Ashok Managooli: ಈ ಸಮಾಜ ವೈದ್ಯರಿಗೆ ಕೃತಜ್ಞವಾಗಿರಬೇಕು

Must Read

ಸಿಂದಗಿ: ಕೊರೋನಾ ವೈರಸ್ ಕಾರಣ ದಿಂದ ಇಡೀ ಮನುಕುಲವೇ ಕಂಗಾಲಾಗಿರುವ ಸಂದರ್ಭದಲ್ಲಿ ಎಲ್ಲರ ಪಾಲಿಗೆ ದೇವರಾದವರು ವೈದ್ಯರು ಅವರಿಗೆಲ್ಲ ಈ ಸಮಾಜ ಕೃತಜ್ಞತೆ ಸಲ್ಲಿಸಲೇಬೇಕು. ವೈದ್ಯರೆಂದರೆ ಜೀವಿಗಳೀಗೆ ಮರುಜೀವ ಕೊಡುವ ದೈವಿಸ್ವರೂಪರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು,

ಅವರು ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡ ವಿಶ್ವ ವೈದ್ಯರ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯರದು ಸೇವಾ ಮನೋಭಾವದ ವೃತ್ತಿ. ಬಿಡುವಿಲ್ಲದೆ ತಮ್ಮ ಕಾಯಕವನ್ನು ಮಾಡುವ ಮನೋವೈಶ್ಯಾಲ್ಯತೆವುಳ್ಳವರು. ವೈದ್ಯರಾದವರು ಗ್ರಾಮೀಣ ಭಾಗದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಕೇಂದ್ರದಲ್ಲಿ ಅವರು ಸೇವೆ ಸಲ್ಲಿಸಲೇಬೇಕು. ಸರ್ಕಾರದ ಈ ನಿಯಮದಿಂದ ಹಳ್ಳಿಗರಿಗೆ ವೈದ್ಯರ ಸೇವೆ ಲಭಿಸುತ್ತಿದೆ ಇಲ್ಲವಾದಲ್ಲಿ ಗ್ರಾಮೀಣ ಪ್ರದೇಶದ ಜನರು ಅನೇಕ ರೋಗಗಳ ಪರಿಹಾರಕ್ಕೆ ಪಟ್ಟಣವನ್ನು ಅವಲಂಭಿಸಬೇಕಾಗುತಿತ್ತು. ವೈದ್ಯ ವೃತ್ತಿ ಎಲ್ಲ ವೃತ್ತಿಗಿಂತಲು ಶ್ರೇಷ್ಠವಾದ ವೃತ್ತಿ ಈ ವೃತ್ತಿಯಲ್ಲಿ ಇರುವ ಪ್ರತಿಯೊಬ್ಬರು ಸಾಮಾನ್ಯರಲ್ಲ ಅವರೆಲ್ಲರೂ ಅಸಾಮಾನ್ಯರೆ ಎಂದ ಅವರು ವೈದ್ಯ ಲೋಕಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮನಗೂಳಿ ಆಸ್ಪತ್ರೆಯ ವೈದ್ಯೆ ಡಾ.ಸಂಧ್ಯಾ ಶಾಂತವೀರ ಮನಗೂಳಿ ಮಾತನಾಡಿ, ವೈದ್ಯಕೀಯ ಲೋಕ ಅತ್ಯಂತ ಶ್ರೇಷ್ಠವಾದ ಲೋಕ. ಇಲ್ಲಿಯ ನಮ್ಮಯ ಸೇವೆ ನಮಗೆ ತೃಪ್ತಿ ತಂದಿದೆ. ಈ ಸಮಾಜ ವೈದ್ಯರ ಮೇಲೆ ಇಟ್ಟುಕೊಂಡಿರುವ  ಪ್ರೀತಿಗೆ ನಾವೆಲ್ಲ ಋಣಿಯಾಗಿದ್ದೇವೆ ಎಂದರು.

ಈ ವೇಳೆ ಡಾ.ಶಾಂತವೀರ ಮನಗೂಳಿ, ಮಹಾನಂದ ಬಮ್ಮಣ್ಣಿ, ಸುನಂದಾ ಯಂಪೂರೆ, ಡಾ ಸತೀಶ ರಾಠೋಡ, ಡಾ.ಅಶ್ವಿನಿ ಆಲೂರ, ಡಾ. ಆರತಿ ಚಿಕ್ಕೋಡಿ, ಡಾ.ಆನಂದ ದೊಡ್ಡಮನಿ, ಡಾ.ಚೇತನ ಕುಲಕರ್ಣಿ, ಡಾ. ಪ್ರತಿಭಾ ಬಿರಾದಾರ, ಡಾ.ಉಮಾಶ್ರೀ ಕೆಂಭಾವಿ, ಕುಮಾರ ಬಗಲಿ, ಪೀರಾ ಮಗರಬಿ, ಚೆನ್ನು ರಾಯಚೂರ, ವಿನೋದ ಕಲಬುರ್ಗಿ, ಮೀನಾಕ್ಷೀ ನಾಯ್ಕೋಡಿ, ಸಾವಿತ್ರಿ ಗಾಣಗೇರ, ಆನಂದ ಮುರನಾನೂರ, ಸಾವಿತ್ರಿ ಶಿರಕನಳ್ಳಿ, ಪವಿತ್ರಾ ರಾಠೋಡ, ಕೀರ್ತಿ, ಆಕಾಶ ಕವಟಗಿ, ಅಶೋಕ, ದತ್ತು ಐರೋಡಗಿ, ಮಲ್ಲು ಕುರನಳ್ಳಿ, ಶಂಭುಲಿಂಗ ಕಕ್ಕಳಮೇಲಿ, ರುದ್ರಯ್ಯ ಮಠ ಸೇರಿದಂತೆ ಅನೇಕರು ಇದ್ದರು.

Latest News

ಕಂಟೇನರ್ ಹಣದ ಮೂಲವೇನು ? ಎಸ್ಆಯ್ ಟಿ ತನಿಖೆಯಾಗಲಿ – ಈಶ್ವರ ಖಂಡ್ರೆ

ಬೀದರ - ರಾಜ್ಯದ ಮಹಾರಾಷ್ಟ್ರ ಗಡಿಯಲ್ಲಿ 400 ಕೋಟಿ ಹಣ ತುಂಬಿರುವ ಕಂಟೇನರ್ ಕಳುವಾಗಿರುವ ಹಣದ ಮೂಲವೇನು ? ಅದು ಎಲ್ಲಿಂದ ಬಂದಿತು, ಎಲ್ಲಿಗೆ ಹೋಗುತ್ತಿತ್ತು...

More Articles Like This

error: Content is protected !!
Join WhatsApp Group