ವಚನ ಪರಿಮಳ ಜಗದ್ವ್ಯಾಪಿ ಹಬ್ಬಲಿ ಶರಣರ ಚರಿತ್ರೆಗಳು ಬದುಕಿಗೆ ದಾರಿದೀಪವಾಗಲಿ – ಬಸಲಿಂಗ ಶ್ರೀಗಳು

Must Read

ಬೆಳಗಾವಿ – ವಚನ ಪರಿಮಳ ಜಗದ್ವ್ಯಾಪಿ ಹಬ್ಬಲಿ  ಶರಣರ ಚರಿತ್ರೆಗಳು ಬದುಕಿಗೆ ದಾರಿದೀಪವಾಗಲಿ ಎಂದು ಬೈಲಹೊಂಗಲ ರುದ್ರಾಕ್ಷಿಮಠದ  ಬಸಲಿಂಗ ಶ್ರೀಗಳು ಹೇಳಿದರು.

ಅವರು ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ವರ್ಷಾಚರಣೆ ಶ್ರಾವಣ ಮಾಸದ ವಿಶೇಷ ಪ್ರವಚನ ಮಹಾತ್ಮರ ಚರಿತಾಮೃತ, ಫ ಗು ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವ ಒಂದು ನೂರು ವಚನೋತ್ಸವ  ಮುಂದುವರಿಯುವ ಭಾಗ -2 ಚೆನ್ನಬಸವಣ್ಣನವರ ವಚನ ಚಿಂತನೆಯ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಬೆಳಗಾವಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ವೀರಣ್ಣ ದಯಣ್ಣನವರ ಉದ್ಘಾಟಿಸಿ ಬಸವ ತತ್ವ ನುಡಿಯಾಗದೆ ನಡೆಯಾಗಲಿ ಎಂದರು.

ರಾಮಗುಂಡಿ ಅವರಿಂದ ಮಹಾತ್ಮರ ಚರಿತಾಮೃತ ಪ್ರವಚನ ಗೀತಾ ಸೊಪ್ಪಡ್ಲ ಇವರಿಂದ ವಚನ  ಚಿಂತನೆ ನಡೆಯಿತು. ಮಲ್ಲೇಶಣ್ಣಾ ಬೋಳನ್ನವರ ದುಂಡಯ್ಯ ಕುಲಕರ್ಣಿ ರಾಮಲಿಂಗ ಕಾಡನ್ನವರ ನಾಗನಗೌಡ ಪಾಟೀಲ ಗೌರಾದೇವಿ ತಾಳಿಕೋಟಿಮಠ ಗೀತಾ ಬೇವಿನಗಿಡದ ಕಲಾವತಿ ಕಡಕೋಳ ಗೀತಾ ಅರಳಿಕಟ್ಟಿ  ಅನುರಾಧ ಕರಡಿಗುದ್ದಿ ಪಾರ್ವತಿ ಕುಲಕರ್ಣಿ ವೀರಭದ್ರಪ್ಪ ಕಾಪಸೆ  ಮುಕ್ತಾಯಕ್ಕ ಅಜಗಣ್ಣ ಬಳಗ ಇದ್ದರು. ಸುವಾಸಿನಿ ಸಿಳ್ಳಿ ಸ್ವಾಗತಿಸಿದರು ಸುವರ್ಣಾ ಬಿಜಗುಪ್ಪಿ ವಂದಿಸಿದರು ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು ಉದ್ಯಮಿ ದಂಪತಿಗಳಾದ ನಿರ್ಮಲ ಜಗದೀಶ್ ಮೆಟಗುಡ್ಡ ಧ್ವಜಾರೋಹಣ ನೆರವೇರಿಸಿದರು ರಾಜೇಶ್ವರಿ ದ್ಯಾಮನಗೌಡರ ನಿರೂಪಿಸಿದರು.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group