spot_img
spot_img

ಸುವರ್ಣಾಕ್ಷರಗಳಿಂದ ಬರೆದಿಡುವ ದಿನ – ಶಾಸಕ ಬಾಲಚಂದ್ರ ಜಾರಕಿಹೊಳಿ ಬಣ್ಣನೆ

Must Read

spot_img
- Advertisement -

ಮೂಡಲಗಿ– ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದ್ದು,ಸತತ ಐನೂರು ವರ್ಷಗಳ ಹೋರಾಟದ ನಂತರ ಭವ್ಯವಾದ ರಾಮ ಮಂದಿರದಲ್ಲಿ ಶ್ರೀ ರಾಮನು ವಿರಾಜಮಾನನಾಗಿದ್ದಾನೆ ಎಂದು ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಸೋಮವಾರದಂದು ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಪಟ್ಟಣದ ರಾಮ ಮಂದಿರ ಮತ್ತು ಮಾರುತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅವರು, ಇಂದು ಭಾರತದ ಚರಿತ್ರೆಯಲ್ಲಿಯೇ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ಐತಿಹಾಸಿಕ ದಿನವಾಗಿದೆ ಎಂದು ಬಣ್ಣಿಸಿದರು.

ನಮ್ಮ ದೇಶದ ಇತಿಹಾಸದಲ್ಲಿ ಅತೀ ಮಹತ್ವದ ಭಕ್ತಿ ಭಾವದ ದಿವಸ. ಹೊಸ ಇತಿಹಾಸ ಸೃಷ್ಟಿಯಾಗಿರುವ ಐತಿಹಾಸಿಕ ಕ್ಷಣವಾಗಿದೆ. ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ದಿನ ಎಂದು ಅವರು ತಿಳಿಸಿದರು.

- Advertisement -

ಶ್ರದ್ಧಾ ಭಕ್ತಿಯಿಂದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಮರ್ಥ್ಯದಿಂದ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಯಾಗಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಹಲವು ಮಹನೀಯರು ತ್ಯಾಗ, ಹೋರಾಟಗಳನ್ನು ಮಾಡಿದ್ದಾರೆ. ಕೋಟ್ಯಂತರ ರಾಮಭಕ್ತರ ಕನಸು ಇಂದು

ಅಯೋಧ್ಯೆಯಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಮೂಲಕ ಈಡೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಇಂದು ಜಗತ್ತಿನಾದ್ಯಂತ ಜನರು ಕಣ್ತುಂಬಿ ಸಂಭ್ರಮಿಸುತ್ತಿದ್ದಾರೆ. ಇಡೀ ಜಗತ್ತೇ ನಮ್ಮ ಭಾರತದತ್ತ ಮುಖ ಮಾಡಿದೆ. ಇಡೀ ದೇಶವೇ ಹೆಮ್ಮೆಪಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ದೀಪಾವಳಿ ಹಬ್ಬದಂತೆ ದೇಶದ ಜನರು ಶ್ರೀರಾಮನ ಉತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ದೇಗುಲದ ಲೋಕಾರ್ಪಣೆ ಆಗಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಆಗುವ ಸಮಯದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಾಲ್ಲೂಕಿನ ಸಂಗನಕೇರಿ ಪಟ್ಟಣದ ಬಲಭೀಮ ದೇವಸ್ಥಾನದಲ್ಲಿ  ಪೂಜೆಗೆ ಅಣಿಯಾದರು. 

- Advertisement -

ರಾಮ ಭಕ್ತರಿಂದ ಜಯ ಶ್ರೀ ರಾಮ ಘೋಷಣೆಗಳು ಮೊಳಗಿದವು. ನಂತರ ಕಲ್ಲೋಳಿ ಪಟ್ಟಣದ ಮಾರುತಿ ದೇವಸ್ಥಾನಕ್ಕೆ ತೆರಳಿದ ಅವರು, ಬಸ್ ನಿಲ್ದಾಣದ ಹತ್ತಿರ ಅಯೋಧ್ಯೆ ಮಾದರಿಯಲ್ಲಿ ನಿರ್ಮಿಸಲಾಗಿರುವ ರಾಮನ ಮಂಟಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ರಾಮ ಮಂದಿರಕ್ಕೆ ತೆರಳಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಾಜ ಬಾಂಧವರಿಂದ ಸತ್ಕಾರ ಸ್ವೀಕರಿಸಿದರು.

ಸಿಎ ಸೈದಪ್ಪ ಗದಾಡಿ, ಸುಭಾಸ ಕುರಬೇಟ, ಬಸವಂತ ದಾಸನವರ, ಮಲ್ಲಪ್ಪ ಹೆಬ್ಬಾಳ, ವಸಂತ ತಹಶೀಲ್ದಾರ, ಸದಾಶಿವ ಕಲಾಲ, ದತ್ತು ಕಲಾಲ, ಮನೋಹರ ಕಲಾಲ, ಮಹಾದೇವ ಮದಭಾವಿ, ರಾಮಣ್ಣ ಹಡಗಿನಾಳ, ಭೀಮಶಿ ಗೋರೋಶಿ, ರಮೇಶ ಕಲಾಲ, ಸಿದ್ದು ಉಳ್ಳಾಗಡ್ಡಿ, ಶ್ರೀಕಾಂತ ಸವಸುದ್ದಿ, ಆನಂದ ಕಲಾಲ, ಮೋಹನ ಗಾಡಿವಡ್ಡರ, ಅಶೋಕ ಮಕ್ಕಳಗೇರಿ, ಬಸವರಾಜ ಮಾಳೆದವರ, ಭೀಮಶಿ ಮಾಳೇದವರ, ರಮೇಶ ಸಂಪಗಾಂವಿ, ಹಣಮಂತ ಚಿಪ್ಪಲಕಟ್ಟಿ, ನಾರಾಯಣ ಉಪ್ಪಾರಟ್ಟಿ, ಲೋಹಿತ ಕಲಾಲ, ಸುರೇಶ ಕಬ್ಬೂರ, ಪಟ್ಟಣ ಪಂಚಾಯತಿ ಸದಸ್ಯರು, ಪ್ರಮುಖರು, ಸಂಘ ಪರಿವಾರದ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಗುಬ್ಬೆವಾಡ  ಚೌಡೇಶ್ವರಿ ದೇವಸ್ಥಾನಲ್ಲಿ ನರೇಗಾ ದಿನಾಚರಣೆ

ಸಿಂದಗಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ರಲ್ಲಿ ಜಾರಿಗೆ ಬಂದಿತು ಹಾಗೂ ಇದು ಕೇವಲ ಒಂದು ಯೋಜನೆ ಆಗದೆ ಕಾಯ್ದೆಯಾಗಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group