ವಾರದ ಸತ್ಸಂಗ ಮತ್ತು ಸೇವಾ ಪ್ರತಿಷ್ಠಾನ ವತಿಯಿಂದ ಸಾಮಾಜಿಕ ಅರಿವು ಕಾರ್ಯಕ್ರಮ

Must Read

ಮನಸ್ಸು ಮತ್ತು ಚಿತ್ತ ಶುದ್ಧಿಯಾದರೆ ಜೀವನ ಪಾವನ : ಮಹಾಂತೇಶ ತೋರಣಗಟ್ಟಿ ಅಭಿಮತ 

ನಮ್ಮಲ್ಲಿರುವ ಅಹಂ ತೊರೆದರೆ ಬುದ್ಧಿ ಬಂದು ಚಿತ್ತಶುದ್ದಿ ಆಗುವುದರ ಜೊತೆಗೆ ಮನಸ್ಸು ನಿಯಂತ್ರಣದಲ್ಲಿ ಬಂದು ಮಾದರಿ ಜೀವನ ಸಾಗಿಸ ಬಹುದು ಎಂದು ಸಂಚಾರಿ ಬಸವದಳದ ಅಧ್ಯಕ್ಷ ಮಹಾಂತೇಶ ತೋರಣಗಟ್ಟಿ ಹೇಳಿದರು.

ರವಿವಾರ ದಿ. 23ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಪ್ರಭು ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ ವಾರದ ಸತ್ಸಂಗ ಮತ್ತು ಪ್ರತಿಷ್ಠಾನದ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂಜಾನೆಯ ಬಿಸಿಲು ಹಿತಕರವಾಗಿದ್ದು ಮಧ್ಯಾಹ್ನದ ಬಿಸಿಲು ದೇಹಕ್ಕೆ ಅಹಿತವಾಗುವಂತೆ ಇದೀಗ ಪ್ರಾರ್ಥನೆ ಸತ್ಸಂಗ ಆರಂಭದಲ್ಲಿ ಒಳ್ಳೆಯದನಿಸಿ ಅದನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ಸತ್ಸಂಗಕ್ಕೆ ಅರ್ಥ ಬಂದು ಏನನ್ನಾದರೂ ಒಳ್ಳೆಯದನ್ನು ಸಾಧಿಸಬಹುದು. ಹಿಂದೆ ಬಂದದ್ದು ಈಗ ಇದ್ದದ್ದು ಮುಂದೆ ಆಗುವುದನ್ನು ಅರಿತು ನಾವು ಬದುಕಬೇಕು. ಶರಣರ ವಚನದ ಸಾರವೇ ಈಗಿನ ಜೀವನವಾಗಿದೆ. ಅದಕ್ಕೆ ನುಡಿದಂತೆ ನಡೆಯಬೇಕು ಎಂದರು. 

ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ  ಡಾ. ನಾನಾ ಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸ್ವಯಂಸೇವಕ ರಾಹುಲ ಪರೀಟ ಮಾತನಾಡಿ ಡಾ.                ನಾನಾಸಾಹೇಬ ಪ್ರತಿಷ್ಠಾನವು ಸಾವಿರಾರು ಸ್ವಯಂಸೇವಕ ಯುವಕರ ವತಿಯಿಂದ ಸ್ವಯಂ ಪ್ರೇರಣೆಯಿಂದ ಸಸಿ ನೆಡುವುದು ಅವುಗಳನ್ನು ಬೆಳೆಸುವುದು, ರಕ್ತದಾನ ಶಿಬಿರ, ಮಳೆ ನೀರು ಸಂಗ್ರಹಣಾ ಯೋಜನೆ, ಶಾಲೆಗಳ ಪರಿಸರ ಅಭಿವೃದ್ಧಿ, ಬೋರ್ ವೆಲ್ ಗಳ ನೀರಿನ ಪ್ರಮಾಣ ಹೆಚ್ಚಿಸುವ ಯೋಜನೆ, ಸ್ಮಶಾನಗಳ ಸ್ವಚ್ಛತೆ ಹೀಗೆ ಸದ್ದಿಲ್ಲದೆ  ದೇಶದಾದ್ಯಂತ ಅನೇಕ ಹಳ್ಳಿ ನಗರಗಳಲ್ಲಿ  ತನ್ನದೇ ಆದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾಗಿದೆ. ಸಮಾಜದಲ್ಲಿ ಬದುಕಿರುವ ನಾವು ನಾನು ದೇಶಕ್ಕಾಗಿ ಏನನ್ನಾದರೂ ಕೊಡಬೇಕು ಎನ್ನುವ ಮನೋಭಾವದಿಂದ ಮುಂದುವರೆದರೆ ದೇಶವನ್ನು ಮಾದರಿಯಾಗಿ ಕಟ್ಟಬಹುದು. ನಮ್ಮ ಸೇವಾ ಪ್ರತಿಷ್ಠಾನದ ಲಾಭ ಪಡೆಯುವುದರ ಜೊತೆಗೆ ಎಲ್ಲ ಸಮಾಜದವರು ಸಹ ಕೈಜೋಡಿಸಿ ಮುನ್ನಡೆಯೋಣ ಎಂದು  ಪ್ರತಿಷ್ಠಾನದ ಸಾಮಾಜಿಕ ಅರಿವು ಕಾರ್ಯಕ್ರಮಗಳನ್ನು ವಿವರಿಸಿದರು. 

ಇದೇ ಸಂದರ್ಭದಲ್ಲಿ  ಪ್ರತಿಷ್ಠಾನದ ಶಂಕರ ದೇವರಕರ, ದೇವರಾಜ ಘೋಡಕೆ ಮತ್ತು ಶಿಕ್ಷಕಿ ಸುಶೀಲಾ ಗುರವ ಅವರನ್ನು ಲಿಂಗಾಯತ ಸಂಘಟನೆ ವತಿಯಿಂದ ಸತ್ಕರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಈರಣ್ಣದೇಯನ್ನವರ ವಹಿಸಿದ್ದರು.ನ್ಯಾಯವಾದಿ ಲಕ್ಷ್ಮಿಕಾಂತ ಹೂಗಾರ, ಶ್ರೀಧರ ಗುರವ, ಸಚಿನ ಗುರವ,ಭರಮಪ್ಪ ಜೇವಣಿ,ಬಸವರಾಜ ಕರಡಿಮಠ ಸತೀಶ ಪಾಟೀಲ, ರಮೇಶ ಕಳಸನ್ನವರ, , ಎಂ ವೈ ಮೆಣಸಿನಕಾಯಿ ಶಿವಾನಂದ ತಲ್ಲೂರ, ಬಾಬು ತಿಗಡಿ,ದೊಡ್ಡ ಗೌಡ ಪಾಟೀಲ, ಶಾಂತಮ್ಮ ತಿಗಡಿ ದಾಕ್ಷಾಯಿಣಿ ಪೂಜಾರ, ದೀಪಾ ಪಾಟೀಲ, ಶ್ರೀದೇವಿ ನರಗುಂದ ಸೇರಿದಂತೆ ಶರಣರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ವಿ. ಕೆ ಪಾಟೀಲ ವಚನ ವಿಶ್ಲೇಷಣೆ ಮಾಡಿದರು  ಸುರೇಶ ನರಗುಂದ ನಿರೂಪಿಸಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group