಿರ್ಮಾಣ ಮಾಡಿಕೊಟ್ಟಿದೆ ಎಂದರು.

ನನ್ನನ್ನು ಬೈದಷ್ಟೂ ಕಾಂಗ್ರೆಸ್​ ಅವನತಿ:

ಕಾಂಗ್ರೆಸ್​ ನನ್ನನ್ನು ಬೈಯುತ್ತಲೇ ಇರಲಿ ನಾನು ಹೆಚ್ಚು ಹೆಚ್ಚು ಕೆಲಸ ಮಾಡುತ್ತೇನೆ. ನನ್ನ ಮೇಲೆ ನಿಂದನೆ ಮಾಡಿ ಸಮಯ ಹಾಳು ಮಾಡುತ್ತಿದ್ದಾರೆ. ಇದರ ಬದಲು ನಿಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಬೇಕಿತ್ತು. ಈಗ ಚುನಾವಣೆ ಹೊತ್ತಲ್ಲೇ ಲಿಂಗಾಯತ ಸಿಎಂಗಳು ಭ್ರಷ್ಟರು ಎಂದಿದ್ದಾರೆ.

ನನ್ನನ್ನು ಬೈದಷ್ಟೂ ಕಾಂಗ್ರೆಸ್​ ಅವನತಿಯತ್ತ ಸಾಗುತ್ತದೆ. ಬಾಬಾ ಸಾಹೇಬ್​ ಅಂಬೇಡ್ಕರ್​ ಅವರನ್ನು ಸಹ ನಿಂದನೆ ಮಾಡಿದ್ದಾರೆ. ವೀರ ಸಾವರ್ಕರ್​ ಅವರನ್ನು ನಿಂದಿಸಿದ್ದಾರೆ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನೂ ಬಿಟ್ಟಿಲ್ಲ ಇನ್ನು ನನ್ನನ್ನು ಬಿಡುತ್ತಾರಾ ಎಂದು ಕಾಂಗ್ರೆಸ್​ ವಿರುದ್ಧ ಮೋದಿ ಗುಡುಗಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group