ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ

Must Read

ಬೀದರ – ಕೃಷಿ ಡಿಪ್ಲೋಮಾ ಕೋರ್ಸ ಅನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮ ವಿರೋಧಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ವಿಧ್ಯಾರ್ಥಿಗಳು ಮೆರವಣಿಗೆ ಉದ್ದಕ್ಕೂ ನ್ಯಾಯ ಬೇಕು ಎಂಬ ಘೋಷಣೆ ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದರು.

ಜಿಲ್ಲೆಯ ರೈತರ ಮಕ್ಕಳಿಗಾಗಿ ಸ್ಥಾಪಿಸಲಾದ  ಕೃಷಿ ಕಾಲೇಜನ್ನು ಯಥಾ ಪ್ರಕಾರ ಮುಂದುವರಿಸಬೇಕು ಅಥವಾ ಅರಣ್ಯ ಮಹಾವಿದ್ಯಾಲಯ ಪ್ರಾರಂಭಿಸಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ ಸೇರಿದಂತೆ ನೂರಾರು ವಿಧ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸಿಂಡಿಕೇಟ್ ಸದಸ್ಯ ಜಗದೀಶ ಭೈರಮಟ್ಟಿಯವರಿಗೆ ಸನ್ಮಾನ

ಬಾಗಲಕೋಟೆ : ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘ ವಜ್ರಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇದ್ದು ಸಂಸ್ಥೆಗೆ ಹಿರಿಮೆಯ ಗರಿ ಹೆಮ್ಮೆ ಎಂಬಂತೆ ಶ್ರೀ ಪರಪ್ಪ ಸಂಗಪ್ಪ...

More Articles Like This

error: Content is protected !!
Join WhatsApp Group